ನಾಪೋಕ್ಲು, ಫೆ. ೨೧: ಸ್ಥಳೀಯ ನಂದಿನಿ ಆಸ್ಪತ್ರೆಯ ಬೆಳ್ಳಿಹಬ್ಬದ ಪ್ರಯುಕ್ತ ತಾ. ೨೫ ರಂದು ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿ, ಎ.ಕೆ. ಸುಬ್ಬಯ್ಯ, ಪೊನ್ನಮ್ಮ ಎಜುಕೇಶನ್ ಟ್ರಸ್ಟ್, ನಾಪೋಕ್ಲು ಕೊಡವ ಸಮಾಜ ಸಾಂಸ್ಕೃತಿಕ ಕ್ರೀಡಾ ಮತ್ತು ಮನರಂಜನಾ ಕೂಟ ಹಾಗೂ ನಾಪೋಕ್ಲು ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಮ ಟ್ರಸ್ಟ್ ವಿದ್ಯಾ ಸಂಸ್ಥೆಯಲ್ಲಿ ನುರಿತ ತಜ್ಞರಿಂದ ಉಚಿತವಾಗಿ ರೋಗಿಗಳ ತಪಾಸಣೆ, ಶಸ್ತçಚಿಕಿತ್ಸೆ ಮತ್ತು ಇನ್ನಿತರ ಚಿಕಿತ್ಸೆಗಳನ್ನು ನಡೆಸಲಾಗುವದು ಎಂದು ನಂದಿನಿ ಆಸ್ಪತ್ರೆಯ ನಿರ್ದೇಶಕ ಹಾಗೂ ನಾಪೋಕ್ಲು ಕೊಡವ ಸಮಾಜ ಸಾಂಸ್ಕೃತಿಕ ಕ್ರೀಡಾ ಮತ್ತು ಮನೋರಂಜನ ಕೂಟದ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾ. ೨೫ ರಂದು ನಡೆಯುವ ಕಾರ್ಯಕ್ರಮಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ, ಎಂ.ಎಲ್.ಸಿ. ಮಂಡೇಪAಡ ಸುಜಾ ಕುಶಾಲಪ್ಪ ಮಾಜಿ ಎಂ.ಎಲ್.ಸಿ. ಶಾಂತೆಯAಡ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಆಗಮಿಸಲಿದ್ದಾರೆ ಎಂದರು. ಈ ಶಿಬಿರ ನಾಪೋಕ್ಲು ವ್ಯಾಪ್ತಿಗೆ ಮಾತ್ರ ಸೀಮಿತ ಅಲ್ಲ. ಇಡೀ ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

ಬೆAಗಳೂರು ಸಪ್ತಗಿರಿ ಮೆಡಿಕಲ್ ಕಾಲೇಜಿನ ಪ್ರತಿನಿಧಿ ನಿರಂಜನ್ ಶೆಟ್ಟಿ ಮಾತನಾಡಿ, ಕೊಡಗಿನಂತಹ ಪ್ರದೇಶದಲ್ಲಿ ಹೆಚ್ಚಿನ ರೋಗಿಗಳು ಆಯುಷ್ಮಾನ್, ಇಐಸಿಸಿ, ಯಶಸ್ವಿನಿಯಂತಹ ಸರಕಾರದ ಸವಲತ್ತುಗಳನ್ನು ಪಡೆದುಕೊಳ್ಳುವಲ್ಲಿ ಹಿಂದುಳಿದಿದ್ದಾರೆ. ಬೇರೆ ಆರೋಗ್ಯ ಶಿಬಿರಗಳಂತೆ ಈ ಶಿಬಿರದಲ್ಲಿ ತಪಾಸಣೆ ಮಾತ್ರ ಅಲ್ಲ. ಚಿಕಿತ್ಸೆಯನ್ನೂ ೆ ನೀಡಲಾಗುವುದು ಎಂದರು.

ಶಿಬಿರದಲ್ಲಿ ಹೃದಯ ರೋಗ, ನರರೋಗ, ಸ್ತನ ಕ್ಯಾನ್ಸರ್, ಗರ್ಭಕೊರಳಿನ ಕ್ಯಾನ್ಸರ್, ವೆರಿಕೋಸ್ ವೇನ್, ವಿನಸ್ ಅಲ್ಸ್ರ್, ಡಯಾಬಿಟಿಕ್ ಫೂಟ್ ಮತ್ತಿತರ ರೋಗಗಳ ಬಗ್ಗೆ ನುರಿತ ತಜ್ಞರಾದ ಡಾ. ಸುದೀರ್, ಡಾ. ಪ್ರದೀಪ್ ಕುಮಾರ್, ಡಾ. ನಟರಾಜ್ ಸಣ್ಣಪ್ಪನವರ್, ಡಾ. ಹೆಚ್.ಕೆ. ನಾಗರಾಜ್, ಡಾ. ಕೇಶವ್, ಡಾ. ಮೋನಿಶ್, ಡಾ. ಮನೋಜ್ ಗೌಡ, ಡಾ. ಕರನ್ ಶೆಟ್ಟಿ ಮತ್ತು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನುರಿತ ತಜ್ಞರು ಚಿಕಿತ್ಸೆ ನೀಡಲಿದ್ದಾರೆ ಎಂದರು.

ಗೋಷ್ಠಿಯಲ್ಲಿ ಕೊಡವ ಸಮಾಜ ಕ್ಲಬ್‌ನ ಉಪಾಧ್ಯಕ್ಷ ಕೊಂಡೀರ ನಂದಕುಮಾರ್, ಕಾರ್ಯದರ್ಶಿ ನಾಯಕಂಡ ದೀಪು ಚಂಗಪ್ಪ, ಜಂಟಿ ಕಾರ್ಯದರ್ಶಿ ಕರವಂಡ ಸೋಮಣ್ಣ, ನಿರ್ದೇಶಕರಾದ ಬೊಳ್ಳಚೆಟ್ಟಿರ ಸುರೇಶ್, ಕಲಿಯಂಡ ಕೌಶಿ, ಕಲಿಯಂಡ ದೀಪು ಚಿಣ್ಣಪ್ಪ, ಅರೆಯಡ ಗಣೇಶ್ ಬೆಳ್ಯಪ್ಪ ಇದ್ದರು.