ಗೋಣಿಕೊಪ್ಪಲು, ಫೆ. ೨೬: ದ.ಕೊಡಗಿನ ಹುದಿಕೇರಿಯ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದ್ದು, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಯದಂತೆ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಪ್ರಯತ್ನ ಮಾಡುತ್ತಿದ್ದಾರೆಂಬ ಆರೋಪ ಸತ್ಯಕ್ಕೆ ದೂರವಾಗಿದೆ. ಜನಪರವಾಗಿರುವ ಶಾಸಕ ಪೊನ್ನಣ್ಣನವರ ಮೇಲೆ ಆಧಾರ ರಹಿತ ಆರೋಪ ಸರಿಯಲ್ಲ ಎಂದು ಹಿರಿಯ ಸಹಕಾರಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚೆಕ್ಕೆರ ಕೆ.ಸೋಮಯ್ಯ ಹೇಳಿದ್ದಾರೆ. ಪ್ರಸ್ತುತ ಸಹಕಾರ ಸಂಘದಲ್ಲಿರುವ ಆಡಳಿತ ಅಧಿಕಾರಿಯು ಮಹಾಸಭೆ ಕರೆಯುವ ಮೂಲಕ ಈ ವಿಚಾರವಾಗಿ ಸದಸ್ಯರು ಚರ್ಚೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಇಲಾಖಾ ಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಹುದಿಕೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಸಿ.ಕೆ. ಸೋಮಯ್ಯ ಹುದಿಕೇರಿ ಸಹಕಾರ ಸಂಘಕ್ಕೆ ಸಂಬAಧಪಟ್ಟAತೆ ಆಗಿಂದಾಗ ವರದಿಗಳು ಪ್ರಕಟವಾಗುತ್ತಿವೆ. ಈಗಾಗಲೇ ಸಂಘದಲ್ಲಿ ಕಟ್ಟಡ ವಿಚಾರ ಹಾಗೂ ಗೊಬ್ಬರ ಮಾರಾಟ ವಿಚಾರದಲ್ಲಿ ಆರೋಪ ಸಾಬೀತಾ ಗಿರುವುದರಿಂದ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಅಲ್ಲಿಯ ತನಕ ಆಡಳಿತ ಮಂಡಳಿಗೆ ಚುನಾವಣೆ ನಡೆಸದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಒಂದು ವೇಳೆ ಚುನಾವಣೆ ನಡೆದಲ್ಲಿ ಇಲ್ಲಿ ನಡೆದಿರುವ ಆರೋಪಗಳು ಮುಚ್ಚಿ ಹೋಗಲಿವೆ. ಆದ್ದರಿಂದ ಚುನಾ ವಣೆಯನ್ನು ನಡೆಸಬಾರದು. ತನಿಖೆಯಲ್ಲಿ ಆರೋಪಗಳು ಸಾಭೀತಾದ ಹಿನ್ನೆಲೆಯಲ್ಲಿ ಈ ಬಗ್ಗೆ ಸಂಬAಧಿಸಿದವರಿAದ ಆದ ನಷ್ಟವನ್ನು ಸಂಘಕ್ಕೆ ಭರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹುದಿಕೇರಿ ಸಹಕಾರ ಸಂಘದ ವಿಚಾರದಲ್ಲಿ ಅನಾವಶ್ಯಕವಾಗಿ ಕ್ಷೇತ್ರದ ಶಾಸಕರಾಗಿರುವ ಎ.ಎಸ್.ಪೊನ್ನಣ್ಣ ಅವರ ಮೇಲೆ ಆರೋಪ ಮಾಡುವುದು ತಕ್ಷಣ ಕೈ ಬಿಡಬೇಕು. ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯನವರು ಉತ್ತಮ ನಡೆಯುಳ್ಳವರಾಗಿದ್ದಾರೆ. ಆದರೆ, ಇವರಿಗೆ ಹುದಿಕೇರಿಯ ಕೆಲ ಸದಸ್ಯರು ತಪ್ಪು ಮಾಹಿತಿ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ. ಇದನ್ನು ಖಂಡಿಸುತ್ತಿದ್ದು, ಸಂಘದಲ್ಲಿ ನಡೆದ ಅವ್ಯವಹಾರದ ಬಗ್ಗೆ ೬೪ರ ಕಲಂನ ಅಡಿಯಲ್ಲಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಗೋಷ್ಠಿಯಲ್ಲಿ ಹಿರಿಯ ಸಹಕಾರಿಗಳಾದ ಚಕ್ಕೆರ ವಾಸು ಕುಟ್ಟಪ್ಪ, ಅಜ್ಜಿಕುಟ್ಟಿರ ಪೊನ್ನಪ್ಪ, ಚೆಕ್ಕೆರ ಮಾದಯ್ಯ ಹಾಗೂ ಅಜ್ಜಿಕುಟ್ಟಿರ ಸುರೇಂದ್ರ ಉಪಸ್ಥಿತರಿದ್ದರು.