ಸಿದ್ದಾಪುರ, ಫೆ. ೨೨: ಜಿಲ್ಲೆಯ ಜೇನು ಕುರುಬ ಜನಾಂಗದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕಾಗಿ ಒತ್ತಾಯಿಸಿ ಆದಿವಾಸಿ ಹೋರಾಟ ಗಾರ್ತಿ ಮುತ್ತಮ್ಮ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು. ೧೯೬೫ರಲ್ಲಿ ಹುಣಸೂರು ತಾಲೂಕಿನಲ್ಲಿ ಇದ್ದಂ ತಹ ಜೇನು ಕುರುಬ ಕಚೇರಿಯನ್ನು ೨೦೦೬ರಲ್ಲಿ ಸರಕಾರವು ಸ್ಥಗಿತಗೊಳಿಸಿ ರುತ್ತದೆ. ಅದನ್ನು ಮರು ಸ್ಥಾಪಿಸಬೇಕು ಹಾಗೂ ಪಿ.ವಿ.ಟಿ.ಜಿ. ಅನುದಾನವನ್ನು ಸಮುದಾಯಕ್ಕೆ ತಲುಪಿಸುವಂತಾಗ ಬೇಕು. ೨೦೦೬ ಹಾಗೂ ೨೦೦೭ರಲ್ಲಿ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ೨೦೧೨ರ ತಿದ್ದುಪಡಿ ಕಾಯ್ದೆ ಪ್ರಕಾರ ಜನಾಂಗದ ಕುಟುಂಬಕ್ಕೆ ತಲಾ ಐದು ಎಕರೆ ಕೃಷಿ ಭೂಮಿಯನ್ನು ನೀಡಬೇಕು ಹಾಗೂ ಜೇನು ಕುರುಬ ಜನಾಂಗದ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಿಕೊಡಬೇಕೆಂದು ಮನವಿ ಪತ್ರ ಸ್ವೀಕರಿಸಿದ ಮುಖ್ಯಮಂತ್ರಿಗಳು ಸ್ಥಳದಲ್ಲಿದ್ದ ಮೈಸೂರು ಜಿಲ್ಲಾಧಿಕಾರಿ ಬಳಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಜೆಕೆ ಮುತ್ತಮ್ಮ ತಿಳಿಸಿದರು.

ಬೆಂಗಳೂರಿನ ಮುಖ್ಯಮಂತ್ರಿಗಳ ನಿವಾಸದಲ್ಲಿ ಮನವಿ ಪತ್ರ ನೋಡಿ ಕೋರಲಾಯಿತು. ಈ ಸಂದರ್ಭದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರದ ಎ.ಎಸ್. ಪೊನ್ನಣ್ಣ, ನಿತಿನ್, ಜೆಕೆ ಕುಶಾಲ್, ಸ್ವಾಮಿಯಪ್ಪ ಹಾಗೂ ಬೋಜ ಹಾಜರಿದ್ದರು.