ಮಡಿಕೇರಿ, ಫೆ. ೨೭: ಕೊಡಗು ಜಿಲ್ಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾಗಿರುವ ಜಲ್ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಒಟ್ಟು ೪೫೭ ಜನವಸತಿಗಳಿಗೆ ನಳ ನೀರು ಸಂಪರ್ಕ ಕಲ್ಪ್ಪಿಸುವ ಮತ್ತು ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈ ಕಾಮಗಾರಿಗಳನ್ನು ಪರಿಶೀಲಿಸಲು ಕೇಂದ್ರ WಂSಊ (Wಂಖಿಇಖ, SಂಓIಖಿAಖಿIಔಓ ಂಓಆ ಊಙಉIಇಓಇ) ತಂಡ ಜಿಲ್ಲೆಗೆ ಆಗಮಿಸಿ, ಜಿಲ್ಲೆಯಲ್ಲಿ ಒಟ್ಟು ೧೮ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ೬ ದಿನಗಳ ಕಾಲ ಕಾಮಗಾರಿಗಳನ್ನು ಸಂಬAಧಿಸಿದ ಗ್ರಾಮ ಪಂಚಾಯಿತಿಯ ನೀರು ನೈರ್ಮಲ್ಯ ಸಮಿತಿ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಂಬAಧಿಸಿದ ಅಭಿಯಂತರರು, ಇತರ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಪರಿಶೀಲನೆ ಮಾಡಿತು.

ಇದರಲ್ಲಿ ಸೋಮವಾರಪೇಟೆ ತಾಲೂಕಿನ ೭ನೇ ಹೊಸಕೋಟೆ, ಬೇಲೂರು, ಬಸವನಹಳ್ಳಿ, ಹಿತ್ಲುಕೇರಿ, ಮುಳ್ಳೂರು, ಗಣಗೂರು, ದೊಡ್ಡಮಳ್ತೆ, ಶಾಂತಳ್ಳಿ, ಬೆಟ್ಟದಳ್ಳಿ, ಕುಮಾರಳ್ಳಿ ಹಾಗೂ ಗರ್ವಾಲೆ ಗ್ರಾಮಗಳು, ಮಡಿಕೇರಿ ತಾಲೂಕಿನ ಮರಗೋಡು, ಹೊದ್ದೂರು, ನೆಲಜಿ ಮತ್ತು ಅರಪಟ್ಟು ಗ್ರಾಮಗಳು ಮತ್ತು ಪೊನ್ನಂಪೇಟೆ ತಾಲೂಕಿನ ನಲ್ಲೂರು, ಬೀಳೂರು, ಕುಟ್ಟ ಮತ್ತು ಹುದಿಕೇರಿ ಗ್ರಾಮಗಳಲ್ಲಿನ ಕಾಮಗಾರಿಗಳನ್ನು ಪರಿಶೀಲಿಸಿತು. ಕಾಮಗಾರಿಗಳಲ್ಲಿ ಕೆಲವು ಕಡೆ ಬಂದ ಸಣ್ಣ ಪುಟ್ಟ ನ್ಯೂನ್ಯತೆಗಳನ್ನು ಸರಿಪಡಿಸಲು ಸಂಬAಧಿಸಿದವರಿಗೆ ಮಾರ್ಗದರ್ಶನ ನೀಡಿತು.