ಕಾಯಪಂಡ ಶಶಿ ಸೋಮಯ್ಯ
ಮಡಿಕೇರಿ, ಫೆ. ೨೮: ಕೊಡವ ಕುಟುಂಬಗಳ ನಡುವಿನ ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ ಖ್ಯಾತಿಯ ವಾರ್ಷಿಕ ಹಾಕಿ ನಮ್ಮೆ ಸನ್ನಿಹಿತವಾಗುತ್ತಿದೆ. ೨೪ನೆಯ ವರ್ಷದ ಹಾಕಿ ಉತ್ಸವವನ್ನು ನಾಲ್‌ನಾಡ್ ವ್ಯಾಪ್ತಿಯ ನಾಪೋಕ್ಲು ಮೂಲದವರಾದ ಕುಂಡ್ಯೋಳAಡ ಕುಟುಂಬಸ್ಥರು ಈ ಬಾರಿ ಆಯೋಜಿಸುತ್ತಿದ್ದಾರೆ.
ಹಾಕಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಸಿಗುವ ಪ್ರದೇಶಗಳಲ್ಲಿ ಒಂದಾದ ನಾಪೋಕ್ಲುವಿನಲ್ಲಿ ಸತತ ನಾಲ್ಕನೇ ಬಾರಿಗೆ ಮತ್ತೆ ಹಾಕಿ ಕಲರವ ಆರಂಭಗೊಳ್ಳಲಿದೆ. ಈ ಹಿಂದೆ ೨೦೦೩ರಲ್ಲಿ ಕಲಿಯಂಡ ಕಪ್, ೨೦೧೮ರಲ್ಲಿ ಕುಲ್ಲೇಟಿರ ಕಪ್ ಹಾಕಿ ಉತ್ಸವ ನಾಪೋಕ್ಲುವಿನಲ್ಲಿ ಜರುಗಿತ್ತು. ೨೦೧೯ರಿಂದ ಕಾರಣಾಂತರದಿAದ ನಾಲ್ಕು ವರ್ಷ (ಪ್ರಾಕೃತಿಕ ವಿಕೋಪ-ಕೊರೊನಾ ವಿಚಾರ) ಹಾಕಿ ಉತ್ಸವ ನಡೆದಿರಲಿಲ್ಲ. ೨೦೨೩ರಲ್ಲಿ ಮತ್ತೆ ವಿಶ್ವಖ್ಯಾತಿ ಪಡೆದಿರುವ ಈ ಹಾಕಿ ಉತ್ಸವಕ್ಕೆ ಮರುಚಾಲನೆ ದೊರೆತಿತ್ತು. ಕಳೆದ ವರ್ಷ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ನಾಲ್ಕು ವರ್ಷಗಳ ಅಂತರದ ಬಳಿಕ ಹಾಕಿ ನಮ್ಮೆಗೆ ಅಪ್ಪಚೆಟ್ಟೋಳಂಡ ಕಪ್‌ನ ಮೂಲಕ ವೈಭವದ ಮರುಚಾಲನೆ ನೀಡಿದ್ದು, ಈ ಪಂದ್ಯಾವಳಿಯೂ ನಾಪೋಕ್ಲುವಿನಲ್ಲೇ ಆಯೋಜನೆಗೊಂಡಿತ್ತು. ಇದೀಗ ೨೪ನೇ ವರ್ಷದ ಹಾಕಿ ಪಂದ್ಯಾವಳಿಯನ್ನು ಕುಂಡ್ಯೋಳAಡ ಕುಟುಂಬಸ್ಥರು ನಾಪೋಕ್ಲುವಿನಲ್ಲಿಯೇ ನಡೆಸಲು ಅಗತ್ಯ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಇದು ಸೇರಿದಂತೆ ಒಟ್ಟು ಐದನೆಯ ಬಾರಿಗೆ ನಾಪೋಕ್ಲುವಿನಲ್ಲಿ ಹಾಕಿ ಉತ್ಸವ ನಡೆದಂತಾಗಲಿದ್ದು ಹಾಕಿ ಕಲರವಕ್ಕೆ ದಿನಗಣನೆ ಆರಂಭಗೊAಡಿದೆ.
ಮಾರ್ಚ್ ೩೦ ರಿಂದ ಕುಂಡ್ಯೋಳAಡ ಕಪ್ - ೨೦೨೪
ಹಾಕಿ ಉತ್ಸವ ಜವಾಬ್ದಾರಿ ವಹಿಸಿರುವ ಆಯೋಜಕ ಕುಟುಂಬದವರು, ಕೊಡವ ಹಾಕಿ ಅಕಾಡೆಮಿಯ ಸಹಕಾರದೊಂದಿಗೆ ಅಗತ್ಯ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಉತ್ಸವದ ದಿನಾಂಕವೂ ಈಗಾಗಲೇ ನಿಗದಿಗೊಂಡಿದೆ. ಮಾರ್ಚ್ ೩೦ ರಂದು ಕುಂಡ್ಯೋಳAಡ ಕಪ್- ೨೦೨೪ಕ್ಕೆ ಚಾಲನೆ ಸಿಗಲಿದ್ದು ಏಪ್ರಿಲ್ ೨೮ ರಂದು ಅದ್ಧೂರಿಯ ಕಾರ್ಯಕ್ರಮಗಳೊಂದಿಗೆ ಫೈನಲ್ ಪಂದ್ಯಾಟ ಜರುಗಲಿದೆ.
