ಗುಡ್ಡೆಹೊಸೂರು, ಮಾ. ೬: ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಅಪ ಘಾತದಲ್ಲಿ ಇಬ್ಬರು ದುರ್ಮ ರಣ ಕ್ಕೀಡಾಗಿ ರುವ ಘಟನೆ ಗುಡ್ಡೆಹೊಸೂರು ಸಮೀಪದ ಸಿದ್ದಾಪುರ ರಸ್ತೆಯ ತಿರುವಿನಲ್ಲಿ ನಡೆದಿದೆ. ಹೊಸಪಟ್ಟಣ ನಿವಾಸಿ ಕುಶಾಲ ನಗರದ ಐ.ಸಿ.ಡಿ.ಸಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಿಶ್ವಂತ್ (೨೧) ಮತ್ತು ರಾಣಿಗೇಟ್ ನಿವಾಸಿ ಶಿವಕುಮಾರ್ (೨೦) ಮೃತ ದುರ್ದೈವಿಗಳು. ತಾ. ೫ರ ತಡರಾತ್ರಿ ಎರಡು ಬೈಕ್‌ಗಳ ಮಧ್ಯ ಅಪÀಘಾತ ನಡೆದು ಸ್ಥಳದಲ್ಲಿಯೇ ಒಬ್ಬ ಮೃತನಾದರೆ ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಸಾವನ್ನಪ್ಪಿದ್ದಾರೆೆ. ಮೃತ ಶಿವಕುಮಾರ್ ಜೊತೆಗಿದ್ದ ಸಿದ್ದೇಶ್ (೨೧) ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗುಡ್ಡೆಹೊಸೂರಿನಿಂದ ರಾಣಿ ಗೇಟ್‌ನ ತನ್ನ ಮನೆಗೆ ತೆರಳುತ್ತಿದ್ದ ಶಿವಕುಮಾರ್ ಚಾಲನೆ ಮಾಡುತ್ತಿದ್ದ ಬೈಕ್‌ನಲ್ಲಿ ಹೆಡ್‌ಲೈಟ್ ಇರಲಿಲ್ಲ. ನಿಶ್ವಂತ್ ಎಂದಿನAತೆ ತನ್ನ ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭ ಅಪಘಾತ ನಡೆದಿದೆ. ತೀವ್ರ ರಕ್ತಸ್ರಾವಗೊಂಡ ನಿಶ್ವಂತ್ ಸ್ಥಳದಲ್ಲಿಯೇ ಸಾವಿಗೀಡಾದರೆ, ಶಿವಕುಮಾರ್‌ನನ್ನು ಕುಶಾಲನಗರ ಆಸ್ಪತ್ರೆಗೆ ರವಾನಿಸುವ ಸಂದರ್ಭ ಮಾರ್ಗಮಧ್ಯೆ ಅಸುನೀಗಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಡಿವೈಎಸ್‌ಪಿ ಗಂಗಾಧರಪ್ಪ, ವೃತ್ತ ನಿರೀಕ್ಷಕ ರಾಜೇಶ್ ಕೊಟ್ಯಾನ್, ಠಾಣಾಧಿಕಾರಿಗಳಾದ ಪ್ರಕಾಶ್ ಮತ್ತು ಕುಸುಮ ಹಾಜರಿದ್ದರು. - ಗಣೇಶ್ ಕುಡೆಕ್ಕಲ್