ಕೂಡಿಗೆ, ಫೆ. ೨೫: ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಅಣೆಕಟ್ಟೆಯಿಂದ ಜಿಲ್ಲೆ ಮತ್ತು ಪಕ್ಕದ ಜಿಲ್ಲೆಗಳಾದ ಮೈಸೂರು, ಹಾಸನ ಜಿಲ್ಲೆಯ ಆರು ತಾಲೂಕು ವ್ಯಾಪ್ತಿಗಳಿಗೆ ಬೇಸಾಯಕ್ಕೆ ಸಂಬAಧಿಸಿದAತೆ ಎಡದಂಡೆ ಮತ್ತು ಬಲದಂಡೆಯ ಮೂಲಕ ನೀರನ್ನು ನಾಲೆಯ ಮೂಲಕ ಹರಿಸ ಲಾಗುತ್ತಿದೆ. ಆದರೆ, ಇದುವರೆಗೂ ಮುಖ್ಯ ನಾಲೆಯ ದುರಸ್ತಿ ಕಾಮಗಾರಿಗಳು ನಡೆಯದೆ, ನಾಲೆಯಲ್ಲಿ ಹೆಚ್ಚು ನೀರು ಸೋರಿಕೆ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ತೋಡುಗಳ ಮೂಲಕ ನದಿಗೆ ನೀರು ಹರಿಯುತ್ತಿತ್ತು. ಇದರಿಂದಾಗಿ ಮುಖ್ಯ ನಾಲೆಯಲ್ಲಿ ನೀರಿನ ಹರಿಯುವಿಕೆ ಪ್ರಮಾಣವು ಕಡಿಮೆಯಾಗುತ್ತಿದ್ದ ಹಿನ್ನೆಲೆಯಲ್ಲಿ ರೂ. ೪೯ ಕೋಟಿ ವೆಚ್ಚದಲ್ಲಿ ಮುಖ್ಯ ನಾಲೆ ಕಾಂಕ್ರೀಟಿಕರಣ ಆರಂಭಗೊAಡು ಅಚ್ಚುಕಟ್ಟು ರೈತರ ಬೇಡಿಕೆಯ ಅನುಗುಣವಾಗಿ ಕಾಮಗಾರಿಯು ಭರದಿಂದ ಸಾಗುತ್ತಿದೆ.

ಹಾರಂಗಿಯ ಅಣೆಕಟ್ಟೆಯ ಮುಖ್ಯ ನಾಲೆಯ ಒಂದನೆಯ ತೂಬಿನಿಂದ ಆರನೇ ತೂಬಿನವರೆಗೆ ದುರಸ್ತಿ, ಮತ್ತು ಮುಖ್ಯ ನಾಲೆಯ ಮೇಲ್ಬಾಗದಲ್ಲಿ ರಸ್ತೆಯ ನಿರ್ಮಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಕಿರು ಸೇತುವೆ ನಿರ್ಮಾಣ, ಸೇರಿದಂತೆ ಮುಖ್ಯ ನಾಲೆಯ ಎರಡೂ ಬದಿಗಳಲ್ಲಿ ಕಾಂಕ್ರೀಟಿಕರಣ ಮತ್ತು ಮುಖ್ಯ ನಾಲೆಯು ಕಿರಿದಾದ ಸ್ಥಳಗಳಲ್ಲಿ ಬೆಟ್ಟ ಕುಸಿಯದ ಹಾಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಒಳಭಾಗದಲ್ಲಿ ನಾಲೆಯ ನಿರ್ಮಾಣ ಅದೇ ಜಾಗದಲ್ಲಿ ಮೇಲ್ಭಾಗದಲ್ಲಿ ಸಂಪೂರ್ಣವಾಗಿ ಮುಚ್ಚುವಿಕೆಯ ಮೂಲಕ ಮಾಲೆಯಲ್ಲಿ ನೀರು ಸರಾಗವಾಗಿ ಹರಿಯಲು ಸೇರಿದಂತೆ ವಿವಿಧ ಕಾಮಗಾರಿಗಳು ಇಲಾಖೆಯ ಕ್ರಿಯಾ ಯೋಜನೆಯ ಅನುಗುಣವಾಗಿ ಗುತ್ತಿಗೆದಾರರು ನೂತನ ಕಾಂಕ್ರೀಟಿಕರಣ ಹೊಸ ತಂತ್ರಜ್ಞಾನದ ಯಂತ್ರಗಳನ್ನು ಬಳಕೆ ಮಾಡಿಕೊಂಡು ಆರಂಭಿಸಲಾಗಿದೆ. ಈಗಾಗಲೇ ಮೂರನೇಯ ತೂಬಿನ ವರೆಗೆ ಭರದಿಂದ ಕಾಮಗಾರಿಯು ನಡೆದಿದೆ. ಅದರಂತೆಯೇ ಉಳಿದ ಕಾಮಗಾರಿಯನ್ನು ಹಗಲು ರಾತ್ರಿ ಎನ್ನದೇ ನೂರಾರು ಕಾರ್ಮಿಕರನ್ನು ಒಳಗೊಂಡು ಕಾಮಗಾರಿಯು ನಡೆಯುತ್ತಿದೆ.

