ವೀರಾಜಪೇಟೆ, ಫೆ. ೨೨: ಇಲ್ಲಿನ ಕಾವೇರಿ ಶಾಲೆಯ ನರ್ಸರಿ, ಎಲ್‌ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳು ವೀರಾಜಪೇಟೆಯ ಪ್ರತಿಷ್ಠಿತ ಮಾರುಕಟ್ಟೆ ಮಳಿಗೆಗೆ ಕ್ಷೇತ್ರ ಪ್ರವಾಸ ಕೈಗೊಂಡರು.

ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಿಕಿ ಅಮೃತ ಅರ್ಜುನ್ ಹಾಗೂ ಸಹ ಶಿಕ್ಷಕಿ ನಿವ್ಯ ಪೊನ್ನಣ್ಣ ವಿವಿಧ ರೀತಿಯ ತರಕಾರಿಗಳು ಹಾಗೂ ಹಣ್ಣುಗಳ ಹೆಸರುಗಳನ್ನು ಪರಿಚಯ ಮಾಡಿಕೊಟ್ಟರು. ನಂತರ ದಿನಸಿ ಪದಾರ್ಥಗಳನ್ನು ಕೊಳ್ಳುವ ಮತ್ತು ಮಾರುವ ಕ್ರಮವನ್ನು ಮಕ್ಕಳಿಗೆ ಹೇಳಿಕೊಟ್ಟರು. ಈ ಸಂದರ್ಭ ಕಾವೇರಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸುದೇಶ್ ಬಿ.ಎಸ್, ಶಿಕ್ಷಕಿಯರಾದ ವೀಣಾ, ಪವಿತ, ಸುರಯ್ಯ ಎಂ.ಕೆ, ತುಳಸಿ ಹಾಗೂ ದೈಹಿಕ ಶಿಕ್ಷಕಿ ಲಾವಣ್ಯ ಹಾಜರಿದ್ದರು.