ಮಡಿಕೇರಿ, ಫೆ. ೨೫: ಸೋಮವಾರಪೇಟೆ ತಾಲೂಕು, ಶನಿವಾರಸಂತೆ ಹೋಬಳಿ, ದುಂಡಳ್ಳಿ ಗ್ರಾಮದ ಮಾರ್ಗವಾಗಿ ತೋಯಳ್ಳಿ ಗ್ರಾಮದ ಪುರುಷೋತ್ತಮ ಅವರ ಮನೆಯ ತನಕ ರಸ್ತೆ ಅಭಿವೃದ್ಧಿಗೆ ಅಡಚಣೆಯಾಗುವ ವಿವಿಧ ಕಾಡುಜಾತಿ ೭೦ ಮರಗಳು ಹಾಗೂ ೧ ಬೀಟೆ ಮರವನ್ನು ಹಾಗೂ ಶಿರಹ ಗ್ರಾಮದ ಶ್ರೀ ಧರ್ಮಣ್ಣ ಅವರ ಮನೆಯಿಂದ ದೊಡ್ಡಬಿಳಹ ಗ್ರಾಮದ ಮುಳ್ಳುಗೇಟ್ ತನಕ ಸದರಿ ೮೫ ವಿವಿಧ ಕಾಡು ಜಾತಿಯ ಮರಗಳು ಮತ್ತು ೩ ಬೀಟೆ ಮರಗಳನ್ನು ಹಾಗೂ ಕ್ಯಾತೆ ಗ್ರಾಮದ ಪ್ರೇಮ್ ಕುಮಾರ್ ಅವರ ಮನೆಯಿಂದ ಕೊಡ್ಲಿಪೇಟೆ ನಗರ ನಿವಾಸಿ ರೇಣುಕ ಅವರ ಮನೆಯ ತನಕ ಈ ೪೫ ವಿವಿಧ ಕಾಡು ಜಾತಿಯ ಮರಗಳು ಮತ್ತು ೨ ಬೀಟೆ ಮರಗಳು ಹೀಗೆ ಒಟ್ಟು ೨೦೦ ಕಾಡುಜಾತಿ ಮರಗಳು ಮತ್ತು ೬ ಬೀಟೆ ಮರಗಳನ್ನು ಕಡಿದು ಸರ್ಕಾರಿ ನಾಟಕ ಸಂಗ್ರಹಾಲಯ, ಆನೆಕಾಡುವಿಗೆ ಸಾಗಿಸಲು ಕೋರಿರುತ್ತಾರೆ.

ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ತಾ. ೨೫ ರೊಳಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವಿಭಾಗ, ಮಡಿಕೇರಿ ಕಚೇರಿಗೆ ಸಲ್ಲಿಸಬೇಕಾಗಿ ಈ ಮೂಲಕ ತಿಳಿಸಿದೆ. ನಿಗಧಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ಅವರು ತಿಳಿಸಿದ್ದಾರೆ.