ವೀರಾಜಪೇಟೆ, ಫೆ. ೨೬: ಬಾಡಿಗೆ ಪಾವತಿಸದ ಪುರಸಭೆಯ ವಾಣಿಜ್ಯ ಮಳಿಗೆಗಳಿಗೆ ಪುರಸಭೆ ಅಧಿಕಾರಿಗಳು ಬೀಗ ಜಡಿದ ಘಟನೆ ನಡೆದಿದೆ.

ಪುರಸಭೆಯ ಸಿಬ್ಬಂದಿಗಳು ಸೋಮವಾರ ಎಲ್ಲಾ ಅಂಗಡಿ ಮಳಿಗೆಗಳಿಗೆ ತೆರಳಿ ಬಾಡಿಗೆ ಪಾವತಿ ಮಾಡದೆ ಉಳಿಸಿಕೊಂಡಿರುವ ಅಂಗಡಿ ಮಳಿಗೆಗಳಿಗೆ ನೋಟೀಸ್ ಅಂಟಿಸಿ ಬೀಗ ಜಡಿದರು.

ಕಳೆದ ೩ ವರ್ಷದಿಂದ ಇಲ್ಲಿನ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಪುರಸಭೆಗೆ ಬಾಡಿಗೆ ಪಾವತಿಸಿಲ್ಲ. ಈ ಬಗ್ಗೆ ಹಲವು ಬಾರಿ ನೋಟೀಸ್ ನೀಡಲಾಗಿದೆ. ಆದರೂ ಪ್ರಯೋಜನವಾಗಲಿಲ್ಲ. ಆದ್ದರಿಂದ ಬಾಡಿಗೆ ಪಾವತಿಸದ ವಾಣಿಜ್ಯ ಮಳಿಗೆಗಳಿಗೆ ನೋಟೀಸ್ ಅಂಟಿಸಿ ಬೀಗ ಹಾಕಲಾಗಿದೆ. ನೋಟೀಸ್ ಅಂಟಿಸಿದ ದಿನದಿಂದ ೭ ದಿನದೊಳಗೆ ಬಾಡಿಗೆ ಬಾಕಿ ಪಾವತಿಸಬೇಕು. ಇಲ್ಲವಾದಲ್ಲಿ ಅಂಗಡಿಯ ಒಳಗಿರುವ ವಸ್ತುಗಳನ್ನು ಪುರಸಭೆಯ ವಶಕ್ಕೆ ಪಡೆದು ಅಂಗಡಿ ಮಳಿಗೆಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಪುರಸಭೆ ಅಧಿಕಾರಿಗಳು ತಿಳಿಸಿದರು.