ಸಿದ್ದಾಪುರ, ಫೆ. ೨೦: ಸಿದ್ದಾಪುರ ಮಾರುಕಟ್ಟೆ ಭಾಗದಲ್ಲಿ ಒಣಕಸವನ್ನು ಬೇರ್ಪಡಿಸಲು ಟಾಟಾ ಸಂಸ್ಥೆಯಿAದ ಯಂತ್ರೋಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು. ಸಿದ್ದಾಪುರದ ಮಾರುಕಟ್ಟೆ ಭಾಗದಲ್ಲಿ ಕಸವು ತುಂಬಿ ತುಳುಕುತ್ತಿದ್ದು ಇದನ್ನು ನಿಯಂತ್ರಣಕ್ಕೆ ತರಲು ಹಾಗೂ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಟಾಟಾ ಸಂಸ್ಥೆಯು ಸಿದ್ಧಾಪುರ ಗ್ರಾಮ ಪಂಚಾಯಿತಿಗೆ ಒಣ ಕಸಗಳಾದ ಪ್ಲಾಸ್ಟಿಕ್, ಕಾರ್ಡ್ ಬೋರ್ಡ್ ಇನ್ನಿತರ ಒಣ ಕಸಗಳನ್ನು ಬೇರ್ಪಡಿಸಲು ಯಂತ್ರಗಳನ್ನು ನೀಡಿದೆ. ಈ ಸಂದರ್ಭದಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಫಿಕ್, ಕಾರ್ಯದರ್ಶಿ ಮೋಹನ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.