*ಗೋಣಿಕೊಪ್ಪ, ಫೆ. ೨೨: ಹಾತೂರು ವಲಯ ಕಾಂಗ್ರೆಸ್ ವತಿಯಿಂದ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯರಾಗಿ ನೇಮಕವಾದ ತೆರೆಸ ವಿಕ್ಟರ್ ಅವರನ್ನು ಸನ್ಮಾನಿಸಲಾಯಿತು.

ಹಾತೂರು ವಲಯ ಕಾಂಗ್ರೆಸ್ ಅಧ್ಯಕ್ಷ ಕೊಕ್ಕಂಡ ರೋಶನ್ ಅವರ ಅಧ್ಯಕ್ಷತೆಯಲ್ಲಿ ಸನ್ಮಾನ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.

ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ಕುಲ್ಲಚಂಡ ಪ್ರಮೋದ್‌ಗಣಪತಿ, ಉಪಾಧ್ಯಕ್ಷರಾಗಿ ಆಯ್ಕೆಯಾದ ಮಂಜುಳ ಎಂ. ಅವರನ್ನು ಇದೇ ಸಂದರ್ಭ ಗೌರವಿಸಲಾಯಿತು.ಪಕ್ಷಕ್ಕಾಗಿ ದುಡಿದವರನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಕೈಬಿಡುವುದಿಲ್ಲ. ಅವರಿಗೆ ಅರ್ಹತೆಯ ತಕ್ಕ ಜವಾಬ್ದಾರಿಯನ್ನು ನೀಡುವ ಮೂಲಕ ಗೌರವಿಸುತ್ತದೆ. ಹಿರಿಯರು ಹಾಕಿಕೊಟ್ಟ ಪಕ್ಷದ ಹಾದಿಯಲ್ಲಿ ದ್ಯೇಯ ಉದ್ದೇಶಗಳನ್ನಿಟ್ಟು ಪಕ್ಷಕ್ಕಾಗಿ ದುಡಿದಾಗ ಅದರ ಫಲ ಮುಂದೊAದು ದಿನ ದಕ್ಕುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಹೇಳಿದರು.

ಹಿರಿಯ ಕಾಂಗ್ರೆಸ್ ಪಕ್ಷದ ಪ್ರಮುಖ ಕೊಕ್ಕಂಡ ಕಾವೇರಪ್ಪ ಮಾತನಾಡಿದರು.

ತಾಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಲೀರ ಸಾದಲಿ, ಹಿರಿಯರಾದ ವಿ.ಟಿ. ವಾಸು, ದೊಡ್ಮನೆ ವಿಠಲ ಗೌಡ, ಗೋಣಿಕೊಪ್ಪ ಗ್ರಾ.ಪಂ. ಸದಸ್ಯ ಚೆಪುö್ಪಡೀರ ದ್ಯಾನ್ ಸುಬ್ಬಯ್ಯ, ಮಾಜಿ ಸದಸ್ಯ ರಾಜಶೇಖರ್, ಪ್ರಮುಖರಾದ ಶಿವಾಜಿ, ನೂರೇರ ಧನ್ಯ, ಸಿ.ಆರ್. ಬೇಬಿ, ಪುಲಿಯಂಡ ರೋಷನ್, ಶ್ರೇಯಸ್, ಬೊಳ್ಳಿ, ಸುರೇಶ್, ಅಮ್ಜು, ಸುರೇಶ್, ಮಧುಸೂದನ್ ಮತ್ತು ಹಾತೂರು ವಲಯ ಕಾಂಗ್ರೆಸಿನ ಬೂತ್ ಅಧ್ಯಕ್ಷರು, ಕಾರ್ಯಕರ್ತರು ಇದ್ದರು.