ನಾಪೋಕ್ಲು, ಫೆ. ೨೦: ಹೊದ್ದೂರು ಗ್ರಾಮದ ರಕ್ಷಕ ದೇವರೆಂದೇ ಖ್ಯಾತಿವೆತ್ತ ಶ್ರೀ ಶಾಸ್ತ-ಈಶ್ವರ ದೇವರ ಮೂರನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿಷ್ಣುಮೂರ್ತಿ ಕೋಲ ಶ್ರದ್ಧಾಭಕ್ತಿಯಿಂದ ಜರುಗಿತು.
ವಾರ್ಷಿಕೋತ್ಸವ ಅಂದಿಬೊಳಕ್‌ನೊAದಿಗೆ ಆರಂಭಗೊAಡು ೧೭ ರಂದು ಬೆಳಿಗ್ಗೆ ಗಣಪತಿ ಹೋಮ, ಅಭಿಷೇಕ ಪೂಜೆ, ದೇವರ ತೂಚಂಬಲಿ ನೃತ್ಯ, ಬೇಟೆ ಅಯ್ಯಪ್ಪ ಹಾಗೂ ವಿಷ್ಣುಮೂರ್ತಿ ದೈವನೆಲೆ ಅಭಿಷೇಕ ಪೂಜೆ ಜರುಗಿದವು. ಮಧ್ಯಾಹ್ನ ದೇವರ ನೆರಪುಬಲಿ ನೃತ್ಯ ಹಾಗೂ ವಾರ್ಷಿಕ ಮಹಾಪೂಜೆ ನೆರವೇರಿತು. ಸಂಜೆ ೬ ಗಂಟೆಗೆ ಕಾವೇರಿ ಹೊಳೆಯಲ್ಲಿ ದೇವರ ಅವಭೃತ ಸ್ನಾನದೊಂದಿಗೆ, ಚಂಡೆ-ಮದ್ದಳೆಯೊAದಿಗೆ ಗ್ರಾಮದ ಪ್ರಮುಖ ರಸ್ತೆಯ ಮೂಲಕ ಮೆರವಣಿಗೆಯೊಂದಿಗೆ ದೇವಸ್ಥಾನದಲ್ಲಿ ತಳೆಯತಕ್ಕಿ ಬೊಳಕ್ ಹಿಡಿದ ಮಹಿಳೆಯರ ಸಮ್ಮುಖದಲ್ಲಿ ವಿವಿಧ ನೃತ್ಯ ಬಲಿ ಜರುಗಿತು. ನಂತರ ಶ್ರೀ ವಿಷ್ಣುಮೂರ್ತಿ ದೈವರ ತೋಯತ ತೆರೆ, ಮೇಲೇರಿಗೆ ಅಗ್ನಿಸ್ಪರ್ಶ ನಡೆಯಿತು. ೧೮ರಂದು ಬೆಳಿಗ್ಗೆ ವಿಷ್ಣುಮೂರ್ತಿ ದೈವದ ಕೋಲ, ಬಾರಣಿ ಜರುಗಿತು. ಎರಡು ದಿನಗಳ ಕಾಲ ಉತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ದೇವಸ್ಥಾನ ಸಮಿತಿ ವತಿಯಿಂದ ಅನ್ನಸಂತರ್ಪಣೆ ನಡೆಯಿತು. ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ, ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.