ತಿರುವನAತಪುರ, ಫೆ. ೨೭: ಭಾರತದ ಬಾಹ್ಯಾಕಾಶ ಹಾಗೂ ಸಂಶೋಧನಾ ಸಂಸ್ಥೆ (ISಖಔ) ಹಲವಾರು ವರ್ಷಗಳಿಂದ ತನ್ನ ಮಹತ್ವಪೂರ್ಣ ಯೋಜನೆಯಾಗಿ ರುವ ಗಗನಯಾನ ಸಂಬAಧ ಸಿದ್ಧತೆ ನಡೆಸುತ್ತಿದ್ದು, ತಾ.೨೭ ರಂದು ೪ ಭಾರತೀಯ ವಾಯುಸೇನಾಧಿಕಾರಿ ಗಳನ್ನು ಅಧಿಕೃತವಾಗಿ ಗಗನಯಾ ತ್ರಿಕರು (ಆಸ್ಟೊçÃನಾಟ್ಸ್) ಎಂದು ಪ್ರಧಾನಿಯ ಮೂಲಕ ಘೋಷಿಸಿತು.
ಕೇರಳದ ತಿರುವನಂತಪುರದಲ್ಲಿನ ವಿಕ್ರಂ ಸಾರಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ವಾಯುಸೇನಾಧಿಕಾರಿ ಗಳಾದ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್, ವಿಂಗ್ ಕಮಾಂಡರ್ ಶುಭಾಂಶು ಶುಕ್ಲ ಅವರುಗಳಿಗೆ ‘ಆಸ್ಟೊçÃನಾಟ್ ವಿಂಗ್ಸ್’ - ಗಗನಯಾತ್ರಿಕರು ಎಂದು ಗುರುತಿಸಲ್ಪಡುವ ಪದಕಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದರು. ಈ ಸೇನಾಧಿಕಾರಿಗಳು ಹಲವಾರು ವರ್ಷಗಳಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗು ವತ್ತ ವಿವಿಧ ರೀತಿಯ ತರಬೇತಿಗಳಲ್ಲಿ ನಿರತರಾಗಿದ್ದರು. ೨೦೨೩ರ ಅಕ್ಟೋಬರ್ ೨೧ ರಂದು ಗಗನಯಾನ ಯೋಜ ನೆಯ ಪರೀಕ್ಷಾ ಹಂತವು ಯಶಸ್ವಿ ಯಾಗಿ ಕಾರ್ಯಾಚರಿಸಿದ್ದು, ೨೦೨೫ರಲ್ಲಿ ಈ ೪ ರಲ್ಲಿ ೩ ಗಗನಯಾತ್ರಿಕರು ಧ್ವನಿಗಿಂತ ೧.೨ ಪಟ್ಟು ವೇಗದಲ್ಲಿ ಚಲಿಸಲಿರುವ ನೌಕೆಯ ಕ್ರೀವ್ ಮಾಡ್ಯೂಲ್ನಲ್ಲಿ ಬಾಹ್ಯಾಕಾಶಯಾನ ಕೈಗೊಳ್ಳಲಿದ್ದಾರೆ. ಈ ನಾಲ್ವರು ಬೆಂಗಳೂರಿನಲ್ಲಿ ತರಬೇತಿ ಪಡೆದಿದ್ದಲ್ಲದೆ ೨೦೨೦-೨೧ ರಲ್ಲಿ ರಷ್ಯಾದ ಬಾಹ್ಯಾಕಾಶ ಸಂಸ್ಥೆಯ ನೆರವಿನಿಂದಲೂ ೧ ವರ್ಷಗಳ ಕಾಲ ತರಬೇತಿ ಪಡೆದಿದ್ದಾರೆ. ಗಗನಯಾನ ಮಿಷನ್ ಸಂದರ್ಭ ಗಗನಯಾತ್ರಿಕರು ನೌಕೆಯಲ್ಲಿ ಭೂಮಿಗಿಂತ ೪೦೦ ಕಿ.ಮೀ ಎತ್ತರದ ಕಕ್ಷೆಯಲ್ಲಿ ೩ ದಿನಗಳ ಕಾಲ ಇರಲಿದ್ದಾರೆ. ನಂತರ ಭೂಮಿಗೆ ಹಿಂತಿರುಗಲಿದ್ದಾರೆ.
ನವಭಾರತದ ಉದಯದ ಸಂಕೇತ - ಪ್ರಧಾನಿ ಮೋದಿ
ಗಗನಯಾತ್ರಿಕರ ಹೆಸರನ್ನು ಅಧಿಕೃತವಾಗಿ ಘೋಷಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ಮಾನವಸಹಿತ ಗಗನಯಾ ನಕ್ಕೆ ಇಸ್ರೋ ಸಿದ್ಧಗೊಂಡಿದೆ. ಇನ್ನು ಕೌಂಟ್ಡೌನ್ ಕೂಡ ನಮ್ಮದು, ರಾಕೆಟ್ ಕೂಡ ನಮ್ಮದು. ಇದು ನವಭಾರತದ ಸಂಕೇತ ಎಂದು ಬಣ್ಣಿಸಿದರು.