ಗೋಣಿಕೊಪ್ಪಲು, ಫೆ. ೨೦: ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಕಷ್ಟು ಅವ್ಯವಹಾರಗಳು ಅಡಗಿವೆ. ಈ ಬಗ್ಗೆ ದಾಖಲೆ ಸಹಿತ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರ ಬಳಿ ನಿಯೋಗ ತೆರಳಿ ಸಂಘದ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಅಲ್ಲದೆ ಸಂಘದ ಚುನಾವಣೆ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗು ವುದೆಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷರಾದ ಮಿದೇರಿರ ನವೀನ್ ತಿಳಿಸಿದರು.

ಹುದಿಕೇರಿ ಕೊಡವ ಸಮಾಜದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರುಗಳ ಸಭೆಯಲ್ಲಿ ಮಾತನಾಡಿದ ಅವರು, ಸಂಘದ ವಿಚಾರದಲ್ಲಿ ನನ್ನನ್ನು ಸೇರಿದಂತೆ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪನ ವರನ್ನು ಉಲ್ಲೇಖ ಮಾಡಿದ್ದಾರೆ. ಇವುಗಳಲ್ಲಿ ಹುರುಳಿಲ್ಲ, ಸಂಘದ ಕಟ್ಟಡ ನಿರ್ಮಾಣದ ವೇಳೆ ಮಹಾಸಭೆಯಲ್ಲಿ ೫೦ ಲಕ್ಷ ಅನುದಾನ ಅನುಮತಿ ಪಡೆದಿದ್ದಾರೆ. ಸಂಘದ ಕಟ್ಟಡಕ್ಕೆ ೭೪ ಲಕ್ಷ ವೆಚ್ಚವಾಗಿದೆ. ಇದರಲ್ಲಿ ೨೪ ಲಕ್ಷಕ್ಕೆ ಮಹಾಸಭೆಯ ಅನುಮತಿಯನ್ನು ಪಡೆದಿರುವುದಿಲ್ಲ. ಈ ಹಣ ಎಲ್ಲಿ ಹೋಯಿತು ಎಂಬುದು ತನಿಖೆ ಆಗಬೇಕು. ಸದಸ್ಯ ರಿಗೆ ಮೀಸಲಿರುವ ರಸಗೊಬ್ಬರವನ್ನು ಹೊರಜಿಲ್ಲೆಗೆ ನಿಯಮಬಾಹಿರವಾಗಿ ಮಾರಾಟ ಮಾಡಿದ್ದಾರೆ. ೧೨ ಸಾವಿರ ಚೀಲ ರಸ ಗೊಬ್ಬರವನ್ನು ಸಂಘದಿAದ ಹೊರ ಜಿಲ್ಲೆಗೆ ಕಳುಹಿಸಿದ್ದಾರೆ. ಇವುಗಳ ಬಗ್ಗೆ ಕೃಷಿ ಅಧಿಕಾರಿಗಳು ದಾಖಲೆ ಸಹಿತ ಉತ್ತರಿಸಿದ್ದಾರೆ. ನಾವುಗಳು ದಾಖಲೆ ಸಹಿತ ಆರೋಪ ಮಾಡುತ್ತಿದ್ದೇವೆ. ಸಂಘದ ಸದಸ್ಯರುಗಳು ಶಾಸಕರಾದ ಪೊನ್ನಣ್ಣನವರ ಹಸ್ತಕ್ಷೇಪವಿದೆ ಎಂದು ಕಪೋಲಕಲ್ಪಿತ ಹೇಳಿಕೆ ಬಿಡುಗಡೆ ಮಾಡುತ್ತಿದ್ದಾರೆ. ಸಂಘದ ಆಡಳಿತ ಮಂಡಳಿಗೆ ನಡೆಯಬೇಕಾದ ಚುನಾವಣೆ ವಿಚಾರದಲ್ಲಿ ಶಾಸಕರ ಯಾವ ಪಾತ್ರವೂ ಇರುವುದಿಲ್ಲ ಎಂದು ಸ್ಪಷ್ಟನೆಯಿತ್ತರು.

