ಮಡಿಕೇರಿ, ಫೆ. ೨೧: ರಾಷ್ಟಿçÃಯ ಕೃಷಿ ವಿಕಾಸ ಯೋಜನೆ (ಖಏಗಿಙ-ಖಂಈಖಿAAಖ) ಪ್ರಾಯೋಜಿತ “ಕಾಳುಮೆಣಸಿನಲ್ಲಿ ಉತ್ಪಾದನಾ ಮತ್ತು ನರ್ಸರಿ ನಿರ್ವಹಣೆ ವೈಜ್ಞಾನಿಕ ತಂತ್ರಜ್ಞಾನಗಳು” ಎಂಬ ವಿಷಯದ ಬಗ್ಗೆ ಒಂದು ದಿನದ ರೈತರ ತರಬೇತಿ ಕಾರ್ಯಕ್ರಮವನ್ನು ಅಪ್ಪಂಗಳದ ಐ.ಸಿ.ಎ.ಆರ್. ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.
ತರಬೇತಿ ಕಾರ್ಯಾಗಾರವನ್ನು ಐ.ಸಿ. ಎ. ಆರ್. ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ವಿಜ್ಞಾನಿಗಳಾದ ಡಾ. ಎಂ.ಎಸ್. ಶಿವಕುಮಾರ್, ಸ್ವಾಗತಿಸಿದರು. ಕಾರ್ಯಕ್ರಮವನ್ನು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆ.ಎಂ. ಸೋಮಸುಂದ್ರ, ಜಂಟಿ ಕೃಷಿ ಉದ್ಘಾಟಿಸಿ, ಸಂಬಾರ ಬೆಳೆಗಳ ಉತ್ಪಾದಕತೆ ಹೆಚ್ಚಿಸುವುದರ ಜೊತೆಗೆ ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಪ್ರಾಮುಖ್ಯತೆ ಯನ್ನು ತಿಳಿಸಿದರು. ಸಮಗ್ರ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಕೃಷಿಕರಿಗೆ ಉಪಯೋಗವಾಗುವ ಸರ್ಕಾರದ ಇತರೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರದ ಮುಖ್ಯಸ್ಥ ಅಂಕೆಗೌಡ ಮಾತನಾಡಿ, ಐ.ಐ.ಎಸ್.ಆರ್., ಪ್ರಾದೇಶಿಕ ಕೇಂದ್ರದ ಕಾಳುಮೆಣಸಿನ ಸಂಶೋಧನ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ತರಬೇತಿ ಕಾರ್ಯಾಗಾರದಲ್ಲಿ ಕಾಳುಮೆಣಸಿನ ತಳಿ ವೈವಿಧ್ಯತೆ, ಗುಣಮಟ್ಟದ ಸಸ್ಯಾಭಿವೃದ್ಧಿ ವಿಧಾನಗಳು, ವೈಜ್ಞಾನಿಕ ಕೃಷಿ ಪದ್ಧತಿಗಳು, ರೋಗ ಮತ್ತು ಕೀಟ ನಿರ್ವಹಣೆ ಬಗ್ಗೆ ಐ.ಸಿ.ಎ.ಆರ್.-ಐ.ಐ.ಎಸ್.ಆರ್. ಪ್ರಾದೇಶಿಕ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದರು.
ವಿಜ್ಞಾನಿಗಳಾದ ಡಾ. ಹೊನ್ನಪ್ಪ ಆಸಂಗಿ, ವಂದಿಸಿದರು. ಐ.ಐ.ಎಸ್.ಆರ್.ನ ಸಂಬಾರ ಬೆಳೆಗಳ ತಳಿಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡುವ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ತರಬೇತಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹಾಗೂ ಕೇರಳದ ಕಾಸರಗೋಡುನಿಂದ ೧೫೦ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.