ಮಡಿಕೇರಿ, ಮಾ. ೬: ತುಮಕೂರು-ಶಿರಾ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಜಿಲ್ಲೆಯ ಯುವಕನೋರ್ವ ದುರ್ಮರಣಕ್ಕೀಡಾದ ಘಟನೆ ನಡೆದಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ಹಾಲುಗುಂದ ನಿವಾಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಅಪ್ಪಾರಂಡ ಸುರ ಹಾಗೂ ರೇಣು ದಂಪತಿ ಪುತ್ರ ಯುವಹಾಕಿ ಆಟಗಾರ ಸುಕನ್ ಉತ್ತಪ್ಪ (೨೬) ಮೃತ ದುರ್ದೈವಿ. ಜೊತೆಯಲ್ಲಿದ್ದ ಹಾಲುಗುಂದ ಗ್ರಾಮದ ಪಂದಿಕAಡ ಸುಬ್ರಮಣಿ ಹಾಗೂ ಯಶೋಧ ದಂಪತಿ ಪುತ್ರ ಉತ್ತಪ್ಪ ಅವರ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸುಕುನ್ ಹಾಗೂ ಉತ್ತಪ್ಪ ಒಂದೇ ಬೈಕ್ನಲ್ಲಿ ಬೆಂಗಳೂರಿನಿAದ ಗೋವಾಕ್ಕೆ ತೆರಳಿ ಪ್ರವಾಸ ಮುಗಿಸಿ ತುಮಕೂರು ಮಾರ್ಗವಾಗಿ ಬೆಂಗಳೂರಿಗೆ ಹಿಂದಿರುಗುವ ಸಂದರ್ಭ ಮೋಟರ್ ಬೈಕ್ (ಕೆಎ-೧೨-ವಿ-೦೯೩೦) ನಿಯಂತ್ರಣ ಕಳೆದುಕೊಂಡ ಪರಿಣಾಮ ಘಟನೆ ಸಂಭವಿಸಿದ್ದು ತೀವ್ರ ಗಾಯಗೊಂಡ ಸುಕುನ್ನನ್ನು ಆಸ್ಪತ್ರೆ ಸಾಗಿಸುವ ಸಂದರ್ಭ ಕೊನೆಯುಸಿರೆಳೆದಿದ್ದಾನೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.