ಗೋಣಿಕೊಪ್ಪಲು.ಫೆ.೨೫: ದೇಶಕ್ಕೆ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕರು ಸಮಾಜಕ್ಕೆ ಮಾದರಿಯಾಗಬೇಕು, ಸೈನಿಕರ ಒಗ್ಗಟ್ಟು ಮತ್ತಷ್ಟು ಬಲಗೊಳ್ಳಬೇಕು, ಸರ್ಕಾರದ ಯೋಜನೆಗಳನ್ನು , ಸವಲತ್ತುಗಳನ್ನು ಹೆಚ್ಚಿನ ಮಾಹಿತಿ ಪಡೆಯುವ ಮೂಲಕ ಪಡೆದುಕೊಳ್ಳಬೇಕು ಎಂದು ದಕ್ಷಿಣ ಭಾರತದ ಮುಖ್ಯ ಭೂಸೇನಾಧಿಕಾರಿ ಲೆ.ಜ.ಕರಣ್ ಬೀರ್ ಸಿಂಗ್ ಬರಾರ್, ಪಿವಿಎಸ್‌ಎಂ, ಎವಿಎಸ್‌ಎಂ, ವೈಎಸ್‌ಎಮ್ ಮಾಜಿ ಸೈನಿಕರಿಗೆ ಕರೆ ನೀಡಿದರು.

ಗೋಣಿಕೊಪ್ಪ ಕಾವೇರಿ ಕಾಲೇಜಿನ ಆವರಣದಲ್ಲಿ ಆಯೋಜನೆ ಗೊಂಡಿದ್ದ ಮಾಜಿ ಸೈನಿಕರ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತ ನಾಡಿದ ಅವರು, ಸೈನಿಕರ ಕುಟುಂಬ ಗಳು ಸರಕಾರ ನೀಡುವ ಸವಲತ್ತು ಗಳಿಂದ ವಂಚಿತರಾಗ ಬಾರದು, ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸೇನೆಯಿಂದ ನಿವೃತ್ತಿ ಪಡೆದು ಬಂದ ನಂತರವೂ ಉದ್ಯೋಗ ಅವಕಾಶಗಳು ಹೆಚ್ಚಾಗಿ ರುತ್ತದೆ. ಮೀಸಲಾತಿ ಕೂಡ ಸೈನಿಕರಿಗೆ ಹಾಗೂ ಕುಟುಂಬಕ್ಕೆ ಲಭಿಸುತ್ತದೆ, ವೈದ್ಯಕೀಯ ಚಿಕಿತ್ಸೆಯ ಯೋಜನೆ ಕೂಡ ಪಡೆಯ ಬಹುದಾಗಿದೆ ಎಂದು ಅವರು ವಿವರಿಸಿದರು.

ಆದರೆ ಹಲವು ಮಂದಿ ಸೈನಿಕ ಹಾಗೂ ಕುಟುಂಬಗಳು ತಮ್ಮ ದಾಖಲಾತಿ ಇನ್ನೂ ಕೂಡ ಕ್ರಮ ಬದ್ದವಾಗಿ ಮಾಡಿಕೊಂಡಿಲ್ಲ.ಹೀಗಾಗಿ ಯೋಜನೆಯ ಫಲ ಕೆಲವು ಸೈನಿಕರಿಗೆ ತಲುಪುತ್ತಿಲ್ಲ. ಆ ನಿಟ್ಟಿನಲ್ಲಿ ಎಲ್ಲರಿಗೂ ಪ್ರಯೋಜನಕಾರಿಯಾಗಲು ಇಂತಹ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.

ಮತ್ತೋರ್ವ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮೇ.ಜ.ರವಿ ಮುರುಗನ್ ಭಾರತೀಯ ಸೇನೆಯಲ್ಲಿ ಅಥವಾ ಭಾರತೀಯ ರಕ್ಷಣಾ ಪಡೆಗಳಲ್ಲಿ ನಿವೃತ್ತಿಯ ನಂತರವೂ ಮೌಲ್ಯಯುತ ಸೇವೆ ಸಲ್ಲಿಸಿದ ಹಾಗೂ ಅನೇಕ ಸೇವೆ ಸಲ್ಲಿಸುತ್ತಿರುವ ಮಾಜಿ ಸೈನಿಕರು ರಾಷ್ಟ್ರ ನಿರ್ಮಾಣಕ್ಕೆ ಮತ್ತು ಸಮಾಜಕ್ಕೆ ಹೆಚ್ಚಿನ ಶಕ್ತಿಯನ್ನು ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ನೀಡಿದ್ದಾರೆ ಎಂದರು. ಪಿಂಚಣಿದಾರರಿಗೆ ಸಹಾಯ ಮಾಡಲು ನಾವು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಮರು ಉದ್ಯೋಗ. ಖಾಸಗಿ ವಲಯ ಅಥವಾ ಸರ್ಕಾರದಲ್ಲಿ ಪಿಂಚಣಿದಾರರಿಗೆ ಅವಕಾಶಗಳು. ಲಭಿಸುತ್ತಿವೆ.

