ಕುಶಾಲನಗರ, ಫೆ.೨೮: ಕುಶಾಲನಗರ ಮೂಲದ ವ್ಯಕ್ತಿಯೊಬ್ಬರು ದುಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.

ಕುಶಾಲನಗರ ರಸುಲ್ ಬಡಾವಣೆಯ ಅಬ್ದುಲ್ ವಹಾಬ್ (೪೧) ಎಂಬ ವ್ಯಕ್ತಿ ಮಂಗಳವಾರ ರಾತ್ರಿ ಮೃತಪಟ್ಟಿರುವುದಾಗಿ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ದುಬೈನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅವರ ಪತ್ನಿ, ಇಬ್ಬರು ಮಕ್ಕಳು ಕುಶಾಲನಗರದಲ್ಲಿ ನೆಲೆಸಿದ್ದರು. ಕುಶಾಲನಗರದ ಹಿರಿಯ ಶಿಕ್ಷಕಿ ಮೈಮುನ ಎಂಬವರ ಪುತ್ರನಾಗಿದ್ದು ಕೆಲವು ವರ್ಷಗಳ ಹಿಂದೆ ವಹಾಬ್ ತಂದೆ ಸೌದಿ ಅರೇಬಿಯಾದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಮೃತಪಟ್ಟಿದ್ದರು.