ಸುಂಟಿಕೊಪ್ಪ, ಫೆ. ೨೦: ಟ್ಯಾಂಕ್ ನಿರ್ಮಾಣಕ್ಕೆಂದು ಭೂಮಿಯನ್ನು ಅಗೆಯುವ ಸಂದರ್ಭ ವ್ಯಕ್ತಿಯ ತಲೆಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿವೆ.
ಸುಂಟಿಕೊಪ್ಪ ಪಟ್ಟಣದಲ್ಲಿರುವ ಪೆಟ್ರೋಲ್ ಬಂಕ್ ಜಾಗದಲ್ಲಿ ಇವುಗಳು ಪತ್ತೆಯಾಗಿದೆ. ನಂತರ ಗದ್ದೆಹಳ್ಳಕ್ಕೆ ಕೊಂಡೊಯ್ದು ಮುಚ್ಚಲಾಗಿದೆ. ಹಲವು ದಶಕಗಳ ಹಿಂದೆ ಹೂಳಲಾದ್ದ ವ್ಯಕ್ತಿಯ ತಲೆ ಬುರುಡೆ ಮತ್ತು ಮೂಳೆಗಳು ಎಂದು ಮೇಲ್ನೋಟಕ್ಕೆ ಕಂಡುಬAದಿದೆ. ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಇದೀಗ ಇರುವ ಪೆಟ್ರೋಲ್ ಬಂಕ್ ಜಾಗದಲ್ಲಿ ಸ್ಮಶಾನವಿತ್ತು ಎನ್ನಲಾಗಿದೆ.
ಬ್ರಿಟಿಷರು ದೇಶ ತೊರೆದಾಗ ಈ ಜಾಗ ಮಡಿಕೇರಿಯ ಚರ್ಚ್ವೊಂದರ ಸುಪರ್ದಿಗೆ ನೀಡಲಾಯಿತು. ೧೯೫೦ರಲ್ಲಿ ಇದೇ ಜಾಗದಲ್ಲಿ ಪೆಟ್ರೋಲ್ ಬಂಕ್ ನಿರ್ಮಿಸಲಾಯಿತು. ಇಂದು ಪೆಟ್ರೋಲ್ ಬಂಕ್ ಜಾಗದಲ್ಲಿ ಹೊಸ ಟ್ಯಾಂಕ್ ಅಳವಡಿಸಲು ಜೆಸಿಬಿಯಿಂದ ಆಳವಾದ ಗುಂಡಿಯನ್ನು ತೋಡುತ್ತಿದ್ದಾಗ ಬ್ರಿಟಿಷರ ಕಾಲದಲ್ಲಿ ಹೂಳಲಾಗಿದ್ದ ವ್ಯಕ್ತಿಯ ತಲೆಬುರುಡೆ ಹಾಗೂ ಮೂಳೆಗಳು ಕಂಡುಬAದಿವೆ. ತುಂಡು ತುಂಡಾಗಿದ್ದ ಅಸ್ತಿಪಂಜರ ನೋಡಿ ಪೆಟ್ರೋಲ್ ಬಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಕೆಲಕಾಲ ದಂಗಾಗಿದ್ದರು. -ರಾಜು ರೈ