ಶಾಸಕ ಮಂಥರ್ ಗೌಡ
ಶನಿವಾರಸಂತೆ, ಫೆ. ೨೭: ಕಾರ್ಮಿಕರ ಎಲ್ಲಾ ಕಷ್ಟಗಳಿಗೆ, ಸಮಸ್ಯೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳಿಂದ ಪರಿಹಾರ ಸಾಧ್ಯವಿದೆ ಎಂದು ಶಾಸಕ ಡಾ. ಮಂಥರ್ ಗೌಡ ಹೇಳಿದರು.
ಪಟ್ಟಣದ ಕೊಡಗು ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರ ಹಾಗೂ ಕೂಲಿ ಕಾರ್ಮಿಕರ ಸಂಘದ ಕಚೇರಿ ಸಭಾಂಗಣದಲ್ಲಿ ನಡೆದ “ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಾಗಾರ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರಿಗೆ ಸಂಬAಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಸೌಲಭ್ಯ ಪಡೆಯುವುದರ ಜತೆಗೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಮುಂದೆ ಕಾರ್ಮಿಕರ ಕ್ಯಾಂಪ್ ಆಯೋಜಿಸಿ, ಅಧಿಕಾರಿಗಳ ಸಹಯೋಗದೊಂದಿಗೆ ಲೇಬರ್ ಕಾರ್ಡ್, ಆಶಾದೀಪ ಇತ್ಯಾದಿ ಯೋಜನೆಗಳು, ಸೌಲಭ್ಯಗಳ ಅರಿವು ಮೂಡಿಸಬೇಕು. ಬಾಲಕಾರ್ಮಿಕ ಪದ್ಧತಿಯನ್ನು ವಿರೋಧಿಸಿ ಅಂತಹ ಮಕ್ಕಳ ಶಿಕ್ಷಣಕ್ಕೆ ಪ್ರಯತ್ನಿಸಿ, ಜವಾಬ್ದಾರಿ ತೆಗೆದುಕೊಳ್ಳಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳ ಜತೆಗೂಡಿ ಕಾರ್ಮಿಕರ ಸಮಸ್ಯೆಗಳಿಗೆ ಮನೆ ಬಾಗಿಲಿಗೆ ಬಂದು ರಕ್ಷಣೆಗೆ ಜತೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು. ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಗಾನಶ್ರೀ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆ ಪರಿಸರ ಶಿಕ್ಷಣವನ್ನು ಕೊಡುವುದರಿಂದ ಸಮಾಜದಲ್ಲಿ ಅವರು ಉತ್ತಮ ನಾಗರಿಕರಾಗಿ ಬೆಳೆಯುತ್ತಾರೆ. ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದ್ದು ಉಸಿರಾಡಲು ಉತ್ತಮ ಗಾಳಿಗಾಗಿ ಮರಗಿಡಗಳನ್ನು ಬೆಳೆಸಬೇಕು. ಕುಡಿಯುವ ಶುದ್ಧ ನೀರಿಗಾಗಿ ಅಂತರ್ಜಲ ಮಟ್ಟವನ್ನು ಕಾಪಾಡಿಕೊಳ್ಳಬೇಕು. ಮುಂದೆ ನೀರು ಗಾಳಿಯ ಅಭಾವ ಉಂಟಾಗದಿರಲು ಅರಣ್ಯ ಇಲಾಖೆಯಿಂದ ನರ್ಸರಿಯಲ್ಲಿ ಬೆಳೆಸುವ ಗಿಡಗಳನ್ನು ಪಡೆದು ಗಿಡ ನೆಟ್ಟು ಪರಿಸರ ಉಳಿಸಬೇಕು. ಅರಣ್ಯ ಇಲಾಖೆಯ ನೆರವು ಪಡೆದು ಸೌಲಭ್ಯಗಳ ಅಧಿಕಾರಿಗಳ ಜತೆಗೂಡಿ ಕಾರ್ಮಿಕರ ಸಮಸ್ಯೆಗಳಿಗೆ ಮನೆ ಬಾಗಿಲಿಗೆ ಬಂದು ರಕ್ಷಣೆಗೆ ಜತೆ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು. ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಗಾನಶ್ರೀ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆ ಪರಿಸರ ಶಿಕ್ಷಣವನ್ನು ಕೊಡುವುದರಿಂದ ಸಮಾಜದಲ್ಲಿ ಅವರು ಉತ್ತಮ ನಾಗರಿಕರಾಗಿ ಬೆಳೆಯುತ್ತಾರೆ. ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದ್ದು ಉಸಿರಾಡಲು ಉತ್ತಮ ಗಾಳಿಗಾಗಿ ಮರಗಿಡಗಳನ್ನು ಬೆಳೆಸಬೇಕು. ಕುಡಿಯುವ ಶುದ್ಧ ನೀರಿಗಾಗಿ ಅಂತರ್ಜಲ ಮಟ್ಟವನ್ನು ಕಾಪಾಡಿಕೊಳ್ಳಬೇಕು. ಮುಂದೆ ನೀರು ಗಾಳಿಯ ಅಭಾವ ಉಂಟಾಗದಿರಲು ಅರಣ್ಯ ಇಲಾಖೆಯಿಂದ ನರ್ಸರಿಯಲ್ಲಿ ಬೆಳೆಸುವ ಗಿಡಗಳನ್ನು ಪಡೆದು ಗಿಡ ನೆಟ್ಟು ಪರಿಸರ ಉಳಿಸಬೇಕು. ಅರಣ್ಯ ಇಲಾಖೆಯ ನೆರವು ಪಡೆದು ಸೌಲಭ್ಯಗಳ ಸೌಲಭ್ಯಗಳನ್ನು ಪಡೆಯಲು ತಾಲೂಕಿನ ಇಲಾಖೆಗಳಿಗೆ ಹೋಗುವ ಸದಸ್ಯ ಕಾರ್ಮಿಕರು ಇಂದು ನಡೆದ ಜನಪ್ರತಿನಿಧಿಗಳ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶನಿವಾರಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್, ಸದಸ್ಯರಾದ ಎಸ್.ಸಿ. ಶರತ್ ಶೇಖರ್, ಎಸ್.ಎನ್. ರಘು, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸತ್ಯವತಿ ದೇವರಾಜ್, ಉಪಾಧ್ಯಕ್ಷೆ ಗೋಪಿಕಾ, ಸದಸ್ಯ ಸಿ.ಜೆ. ಗಿರೀಶ್, ವಿಘ್ನೇಶ್ವರ ಬಾಲಿಕಾ ವಿದ್ಯಾಸಂಸ್ಥೆ ಶಿಕ್ಷಕ ಕೆ.ಪಿ. ಜಯಕುಮಾರ್, ರೋಟೆರಿಯನ್ ಅಶೋಕ್, ನಳಿನಿ, ಕಾರ್ಮಿಕ ಇಲಾಖೆ ಸಿಬ್ಬಂದಿ ಹಾಗೂ ಕಾರ್ಮಿಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು. ಶಿಕ್ಷಕ ಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.