ಸೋಮವಾರಪೇಟೆ, ಫೆ.೨೫: ಪಿರಿಯಾಪಟ್ಟಣದ ಕಂಪಲಾಪುರ ರಾಜ್ಯ ಹೆದ್ದಾರಿ ಯಲ್ಲಿ ನಿನ್ನೆ ರಾತ್ರಿ ನಡೆದ ಬೈಕ್-ಲಾರಿ ಅವಘಡದಲ್ಲಿ ಗರಗಂದೂರಿನ ವಿವಾಹಿತ ಯುವಕನೋರ್ವ ಸ್ಥಳದಲ್ಲೇ ದುರ್ಮರಣಕ್ಕೀಡಾಗಿ, ಬೈಕ್ನ ಹಿಂಬದಿ ಸವಾರ ಗಂಭೀರ ಗಾಯಗಳೊಂದಿಗೆ ಪ್ರಾಣಾಪಾಯ ದಿಂದ ಪಾರಾಗಿರುವ ಘಟನೆ ನಡೆದಿದೆ.
ಮೂಲತಃ ಹುಣಸೂರು ಸಮೀಪದ ವಾರಂಚಿ ನಿವಾಸಿ, ಕಳೆದ ೧೫ ವರ್ಷಗಳಿಂದ ಗರಗಂದೂರಿನ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ, ಮಾದೇವ-ಲತಾ ಅವರುಗಳ ಪುತ್ರ ಸತೀಶ್ (೩೪) ಎಂಬವರೇ ಸಾವನ್ನಪ್ಪಿದವರು. ಇವರೊಂದಿಗೆ ಬೈಕ್ನ ಹಿಂಬದಿ ಕುಳಿತಿದ್ದ ಮಕ್ಕಂದೂರು ಗ್ರಾಮದ ಅಭಿ ಎಂಬಾತ ಗಂಭೀರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಿನ್ನೆ ರಾತ್ರಿ ಗರಗಂದೂರಿನ ಮನೆಯಿಂದ ಹುಣಸೂರಿನ ವಾರಂಚಿಗೆ ಬೈಕ್ನಲ್ಲಿ ತೆರಳುತಿದ್ದ ಸಂದರ್ಭ ಕಂಪಲಾಪುರದಲ್ಲಿ, ಮೈಸೂರಿನಿಂದ ಮಂಗಳೂರಿಗೆ ಖಾಲಿ ಸಿಲಿಂಡರ್ಗಳನ್ನು ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪರಿಣಾಮ ಬೈಕ್ ಚಾಲಕ ಸತೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಬದಿ (ಮೊದಲ ಪುಟದಿಂದ) ಪರಿಣಾಮ ಬೈಕ್ ಚಾಲಕ ಸತೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಬದಿ ಮಂಗಳೂರಿನ ಸಾಗಿಸಲಾಗಿದೆ.
ಹುಣಸೂರಿನಿಂದ ಕಳೆದ ೧೫ ವರ್ಷಗಳ ಹಿಂದೆ ಗರಗಂದೂರಿಗೆ ಆಗಮಿಸಿ ಬಾಡಿಗೆ ಮನೆಯಲಿಮಂಗಳೂರಿನ ಸಾಗಿಸಲಾಗಿದೆ.
ಹುಣಸೂರಿನಿಂದ ಕಳೆದ ೧೫ ವರ್ಷಗಳ ಹಿಂದೆ ಗರಗಂದೂರಿಗೆ ಆಗಮಿಸಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಸತೀಶ್, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕಳೆದ ೪ ವರ್ಷದ ಹಿಂದೆ ಸುಳ್ಯದ ಕಾವ್ಯ ಎಂಬವರನ್ನು ವಿವಾಹವಾಗಿದ್ದು, ದಂಪತಿಗೆ ೩ ್ಲ ನೆಲೆಸಿದ್ದ ಸತೀಶ್, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕಳೆದ ೪ ವರ್ಷದ ಹಿಂದೆ ಸುಳ್ಯದ ಕಾವ್ಯ ಎಂಬವರನ್ನು ವಿವಾಹವಾಗಿದ್ದು, ದಂಪತಿಗೆ ೩ ವರ್ಷ ಪ್ರಾಯದ ಪುತ್ರ ಹಾಗೂ ೧ ವರ್ಷ ೩ ತಿಂಗಳು ಪ್ರಾಯದ ಪುತ್ರಿಯಿದ್ದಾರೆ.
ನಿನ್ನೆ ರಾತ್ರಿ ಪೋಷಕರ ಮನೆಗೆ ತೆರಳುತ್ತಿದ್ದ ಸಂದರ್ಭ ಅವಘಡ ಸಂಭವಿಸಿದ್ದು, ಸ್ಥಳದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಅವಘಡದಿಂದ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತ ಸತೀಶ್ ಪತ್ನಿ ಸೇರಿದಂತೆ ಈರ್ವರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.
ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸ ಲಾಗಿದ್ದು, ಸ್ವಗ್ರಾಮ ವಾರಂಚಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.