ಚುನಾವಣೆಗೆ ಮುನ್ನ ಸಂಘದಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆ ಮುಗಿಸಬೇಕು. ನಂತರ ಚುನಾವಣೆಯನ್ನು ಕೈಗೆತ್ತಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸದಸ್ಯರ ನಿಯೋಗವು ಶಾಸಕರ ಮುಖಾಂತರ ಸಂಬAಧಿಸಿದ ಸಚಿವರನ್ನು ಭೇಟಿ ಮಾಡುತ್ತೇವೆ. ಸಂಘದ ವತಿಯಿಂದ ಪಿಗ್ಮಿ ಸಾಲ ನೀಡಿಕೆಯಲ್ಲಿ ಸಂಘಕ್ಕೆ ನಷ್ಟ ಸಂಭವಿಸಿದೆ. ಸಂಘದ ಹಣದಿಂದ ಅನವಶ್ಯಕವಾಗಿ ನ್ಯಾಯಾಲಯಕ್ಕೆ ಹಣ ಖರ್ಚು ಮಾಡಲಾಗುತ್ತಿದೆ. ಹುದಿಕೇರಿ ಸಹಕಾರ ಸಂಘವು ಬಿ ಶ್ರೇಣಿಯಲ್ಲಿದ್ದು ಡಿಸಿಸಿ ಬ್ಯಾಂಕನ್ನು ಮೀರಿಸಿದ್ದೇವೆಂದು ಹೇಳುವುದು ಎಷ್ಟು ಸರಿ.? ಸಂಘದ ಸದಸ್ಯರನ್ನು ದಿಕ್ಕು ತಪ್ಪಿಸಿ ಕಳೆದ ೨೦ ವರ್ಷಗಳಿಂದ ತಮಗೆ ಬೇಕಾದ ರೀತಿಯಲ್ಲಿ ಸಂಘವನ್ನು ಮುನ್ನಡೆಸಿದ್ದಾರೆ. ಇಲಾಖೆಯ ಅಧಿಕಾರಿಗಳು ನೀಡಿರುವ ದಾಖಲೆಗಳಲ್ಲಿ ಸಂಘದಲ್ಲಿ ನಡೆದಿರುವ ಭ್ರಷ್ಟಾಚಾರವು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಸAಘದ ಸದಸ್ಯರಾದ ಚಂಗುಲAಡ ಸೂರಜ್ ಮಾತನಾಡಿ, ನಾವುಗಳು ಚುನಾವಣೆಗೆ ವಿರೋಧವನ್ನು ಎಂದಿಗೂ ಮಾಡಿಲ್ಲ. ಚುನಾವಣೆಗೂ ಮುನ್ನ ಸಂಘದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ಪೂರ್ಣಗೊಳಿಸಬೇಕು. ಸಂಘದಲ್ಲಿರುವ ಸದಸ್ಯರಿಗೆ ಯಾವುದೇ ರೀತಿಯ ಸಮಸ್ಯೆಯಾಗಬಾರದು. ಇಲಾಖೆಯಿಂದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಮಾತನಾಡುತ್ತಿದ್ದೇವೆ. ಗೊಬ್ಬರ ವಿಷಯದಲ್ಲಿ ಓ ಫಾರಂ ಪಡೆದಿರುವುದಿಲ್ಲ. ಇದೀಗ ಇದಕ್ಕೆ ಅರ್ಜಿ ಸಲ್ಲಿಸಿದ್ದರೂ ನವೀಕರಣ ಮಾಡಿರುವುದಿಲ್ಲ. ಅನಧಿಕೃತವಾಗಿ ಗೊಬ್ಬರ ಮಾರಾಟ ಮಾಡಿರುವುದು ದೃಢಪಟ್ಟಿದೆ. ೧೨ ಸಾವಿರ ಚೀಲ ಗೊಬ್ಬರ ಮಾರಾಟ ಮಾಡಿರುವುದಾಗಿ ಅಧಿಕಾರಿ ದೃಢೀಕೃತ ವರದಿ ನೀಡಿದ್ದಾರೆ. ಇದನ್ನು ಈ ಹಿಂದಿನ ಆಡಳಿತ ಮಂಡಳಿ ಅಲ್ಲಗೆಳೆಯುತ್ತಿವೆ. ಸಂಘದ ಕಾರ್ಯನಿರ್ವಹಣಾ ಧಿಕಾರಿಗಳು ಕಾನೂನು ಮೀರಿ ಬಡ್ತಿ ಹೊಂದಿರುವುದು ತಿಳಿದು ಬಂದಿದೆ. ಇದನ್ನು ಕೂಡ ಅಧಿಕಾರಿಗಳು ದೃಢೀಕರಿಸಿದೆ. ಸಹಕಾರ ಸಂಘದ ಸೆಕ್ಷನ್ ೬೪, ೬೫ರ ಅಡಿಯಲ್ಲಿ ಸಂಪೂರ್ಣ ತನಿಖೆ ನಡೆಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಇದರಿಂದ ಸಂಘದಲ್ಲಿ ನಡೆದಿರುವ ಸಾಕಷ್ಟು ಅಕ್ರಮಗಳು ಬೆಳಕಿಗೆ ಬರಲಿವೆ ಎಂದು ತಿಳಿಸಿದರು. ಸಭೆಯಲ್ಲಿ ಸಂಘದ ಸದಸ್ಯರುಗಳಾದ ಎಂ.ಪಿ. ರೇಖಾ, ಗ್ರಾ.ಪಂ. ಸದಸ್ಯರುಗಳಾದ ಮನೋಹರ್, ಹಿರಿಯ ಸಹಕಾರಿ ಸಿ.ಸಿ. ಚಿಟ್ಟಿಯಪ್ಪ, ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಗಳಾದ ಆಲೀರ ಎಂ. ಸಾದಲಿ, ಸದಸ್ಯರುಗಳಾದ ಎ.ಟಿ. ನವೀನ್, ಪಿ.ಕೆ. ಕಾರ್ಯಪ್ಪ, ಹೆಚ್.ಪಿ. ಕಾವೇರಪ್ಪ, ಇಟ್ಟಿರ ಭವಿನ್, ಸಿ.ಎಸ್. ಬೋಪಯ್ಯ, ಎಂ.ಆರ್. ಅಮಿತ, ನೂರೇರ ಬನ್ಸಿ, ಅಜ್ಜಿಕುಟ್ಟಿರ ಗಿರೀಶ್, ಚಂಗುಲAಡ ಕರುಂಬಯ್ಯ, ಮಧು ತಮ್ಮಯ್ಯ, ಕಳ್ಳೆಂಗಡ ದಿನೇಶ್, ಬಲ್ಲಮಾಡ ದೀಕ್ಷಿತ್, ಕಳ್ಳೆಂಗಡ ಸಚಿನ್ ಮುಂತಾದವರು ಉಪಸ್ಥಿತರಿದ್ದರು.