ಹಾರಂಗಿ ಅಚ್ಚುಕಟ್ಟು ಪ್ರದೇಶದ ಬಹುದಿನಗಳ ರೈತರ ಮತ್ತು ಈ ವ್ಯಾಪ್ತಿಯ ಗ್ರಾಮಸ್ಥರ ಬೇಡಿಕೆಯ ಅನುಗುಣವಾಗಿ ಕಳೆದ ವಾರ ಕಾಮಗಾರಿಗಳನ್ನು ಏಪ್ರಿಲ್ ತಿಂಗಳುಗಳ ಒಳಗೆ ಮುಗಿಸುವಂತೆ ಮತ್ತು ಮುಂದಿನ ಬೇಸಾಯಕ್ಕೆ ಯಾವುದೆ ರೀತಿಯ ತೊಂದರೆಗಳನ್ನು ಮಾಡದಂತೆ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮೂರು ಗ್ರಾಮಗಳ ರೈತರು ಮನವಿಯನ್ನು ಸಲ್ಲಿಸಿದರು.

ಅದರಂತೆ ಗುತ್ತಿಗೆದಾರ ನೂತನ ಯಂತ್ರಗಳ ಬಳಕೆಯಿಂದ ಮತ್ತು ನುರಿತ ತಾಂತ್ರಿಕ ಕಾರ್ಮಿಕ ಸಹಯೋಗದೊಂದಿಗೆ ಮುಂದಿನ ದಿನಗಳಲ್ಲಿ ರೈತರಿಗೆ ನೀರು ಹರಿಸುವಿಕೆಗೆ ಯಾವುದೇ ರೀತಿಯ ತೊಂದರೆಗಳು ಅಗದಂತೆ ಗುತ್ತಿಗೆದಾರರಿಗೆ ಇಲಾಖೆಯ ವತಿಯಿಂದ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಾಮಗಾರಿಯು ಭರದಿಂದ ಸಾಗುತ್ತಿದೆ.

ಈ ಸಾಲಿನಲ್ಲಿ ಕೊನೆಯ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡುವ ಎಲ್ಲಾ ಯೋಜನೆ ಅನುಗುಣವಾಗಿ ಕಾಮಗಾರಿಗಳು ಆರಂಭಗೊAಡಿವೆ ಎಂದು ಹಾರಂಗಿ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಇ. ಪುಟ್ಟಸ್ವಾಮಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಹಾರಂಗಿ ನೀರಾವರಿ ಇಲಾಖೆಯ ಅಭಿಯಂತರ ಕೆ.ಕೆ. ರಘುಪತಿ, ಸಹಾಯಕ ಅಭಿಯಂತರ ದೇವೆಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಇ. ಪುಟ್ಟಸ್ವಾಮಿ, ಸೇರಿದಂತೆ ಸಹಾಯಕ ಇಂಜಿನಿಯರ್‌ಗಳು ಗುತ್ತಿಗೆದಾರರ ಮೇಲ್ವಿಚಾರಕ ಹಾಜರಿದ್ದರು.

- ಕೆ.ಕೆ. ನಾಗರಾಜಶೆಟ್ಟಿ.