ಮಡಿಕೇರಿ, ಫೆ. ೨೮: ಮೇಕೇರಿಯ ಶ್ರೀ ಗೌರಿ ಶಂಕರ ದೇವಾಲಯದಲ್ಲಿ ತಾ.೨೯ ರಿಂದ ಮಾ.೯ ರವರೆಗೆ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದೆ.
ತಾ.೨೯ರಂದು ಬೆಳಿಗ್ಗೆ ೯.೩೦ ಗಂಟೆಗೆ ಧ್ವಜಾರೋಹಣ ನೆರವೇರಲಿದೆ. ಸಂಜೆ ೬.೩೦ ಕ್ಕೆ ಮಡಿಕೇರಿಯ ಶ್ರೀ ವಿಜಯ ವಿನಾಯಕ ದೇವಾಲಯ ಮಹಿಳಾ ಭಜನಾ ತಂಡ ಮತ್ತು ಶ್ರೀ ಗೌರಿಶಂಕರ ದೇವಾಲಯ ಭಜನಾ ಸಮಿತಿಯಿಂದ ಭಜನೆ. ತಾ.೧ ರಂದು ತೊಂಭತ್ತುಮನೆ ಶ್ರೀ ವಿನಾಯಕ ದೇವಾಲಯ ಭಜನಾ ಸಂಘದಿAದ ಭಜನೆ. ತಾ.೨ ರಂದು ಭಾಗಮಂಡಲ ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯಿAದ ಭಜನೆ. ತಾ.೩ ರಂದು ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಸಂಘದಿAದ ಭಜನೆ ತಾ.೪ ರಂದು ಮಡಿಕೇರಿಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯ ಮಹಿಳಾ ಭಜನಾ ಸಮಿತಿಯಿಂದ ಭಜನೆ. ತಾ.೫ ರಂದು ಮಡಿಕೇರಿಯ ಶ್ರೀ ಕೋದಂಡರಾಮ ದೇವಾಲಯ ಮಹಿಳಾ ಭಜನಾ ಸಮಿತಿಯಿಂದ ಭಜನೆ ತಾ.೬ ರಂದು ರವಿ ಭೂತನಕಾಡು ಆದಿಚುಂಚನಗಿರಿ ಮಠ ಮತ್ತು ತಂಡದಿAದ ಭಜನೆ ತಾ.೭ರಂದು ಹೊನ್ನಪ್ಪ ಮತ್ತು ಬಳಗದವರಿಂದ ಭಕ್ತಿ ಲಹರಿ ಕಾರ್ಯಕ್ರಮ ನಡೆಯಲಿದೆ. ತಾ.೮ ರ ಮಹಾಶಿವರಾತ್ರಿ ದಿನದಂದು ಗಣಪತಿ ಹೋಮ, ಮೃತ್ಯುಂಜಯ ಹೋಮ, ಹೊರೆಕಾಣಿಕೆ ಸಮರ್ಪಣೆ, ವಿಶೇಷ ಪೂಜೆ, ರುದ್ರಾಭಿಷೇಕ, ಪ್ರಸಾದ ವಿತರಣೆ ನೆರವೇರಲಿದೆ. ರಾತ್ರಿ ೯ ಗಂಟೆಯ ನಂತರ ಶ್ರೀ ಕಾಶೀವಿಶ್ವನಾಥೇಶ್ವರ, ಬಲಮುರಿ ಶ್ರೀ ಮಹಾಗಣಪತಿ, ಶ್ರೀ ದುರ್ಗಾದೇವಿ, ಶ್ರೀ ರಕ್ತೇಶ್ವರಿ ಕೃಪಾಶ್ರಿತ ಯಕ್ಷಗಾನ ಮಂಡಳಿ, ತಲಕಳ-ಕೊಳಂಬೆ, ಮಂಗಳೂರು ಇವರಿಂದ ಪೌರಾಣಿಕ ಯಕ್ಷಗಾನ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮ ಮೂಡಿ ಬರಲಿದೆ. ತಾ.೯ ರಂದು ಬೆಳಿಗ್ಗೆ ೧೧ ಗಂಟೆಗೆ ಧಾರ್ಮಿಕ ಪ್ರವಚನ, ಮಧ್ಯಾಹ್ನ ೧೨-೩೦ಕ್ಕೆ ಮಹಾಪೂಜೆಯ ನಂತರ ಅನ್ನಸಂತರ್ಪಣೆ ನಡೆಯಲಿದೆ.