ಮಡಿಕೇರಿ, ಫೆ. ೨೭: ಕೊಡಗಿನ ಸಿಐಟಿ ಪೊನ್ನಂಪೇಟೆ ಇಂಜಿನಿಯರಿAಗ್ ಕಾಲೇಜಿನಲ್ಲಿ ವಿಟಿಯು ಅಂತರ ಕಾಲೇಜು ರಾಜ್ಯಮಟ್ಟದ ಹಾಕಿ ಪಂದ್ಯಾವಳಿ ತಾ. ೨೩ ಹಾಗೂ ೨೪ ರಂದು ನಡೆಯಿತು.
ಟೂರ್ನಮೆಂಟ್ನಲ್ಲಿ ವಿಟಿಯು ವಿಶ್ವವಿದ್ಯಾನಿಲಯಕ್ಕೆ ಒಳಪಡುವ ರಾಜ್ಯದ ವಿವಿಧ ಜಿಲ್ಲೆಗಳ ೧೧ ಕಾಲೇಜುಗಳ ಹಾಕಿ ತಂಡಗಳು ಭಾಗವಹಿಸಿದ್ದು, ಫೈನಲ್ ಪಂದ್ಯದಲ್ಲಿ ಸಿಐಟಿ ಪೊನ್ನಂಪೇಟೆ ತಂಡದ ಮುಂಚೂಣಿ ಆಟಗಾರ ಸಾತ್ವಿಕ್ ಗಳಿಸಿದ ಏಕೈಕ ಗೋಲಿನಿಂದ ಆರ್ವಿಸಿಇ ಬೆಂಗಳೂರು ತಂಡವನ್ನು ೧-೦ ಗೋಲಿನಿಂದ ಮಣಿಸುವುದರ ಮೂಲಕ ಚಾಂಪಿಯನ್ ಪಟ್ಟವನ್ನು ಸಿಐಟಿ ಕಾಲೇಜು ಮುಡಿಗೇರಿಸಿಕೊಂಡಿತು.
ಫೈನಲ್ ಪಂದ್ಯದ ಮುಖ್ಯ ಅತಿಥಿಗಳಾಗಿ ಕೊಡವ ಎಜುಕೇಶನ್ ಸೊಸೈಟಿಯ ನಿರ್ದೇಶಕರಾದ ಪಟ್ಟಡ ಪೂವಣ್ಣ ಅವರು ಭಾಗವಹಿಸಿದ್ದರು. ವೇದಿಕೆಯಲ್ಲಿ ಕೊಡವ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರಾಕೇಶ್ ಪೂವಯ್ಯ, ಪ್ರಾಂಶುಪಾಲರಾದ ಡಾ. ಎಂ ಬಸವರಾಜು, ಕಾಲೇಜು ಆಡಳಿತ ಅಧಿಕಾರಿ ಜೀವನ್ ಚಿಣ್ಣಪ್ಪ ಹಾಗೂ ದೈಹಿಕ ಶಿಕ್ಷಕರಾದ ಹರೀಶ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.