ವೀರಾಜಪೇಟೆ, ಫೆ. ೨೧: ವೀರಾಜಪೇಟೆ ತಾಲೂಕು ಮತ್ತು ಪೊನ್ನಂಪೇಟೆ ತಾಲೂಕಿನ ೩೮ ಗ್ರಾಮ ಪಂಚಾಯಿತಿಗಳಲ್ಲಿ ಜಾಥಾ ಸಾಗಿ ವೀರಾಜಪೇಟೆ ಪುರಸಭೆ ವ್ಯಾಪ್ತಿಗೆ ಆಗಮಿಸಿದ್ದ ಸಂವಿಧಾನ ಜಾಗೃತಿ ಜಾಥಾವನ್ನು ಪುರಸಭೆ ಅಧಿಕಾರಿಗಳು ಮತ್ತು ಸದಸ್ಯರು ಬರಮಾಡಿಕೊಂಡರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಆಡಳಿತ, ಶಾಲಾ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾಥಾದ ಸಮಾರೋಪ ಸಮಾರಂಭ ಗಡಿಯಾರ ಕಂಬದ ಬಳಿಯಿರುವ ಕಾರು ನಿಲ್ದಾಣದಲ್ಲಿ ನಡೆಯಿತು. ಸಂವಿಧಾನ ಶಿಲ್ಪಿ ಡಾ, ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅತಿಥಿ ಗಣ್ಯರು ಪುಷ್ಪನಮನ ಸಲ್ಲಿಸಿದರು.

ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂವಿಧಾನ ಜಾಥಾದ ನೋಡಲ್ ಅಧಿಕಾರಿ ಬಾಲ ಸುಬ್ರಮಣ್ಯ, ಅಂಬೇಡ್ಕರ್ ಭವನ ಸಮಿತಿಯ ವಿ.ಕೆ. ಸತೀಶ್ ಕುಮಾರ್, ಮಹದೇವ್, ದಲಿತ ಸಂಘರ್ಷ ಸಮಿತಿಯ ಗಾಯತ್ರಿ ನರಸಿಂಹ, ಹೆಚ್. ಗೋಪಾಲ ಭಾಗವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಪುರಸಭೆ ಸದಸ್ಯ ವಿ.ಆರ್. ರಜನಿಕಾಂತ್ ವಹಿಸಿದ್ದರು. ಪುರಸಭೆ ಸದಸ್ಯ ಮೊಹ್ಮದ್ ರಾಫಿ ಸಂವಿಧಾನದ ಮಹತ್ವದ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಪುರಸಭೆ ಸದಸ್ಯರಾದ ಟಿ.ಎಂ. ಸುನಿತ ಜೂನ, ಹೆಚ್.ಪಿ. ಮಹದೇವ, ಫಸಿಹಾ ತಬಸಮ್, ಅಗಸ್ಟಿನ್ ಬೆನ್ನಿ ಉಪಸ್ಥಿತರಿದ್ದರು.

ಮುಖ್ಯಾಧಿಕಾರಿ ಚಂದ್ರ ಕುಮಾರ್ ಸ್ವಾಗತಿಸಿದರು. ಬಿಆರ್‌ಸಿ ಗೀತಾಂಜಲಿ ಮತ್ತು ರೋಟರಿ ಶಾಲಾ ಮುಖ್ಯೋಪಾಧ್ಯಾಯಿನಿ ವಿಶಾಲಾಕ್ಷಿ ನಿರೂಪಿಸಿ. ಪುರಸಭೆ ಸಿಬ್ಬಂದಿ ಸುಲೇಖ ವಂದಿಸಿದರು.

ಭಾರತದ ಸಂವಿಧಾನದ ಕುರಿತು ೧೧೫ ಶಾಲೆಗಳ ೧೬೮ ವಿದ್ಯಾರ್ಥಿಗಳಿಗೆ ಸ್ಪರ್ಧಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಅತಿಥಿಗಳು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ವಿವಿಧ ಸಾಂಸ್ಕೃತಿಕ ನೃತ್ಯ, ಪೂಜಾ ಕುಣಿತ ನಡೆಯಿತು.