ವೀರಾಜಪೇಟೆ, ಫೆ. ೨೪: ಅಪಘಾತ ಪ್ರಕರಣ ಒಂದರಲ್ಲಿ ರಾಜಿ ಮಾಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರು ಹಣ ವಸೂಲಿ ಮಾಡಿರುವುದಲ್ಲದೆ. ಹಣವನ್ನು ಹಿಂತಿರುಗಿಸಿ ಕೇಳಿದಾಗ ಕೊಲೆ ಬೆದರಿಕೆ ಒಡ್ಡಿರುವ ಕುರಿತು ಚೆಂಬೆಬೆಳ್ಳ್ಳೂರು ಗ್ರಾಮದ ಮಾರಿಯಮ್ಮ ಕಾಲೋನಿ ನಿವಾಸಿ ಹೆಚ್.ಎಸ್. ಗನನ್ ಎಂಬವರು ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
೧೯.೧೨.೨೩ ರಂದು ತನ್ನ ಸಂಬAಧಿಕರಾದ ಸುಧೀರ್ ಹಾಗೂ ಭರತ್ ಬೈರಂಬಾಡ ಗ್ರಾಮದಲ್ಲಿ ಹೊಂಡಾಸಿಟಿ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಆಕಸ್ಮಿಕವಾಗಿ ಅಪಘಾತ ಸಂಭವಿಸಿದೆ. ಅವರುಗಳು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಒಳರೋಗಿಗಳಾಗಿ ದಾಖಲಾಗಿದ್ದರು. ಅವರನ್ನು ನೋಡಲು ತಾನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಂತಹ ಸಂದರ್ಭದಲ್ಲಿ ವೀರಾಜಪೇಟೆಯ ಹೆಚ್.ಜಿ. ಗೋಪಾಲ್ ಎಂಬವರು ರೋಗಿಗಳ ಯೋಗಕ್ಷೇಮ ವಿಚಾರಿಸುವ ರೀತಿಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತ ಪ್ರಕರಣ ಗಂಭೀರವಾಗಿದ್ದು ಕೆಲವರಿಗೆ ಹಣ ನೀಡಿ ಪ್ರಕರಣ ಮುಚ್ಚಿ ಹಾಕಲು ಸುಮಾರು ಖರ್ಚು ವೆಚ್ಚ ಇದೆ ಎಂದು ಹೇಳಿದಾಗ ಗಗನ್ ತನ್ನ ಸಂಬAಧಿಕರ ಪರವಾಗಿ ರೂ. ೧೫ ಸಾವಿರ ಹಣ ಗೋಪಾಲ್‌ಗೆ ನೀಡಿದ್ದಾರೆ. ಪೊಲೀಸರು ಸುಧೀರ್ ಹಾಗೂ ಭರತ್ ಅವರ ಮೇಲೆ ಅಪಘಾತ ಪ್ರÀಕರಣ ದಾಖಲಿಸಿಕೊಂಡಿದ್ದಾರೆ. ಇಬ್ಬರಿಗೂ ನ್ಯಾಯಾಲಯದಿಂದ ನೋಟೀಸ್ ಬಂದ ಸಂದರ್ಭದಲ್ಲಿ ಗೋಪಾಲ್ ಅವರಿಗೆ ಕರೆ ಮಾಡಿ ಕೇಳಿದಾಗ ಹಣ ಕೊಟ್ಟಿದ್ದೇನೆ. ಪ್ರಕರಣ ರಾಜಿ ಆಗುತ್ತದೆ ಎಂದು ಸಬೂಬು ಹೇಳಿಕೆ ನೀಡಿದ್ದಾರೆ. ತಮ್ಮ ಹಣ ವಾಪಾಸು ಕೊಡದೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.