ಮಡಿಕೇರಿ, ಮಾ. ೬: ಮಡಿಕೇರಿಗೆ ಆಗಮಿಸಿದ ಶ್ರೀ ಆದಿಶಂಕ ರಾಚಾರ್ಯರ ಪಾದು ಕೆಗಳನ್ನು ಸ್ವಾಗತಿಸಿಕೊಂಡು ವಿಶೇಷ ಪೂಜೆಯನ್ನು ಜಿಲ್ಲಾ ಹವ್ಯಕ ಸಮಾಜ ಮತ್ತು ವಿಷ್ಣು ಗುಪ್ತ ವಿಶ್ವ ವಿದ್ಯಾಪೀಠದ ವತಿಯಿಂದ ಸಲ್ಲಿಸಲಾಯಿತು.

ರಾಮಚಂದ್ರಾಪುರ ಮಠದ ಸಂಸ್ಥಾಪನಾ ಕಾಲದಲ್ಲಿ ಅಂದಿನ ಪೀಠಾಧಿಪತಿಯಾಗಿದ್ದ ಶ್ರೀವಿದ್ಯಾನಂ ದಚಾರ್ಯರಿಗೆ ನೀಡಿದ್ದ ಪಾದುಕೆಗಳನ್ನು ನಗರದ ಲಕ್ಷಿö್ಮ ನರಸಿಂಹ ಕಲ್ಯಾಣ ಮಂಟಪದ ಶತಮಾನ ಭವನದಲ್ಲಿ ತಂದು ಪೂಜಿಸಲಾಯಿತು. ರಾಜಪೀಠದ ಅಂಗವಾಗಿ ಶರಣ ಪಾದುಕೆಗಳನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ನಡೆಸಲಾಯಿತು. ಕಾನಕೃಷ್ಣ ಭಟ್, ಕೆ. ಶಾಮ ಅವರು ಪಾದುಕೆ ಪೂಜೆ ನೆರವೇರಿಸಿದರು. ಹವ್ಯಕ ಸಮಾಜದ ಅಧ್ಯಕ್ಷ ಕುಮಾರ್ ಸುಬ್ರಮಣ್ಯ ಅವರು ಭಿಕ್ಷಾಂಗ ಸೇವೆ ಅರ್ಪಿಸಿದರು.

ಮಿತ್ತೂರು ಈಶ್ವರ ಭಟ್ ಹಾಗೂ ರಮೇಶ್ ಹೊಳ್ಳ ಅವರುಗಳ ಮನೆಗಳಲ್ಲಿ ಸ್ವರ್ಣ ಪಾದುಕೆ ಪೂಜೆ ನಡೆಯಿತು. ಲೋಕ ಕಲ್ಯಾಣಾರ್ಥ ೧೦೮ ಸ್ವರ್ಣ ನಾಣ್ಯ ಅಷ್ಟೋತ್ತರ ಪೂಜೆ, ಅಷ್ಟಾವಧಾನ ಸೇವೆಯನ್ನು ಮಾಡಲಾಯಿತು. ಈ ಸಂದರ್ಭ ವಿಷ್ಣು ಗುಪ್ತ ವಿಶ್ವ ವಿದ್ಯಾಪೀಠದ ಜಿಲ್ಲಾ ಸಮಿತಿಯ ಅಧ್ಯಕ್ಷ ಮಿತ್ತೂರು ಈಶ್ವರ ಭಟ್, ಕಾರ್ಯದರ್ಶಿ ಶ್ರೀಪತಿ, ಖಜಾಂಜಿ ವನಮಾಲಾ ಭಟ್, ಉಪಾಧ್ಯಕ್ಷ ಎಂ.ಎನ್. ಹರೀಶ್, ಕಾರ್ಯದರ್ಶಿ ಡಾ. ರಾಜಾರಾಮ್, ಹವ್ಯಕ ಸಮಾಜದ ಉಪಾಧ್ಯಕ್ಷ ಹುಲಿತಾಳ ಉದಯ ಕುಮಾರ್ ಸೇರಿದಂತೆ ಗುರಿಕಾರರು, ಸಮಾಜ ಬಾಂಧವರು ಭಾಗವಹಿಸಿದ್ದರು.