ಬಿಎಂಆರ್ ಸಿಎಲ್ ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯು ಪ್ರತಿ ೬ ತಿಂಗಳಿಗೊಮ್ಮೆ ೮೦-೧೦೦ ರೈಲು ಚಾಲಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ನಮ್ಮಲ್ಲಿ ಪರೀಕ್ಷೆ ಮಾಡುವ ಅನೇಕ ಕಂಪೆನಿಗಳಿವೆ ಮತ್ತು ಅವರು ಉದ್ಯೋಗದಲ್ಲಿದ್ದಾರೆ ನಾವು ಹೆಚ್ಚಿನ ಮಾಹಿತಿಯನ್ನು ನೀಡುತ್ತಿದ್ದೇವೆ.

ಖಾಸಗಿ ವಲಯದಲ್ಲಿ ಯಾವುದೇ ಖಾಲಿ ಹುದ್ದೆಗಳಿದ್ದರೆ ಮತ್ತು ನಾವು ಅವಶ್ಯಕತೆಗಳನ್ನು ಪೂರೈಸಿದರೆ, ಅವುಗಳನ್ನು ವಿಲೀನಗೊಳಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಹೇಳುತ್ತಿದೆ. ಇದು ನಮ್ಮ ಜವಾಬ್ದಾರಿಯೂ ಆಗಿದೆ ಎಂದರು.

ಕೊಡಗು ಜಿಲ್ಲಾ ಇಸಿಎಚ್‌ಎಸ್‌ನೊಂದಿಗೆ ಪ್ರತಿ ೩ ತಿಂಗಳಿಗೊಮ್ಮೆ ನಾನು ಪ್ರತಿಯೊಬ್ಬ ಸಹೋದ್ಯೋಗಿಯೊಂದಿಗೆ ವೀಡಿಯೋ ಕಾನ್ಫರೆನ್ಸ್ ಮಾಡುತ್ತಿರುವೆ, ಕೊಡಗು ಜಿಲ್ಲೆಯಲ್ಲಿ ಹಲವು ಸಮಸ್ಯೆಗೆ ಪರಿಹಾರ ಲಭಿಸಿದೆ. ತಳಮಟ್ಟದಲ್ಲಿ ಸೈನಿಕರಿಗೆ ಸವಲತ್ತುಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಆ ನಿಟ್ಟಿನಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಅವರು ತಿಳಿಸಿದರು.ಕರ್ನಾಟಕ ಹಾಗೂ ಕೇರಳ ಸಬ್ ಏರಿಯಾದ ಮೂಲಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸೈನಿಕ ಕಲ್ಯಾಣ ಇಲಾಖೆ ಮಡಿಕೇರಿ ಇಲ್ಲಿನ ನಿರ್ದೇಶಕ ಬ್ರಿಗೇಡಿಯರ್ ಎಂ.ಬಿ.ಶಶಿಧರ್, ಜಂಟಿ ನಿರ್ದೇಶಕ ಮೇ. ಬಾಲಸುಬ್ರಹ್ಮಣ್ಯಂ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗೋಣಿಕೊಪ್ಪ ಕಾವೇರಿ ಕಾಲೇಜಿನ ಎನ್‌ಸಿಸಿ ಘಟಕ ವತಿಯಿಂದ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು. ಕೊಡಗಿನ ವಿವಿಧ ಭಾಗದಿಂದ ಸೈನಿಕರ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ವಿವಿಧ ಬ್ಯಾಂಕ್ ಅಧಿಕಾರಿಗಳು, ರಾಜ್ಯ ಸೈನಿಕ ಬೋರ್ಡ್ನ ಅಧಿಕಾರಿಗಳು, ವಿವಿಧ ಅಭಿಲೇಕ ಕಾರ್ಯಾಲಯಗಳ ಅಧಿಕಾರಿಗಳು ಭಾಗವಹಿಸಿದ್ದರು.