ಭಾಗಮಂಡಲ, ಫೆ. ೨೨: ಬಡವರ ಮನೆಗಳಿಗೆ ಉಚಿತ ವಿದ್ಯುತ್ ಪೂರೈಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಬೆಳಕು ಯೋಜನೆಯು ಭಾಗಮಂಡಲ ವ್ಯಾಪ್ತಿಯಲ್ಲಿ ಅಗೋಚರವಾಗಿದೆ.

ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೨ ಮನೆಗಳಿಗೆ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಮಂಜೂರಾಗಿದ್ದರೂ ಈ ಮನೆಗಳು ಬೆಳಕು ಕಂಡಿಲ್ಲ. ಮನೆಗಳಲ್ಲಿರುವ ಬಡವರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಅಷ್ಟು ಮಾತ್ರವಲ್ಲ ಕತ್ತಲೆಯಲ್ಲಿ ಕಾಲ ಕಳೆದ ಮಂದಿಗೆ ಚೆಸ್ಕಾಂ ಇಲಾಖೆ ವಿದ್ಯುತ್ ಬಿಲ್ ನೀಡುವುದರ ಮೂಲಕ ಶಾಕ್ ನೀಡಿದೆ.

ಭಾಗಮಂಡಲ ಗ್ರಾಮ ಪಂಚಾಯಿತಿಯಲ್ಲಿ ೧೨ ಜನತಾ ಮನೆಗಳಿಗೆ ಇನ್ನು ವಿದ್ಯುತ್ ಕಂಬಗಳು ಬಂದಿಲ್ಲ, ತಂತಿ ಎಳೆದಿಲ್ಲ, ವಿದ್ಯುತ್ ಸಂಪರ್ಕ ಒದಗಿಸಿಲ್ಲ. ಏನು ಇಲ್ಲದ ಮನೆಗಳಿಗೆ ವಿದ್ಯುತ್ ಬಿಲ್ಲಂತೂ ಬಂದಿದೆ. ಇಲ್ಲಿನ ನಿವಾಸಿ ವಯೋವೃದ್ಧೆ ಗಂಗಮ್ಮ (೭೫) ಮಾತನಾಡಿ ಗ್ರಾಮ ಪಂಚಾಯಿತಿ ವತಿಯಿಂದ ಜನತಾ ಮನೆ ಕಟ್ಟಿಸಿ ಕೊಟ್ಟಿದ್ದಾರೆ .ವಿದ್ಯುತ್ ಸೌಕರ್ಯ ಕಲ್ಪಿಸಿ ಕೊಡಿ ಎಂದು ನಾಲ್ಕು ವರ್ಷಗಳ ಹಿಂದೆಯೇ ಮನವಿ ಸಲ್ಲಿಸಲಾಗಿದೆ. ಇನ್ನೂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ .ಆದರೆ ರೂ.೨,೭೦೦ ಬಿಲ್ ಬಂದಿದೆ ಎಂದು ಅವಲತ್ತುಕೊಂಡರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ ಪ್ರತಿಕ್ರಿಯಿಸಿ ಭಾಗಮಂಡಲ ಗ್ರಾಮ ಪಂಚಾಯಿತಿಗೆ ಒಳಪಟ್ಟ ಐದು ಗ್ರಾಮಗಳಾದ ತಣ್ಣಿಮಾನಿ, ತಾವೂರು, ಕೋರಂಗಾಲ, ಭಾಗಮಂಡಲದ ಕೆಲವು ಫಲಾನುಭವಿಗಳಿಗೆ ಜನತಾ ಮನೆ ನಿರ್ಮಿಸಲಾಗಿದೆ. ಗುತ್ತಿಗೆದಾರರು ೩-೪ ಮನೆಗಳನ್ನು ಪೂರ್ಣಗೊಳಿಸದೆ ಬಿಟ್ಟಿದ್ದಾರೆ. ಆದರೆ ಎಲ್ಲಾ ೧೨ ಮನೆÀಗಳಿಗೆ ಮಡಿಕೇರಿಯಲ್ಲೇ ಕುಳಿತು ಚೆಸ್ಕಾಂ ಅಧಿಕಾರಿಗಳು ಆರ್ ಆರ್ ನಂಬರ್ ನೀಡಿದ್ದು ಇದೀಗ ವಿದ್ಯುತ್ ಬಿಲ್ಲು ನೀಡಿದ್ದಾರೆ. ಈ ಸಮಸ್ಯೆಯನ್ನು ಇಲಾಖೆ ಬಗೆಹರಿಸುವಂತೆ ಒತ್ತಾಯಿಸಿದರು.

ಸಂಬAಧ ಚೆಸ್ಕಾಂ ಕಾರ್ಯಪಾಲಕ ಅಭಿಯಂತರೆ ಅನಿತಾ ಬಾಯಿ ಪ್ರತಿಕ್ರಿಯಿಸಿ ಬಿಲ್ ನೀಡುವಿಕೆ ಸಂಬAಧ ನಡೆದಿರುವ ತಾಂತ್ರಿಕ ದೋಷ ಸರಿಪಡಿಸುವ ಭರವಸೆ ನೀಡಿದ್ದಾರೆ.