ಈ ಉತ್ಸವದಲ್ಲಿ ಪಾಲ್ಗೊಳ್ಳುವ ಕುಟುಂಬ ತಂಡಗಳ ಹೆಸರು ನೋಂದಣಿ ಪ್ರಕ್ರಿಯೆ ಕೂಡ ಈಗಾಗಲೇ ಆರಂಭಗೊAಡಿದ್ದು, ಇದಕ್ಕೆ ಜಿಲ್ಲೆಯ ಹಲವೆಡೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಉತ್ಸವದ ಯಶಸ್ಸಿಗಾಗಿ ಕುಟುಂಬಸ್ಥರು ಹಾಕಿ ಉತ್ಸವ ಸಮಿತಿ ಸೇರಿದಂತೆ ಹಲವು ಉಪಸಮಿತಿಗಳನ್ನು (ಮೊದಲ ಪುಟದಿಂದ) ರಚಿಸಿದ್ದು, ನಿರಂತರವಾಗಿ ಸಭೆಗಳನ್ನೂ ನಡೆಸಲಾಗುತ್ತಿದೆ. ಕಳೆದ ವರ್ಷ ಅಪ್ಪಚೆಟ್ಟೋಳಂಡ ಕಪ್‌ನಲ್ಲಿ ೩೩೬ ತಂಡ ಪಾಲ್ಗೊಂಡಿದ್ದು ಪ್ರಸಕ್ತ ವರ್ಷ ೪೦೦ ಕುಟುಂಬ ತಂಡಗಳು ಪಾಲ್ಗೊಳ್ಳುವಂತೆ ಮಾಡಲು ಗುರಿ ಹೊಂದಲಾಗಿದೆ ಎಂದು ಕುಟುಂಬದ ಪ್ರಮುಖರಲ್ಲಿ ಒಬ್ಬರಾಗಿರುವ ಉದ್ಯಮಿ ದಿನೇಶ್ ಕಾರ್ಯಪ್ಪ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ.
ಹಾಕಿ ಪಂದ್ಯಾವಳಿಯನ್ನು ಕೇವಲ ಒಂದು ಪಂದ್ಯಾಟದ ಮಾದರಿಯಲ್ಲಿ ನಡೆಸದೆ ಜಾತ್ರೆಯ ಮಾದರಿಯಲ್ಲಿ ಹಾಕಿ ಕಾರ್ನಿವಾಲ್ ವಿವಿಧ ಸಮಾಜಮುಖಿ ಕಾರ್ಯಕ್ರಮ, ಮನರಂಜನಾ ಕಾರ್ಯಕ್ರಮಗಳೊಂದಿಗೆ ನಡೆಸುವ ಚಿಂತನೆ ನಡೆಸಲಾಗಿದೆ ಎಂದು ಅವರು ಅಭಿಪ್ರಾಯ ಹಂಚಿಕೊAಡಿದ್ದಾರೆ.
ನಾಪೋಕ್ಲು ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಸೇರಿದಂತೆ ಮೂರು ಮೈದಾನಗಳಲ್ಲಿ ಪಂದ್ಯ ಜರುಗಲಿವೆ.
ಮೈದಾನ ದುರಸ್ತಿ ಕಾರ್ಯಕ್ಕೆ ಚಾಲನೆಯನ್ನು ನೀಡಲಾಗಿದೆ. ಮಾರ್ಚ್ ಮೊದಲ ವಾರದಿಂದ ಗ್ಯಾಲರಿ ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ. ಸುಮಾರು ೨೫ ಸಾವಿರಕ್ಕೂ ಅಧಿಕ ಕ್ರೀಡಾಭಿಮಾನಿಗಳಿಗೆ ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು. ಅಗತ್ಯ ಪ್ರಯೋಜಕತ್ವ ಪಡೆಯುವುದು, ಸರಕಾರದ, ಸಂಘ-ಸAಸ್ಥೆಗಳ ಸಹಕಾರದೊಂದಿಗೆ ಪಂದ್ಯಾವಳಿಯನ್ನು ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಸಲಹೆಗಳನ್ನು ಪಡೆಯಲಾಗುತ್ತಿದೆ. ಇದರೊಂದಿಗೆ ಕುಟುಂಬದಿAದ ವಿವಿಧ ಪ್ರಯತ್ನಗಳು ಮುಂದುವರಿಯುತ್ತಿರುವುದಾಗಿ ಆಯೋಜಕರು ಮಾಹಿತಿ ನೀಡಿದ್ದಾರೆ.