ಮಡಿಕೇರಿ, ಫೆ. ೨೯: ಕೊಡಗು ಪತ್ರಕರ್ತರ ಸಂಘದ ವತಿಯಿಂದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ನೂತನ ಸದಸ್ಯತ್ವಕ್ಕೆ ರೂ. ೭೦೦ ಹಾಗೂ ನವೀಕರಣಕ್ಕೆ ರೂ. ೬೦೦ ಶುಲ್ಕ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ತಾ. ೩೧ ಕೊನೆಯ ದಿನಾಂಕವಾಗಿದೆ. ಸ್ಥಳೀಯ, ಪ್ರಾದೇಶಿಕ, ರಾಜ್ಯ, ರಾಷ್ಟಿçÃಯ ಮಟ್ಟದ ಪತ್ರಿಕೆ ಮತ್ತು ಮಾಧ್ಯಮಗಳು, ವಾರಪತ್ರಿಕೆ, ಪಾಕ್ಷಿಕಗಳು, ವೆಬ್ ನ್ಯೂಸ್ ಸೇರಿದಂತೆ ಅಧಿಕೃತ ಸುದ್ದಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಧಾನ ಸಂಪಾದಕರು, ಸಂಪಾದಕರು, ಉಪ ಸಂಪಾದಕರು, ವರದಿಗಾರರು, ಬಿಡಿ ವರದಿಗಾರರು, ಛಾಯಾಚಿತ್ರಗಾರರು, ಕ್ಯಾಮೆರಾ ಮ್ಯಾನ್‌ಗಳು, ಪ್ರಸರಣಾ ಹಾಗೂ ಜಾಹಿರಾತು ವಿಭಾಗದ ಪ್ರತಿನಿಧಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಪಾದಕರು ಅಥವಾ ಜಿಲ್ಲಾ ವರದಿಗಾರರ ಸಹಿಯೊಂದಿಗೆ ಎರಡು ಭಾವಚಿತ್ರ ಕಡ್ಡಾಯವಾಗಿದ್ದು, ಅರ್ಜಿಗಳಿಗಾಗಿ ೯೭೩೮೯೧೦೮೧೭, ೯೯೪೫೪೧೧೮೨೧, ೯೭೩೧೪೬೯೮೭೧. ೯೯೦೧೬೫೭೨೧೧ ದೂರವಾಣಿಯನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.