ಮಡಿಕೇರಿ,ಫೆ.೨೭ : ವಿಶ್ವ ಆರೋಗ್ಯ ಸಂಸ್ಥೆಯ ಕರೆ ಮೇರೆಗೆ ಮಡಿಕೇರಿಯ ಅಮೃತ ಇಎನ್‌ಟಿ ಮತ್ತು ವರ್ಟಿಗೋ ಕ್ಲಿನಿಕ್, ಕಾವೇರಿ ಹೀಯರಿಂಗ್ ಕ್ಲಿನಿಕ್, ಜಿ.ಎನ್. ರಿಸೌಂಡ್ ಹೀಯರಿಂಗ್ ಇಂಡಿಯ ಪ್ರೆöÊ.ಲಿಮಿಟೆಡ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಇಎನ್‌ಟಿ ಮತ್ತು ಶ್ರವಣ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಡಾ.ಮೋಹನ್ ಅಪ್ಪಾಜಿ ಮಾತನಾಡಿ; ಶ್ರವಣ ದೋಷ ಯಾರಿಗಾದರೂ, ಯಾವದೇ ವಯಸ್ಸಿನಲ್ಲಿ ಬರಬಹುದು. ಈ ಬಗ್ಗೆ ಎಚ್ಚರಿಕೆ ಅಗತ್ಯ. ಹಾಗಾಗಿ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮಾರ್ಚ್ ೩ರಂದು ವಿಶ್ವ ಶ್ರವಣ ದಿನ ಆಚರಿಸಲಾಗುತ್ತಿದ್ದು, ಅದೇ ದಿನ ಉಚಿತ ಇಎನ್‌ಟಿ ಹಾಗೂ ಶ್ರವಣ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಪ್ರತಿವರ್ಷ ಶಿಬಿರ ಹಮ್ಮಿಕೊಂಡು ಬರುತ್ತಿದ್ದು, ಕೋವಿಡ್ ಕಾಣಿಸಿಕೊಂಡ ಬಳಿಕ ಆಯೋಜಿಸಿರುವುದಿಲ್ಲ. ಈ ಬಾರಿ ಮತ್ತೆ ಆರಂಭ ಮಾಡಲಾಗಿದ್ದು, ಮಾರ್ಚ್ ೩ರಂದು ರಾಜಾಸೀಟ್ ರಸ್ತೆಯಲ್ಲಿರುವ ಅಮೃತ ಇಎನ್‌ಟಿ, ವರ್ಟಿಗೋ ಕ್ಲಿನಿಕ್ ಹಾಗೂ ಕಾವೇರಿ ಹೀಯರಿಂಗ್ ಕ್ಲಿನಿಕ್‌ನಲ್ಲಿ ನಡೆಯಲಿದೆ. ಬೆಳಿಗ್ಗೆ ೧೦.೩೦ರಿಂದ ಮಧ್ಯಾಹ್ನ ೧.೩೦ರವರೆಗೆ ನಡೆಯುವ ಶಿಬಿರದಲ್ಲಿ ಉಚಿತ ಇಎನ್‌ಟಿ, ಶ್ರವಣ ತಪಾಸಣೆಯೊಂದಿಗೆ ಉಚಿತ ಮಧುಮೇಹ, ಅಧಿಕ ರಕ್ತದೊತ್ತಡ(೪೦ ವರ್ಷ ಮೇಲ್ಪಟ್ಟವರಿಗೆ) ತಪಾಸಣೆ, ತಜ್ಞರಿಂದ ಉಚಿತ ಮಧುಮೇಹ ಆಹಾರ ಸಮಾಲೋಚನೆ ಮತ್ತು ಪ್ರಕೃತಿ ಚಿಕಿತ್ಸೆ ಕೂಡ ಮಾಡಲಾಗುವದು.
ಇದರೊಂದಿಗೆ ಹಳೆಯ ಶ್ರವಣ ಸಾಧನಗಳನ್ನು ಬದಲಾಯಿಸಲು ಹಾಗೂ ಮೇಲ್ದರ್ಜೆಗೇರಿಸಿಕೊಳ್ಳಲೂ ಅವಕಾಶವಿರುವದಾಗಿ ಹೇಳಿದರು. ಶ್ರವಣ ದೋಷವುಳ್ಳವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪ್ರಸ್ತುತ ಭಾರತದಲ್ಲಿ ೬೩ಮಿಲಿಯ ಮಂದಿ ಶ್ರವಣ ದೋಷದಿಂದ ಬಳಲುತ್ತಿದ್ದಾರೆ. ಅಷ್ಟೊಂದು ಮಂದಿಗೆ ಚಿಕಿತ್ಸೆ ನೀಡುವದು ತ್ರಾಸದಾಯಕ ಎಂದು ತಿಳಿಸಿದರು.
ಆಡಿಯೋಲಾಜಿಸ್ಟ್ ಅಚ್ಚಯ್ಯ ಮಾತನಾಡಿ; ಶ್ರವಣ ಸಮಸ್ಯೆ ಕಂಡುಬAದರೆ ನಿರ್ಲಕ್ಷö್ಯ ಮಾಡದೆ ಕೂಡಲೇ ಪರೀಕ್ಷಿಸಿಕೊಳ್ಳಬೇಕು. ಸಣ್ಣ ಮಕ್ಕಳಿದ್ದಾಗಲೇ ಸರಿಪಡಿಸಿಕೊಳ್ಳಬೇಕು. ದೊಡ್ಡವರಾದ ಮೇಲೆ ತೊಂದರೆ ಆಗಬಹುದು. ಏನಿಲ್ಲವೆಂದರೂ ಶ್ರವಣ ಸಲಕರಣೆಗಳನ್ನಾದರೂ ಬಳಸಬಹುದು. ನಿರ್ಲಕ್ಷö್ಯ ಮಾಡಿದರೆ ನಂತರ ಸಲಕರಣೆ ಹಾಕಿದರೂ ಪ್ರಯೋಜನವಾಗುವದಿಲ್ಲ. ಹಾಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಶಿಬಿರ ಹಮ್ಮಿಕೊಂಡಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು.