ಮಡಿಕೇರಿ, ಮಾ. ೧೦: ಆಧುನಿಕ ಕಾಲದ ಭರಾಟೆಯಲ್ಲಿ ನಮ್ಮ ರಂಗಭೂಮಿಯ ಕಲೆಗಳ ವಿನಾಶಕ್ಕೆ ನಾವು ಕಾರಣರಾಗದೆ ಅದನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಸಂತ ಅನ್ನಮ್ಮ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಪ್ರತಿಮಾ ಹರೀಶ್ ರೈ ಅವರು ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮಡಿಕೇರಿ ಪತ್ರಿಕಾ ಭವನದಲ್ಲಿ ಮಕ್ಕಳ ಸಾಹಿತಿ ನಾ. ಡಿಸೋಜ ಅವರ ದತ್ತಿ ಕಾರ್ಯಕ್ರಮದ ಅಂಗವಾಗಿ ಫ್ರೌಡ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಲಿತ ಕಲೆಗಳಲ್ಲಿ ರಂಗ ಭೂಮಿಯ ಕಲಾ ಪ್ರಕಾರಗಳು ಪೂರ್ವಿಕರಿಂದ ನೆಲೆಯೂರಿ ಬೆಳೆದಿದ್ದು, ಚಲನಚಿತ್ರಗಳು ಆರಂಭವಾಗುವುದಕ್ಕೆ ಮೊದಲೇ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಸಮಾಜಕ್ಕೆ ಮಾಹಿತಿ ನೀಡುತ್ತಿದ್ದ ಕಲಾವಿದರ ಪ್ರತಿಭೆ ಅದ್ಭುತವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ಮಾತನಾಡಿ, ನಾಟಕ ಕಲೆಯ ಅಭಿರುಚಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ನಾವುಗಳು ಮುಂದಾದಲ್ಲಿ ಉತ್ತಮ ತರಬೇತಿಯೊಂದಿಗೆ ಒಳ್ಳೆಯ ಕಲಾವಿದರುಗಳನ್ನು ಬೆಳೆಸಿ ಹೊರಹೊಮ್ಮಲು ಮಡಿಕೇರಿ, ಮಾ. ೧೦: ಆಧುನಿಕ ಕಾಲದ ಭರಾಟೆಯಲ್ಲಿ ನಮ್ಮ ರಂಗಭೂಮಿಯ ಕಲೆಗಳ ವಿನಾಶಕ್ಕೆ ನಾವು ಕಾರಣರಾಗದೆ ಅದನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಸಂತ ಅನ್ನಮ್ಮ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಪ್ರತಿಮಾ ಹರೀಶ್ ರೈ ಅವರು ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮಡಿಕೇರಿ ಪತ್ರಿಕಾ ಭವನದಲ್ಲಿ ಮಕ್ಕಳ ಸಾಹಿತಿ ನಾ. ಡಿಸೋಜ ಅವರ ದತ್ತಿ ಕಾರ್ಯಕ್ರಮದ ಅಂಗವಾಗಿ ಫ್ರೌಡ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲಲಿತ ಕಲೆಗಳಲ್ಲಿ ರಂಗ ಭೂಮಿಯ ಕಲಾ ಪ್ರಕಾರಗಳು ಪೂರ್ವಿಕರಿಂದ ನೆಲೆಯೂರಿ ಬೆಳೆದಿದ್ದು, ಚಲನಚಿತ್ರಗಳು ಆರಂಭವಾಗುವುದಕ್ಕೆ ಮೊದಲೇ ನಾಟಕಗಳಲ್ಲಿ ಅಭಿನಯಿಸುವ ಮೂಲಕ ಸಮಾಜಕ್ಕೆ ಮಾಹಿತಿ ನೀಡುತ್ತಿದ್ದ ಕಲಾವಿದರ ಪ್ರತಿಭೆ ಅದ್ಭುತವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹ್ಮದ್ ಮಾತನಾಡಿ, ನಾಟಕ ಕಲೆಯ ಅಭಿರುಚಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ನಾವುಗಳು ಮುಂದಾದಲ್ಲಿ ಉತ್ತಮ ತರಬೇತಿಯೊಂದಿಗೆ ಒಳ್ಳೆಯ ಕಲಾವಿದರುಗಳನ್ನು ಬೆಳೆಸಿ ಹೊರಹೊಮ್ಮಲು