ಕೂಡಿಗೆ, ಫೆ. ೨೦: ಕಾವೇರಿ-ಹಾರಂಗಿ ನದಿ ಸಂಗಮ ವ್ಯಾಪ್ತಿಯಿಂದ ಕೂಡಿಗೆ ಸರ್ಕಲ್‌ನ ಬ್ರಿಟಿಷ್ ಕಾಲದ ಹಳೆ ಸೇತುವೆ ಮತ್ತು ಹೆದ್ದಾರಿಯಲ್ಲಿರುವ ಸೇತುವೆಯತ್ತ ಲಗ್ಗೆಯಿಟ್ಟ ವಾನರ ಸೇನೆ ಆಹಾರ ಅರಸುತ್ತಿರುವುದು ಕಂಡುಬರುತ್ತಿದೆ.
ಬೇಸಿಗೆಯಾದ ಕಾರಣ ಕಾಡಿನಲ್ಲಿ ಆಹಾರ ದೊರೆಯದೆ ಆಹಾರ ಅರಸಿ ಗ್ರಾಮಗಳತ್ತ ಲಗ್ಗೆಯಿಟ್ಟ ಮಂಗಗಳು ಸೇತುವೆ ಮೇಲೆ ಗುಂಪಾಗಿ ವಿರಮಿಸುತ್ತಿರುವ ದೃಶ್ಯ ಕಂಡುಬAದಿದೆ. ಅಲ್ಲದೆ ಕೂಡಿಗೆಯ ಸಂಗಮದ ಸ್ಥಳದಿಂದ ಕಾವೇರಿ ನದಿಯ ಎರಡು ಬದಿ ಜಮೀನುಗಳಿಗೆ ದಾಳಿ ಮಾಡಿ ಜಮೀನಿನಲ್ಲಿ ಬೆಳೆದು ನಿಂತಿರುವ ತೆಂಗಿನ ಮರಗಳಿಗೆ ಮಂಗಗಳು ಹತ್ತಿ ಅದರಲ್ಲಿ ಇರುವ ಎಳನೀರು ಕಾಯಿಗಳನ್ನು ಕುಡಿದು ಅವುಗಳನ್ನು ಬೀಳಿಸಿ ನಂತರ ಮರದಿಂದ ಇಳಿಯುತ್ತವೆ. ಕೂಡಿಗೆಯ ಕಾವೇರಿ ಹಾರಂಗಿ ನದಿಯ ಸಂಗಮದ ಕಡೆಯಿಂದ ಬಂದ ನೂರಾರು ಮಂಗಗಳು ಮರಿಯೊಂದಿಗೆ ಆಹಾರ ಅರಸಿಕೊಂಡು ಬಂದ ದೃಶ್ಯ ಕಾಣುತ್ತಿತ್ತು. ಸೇತುವೆ ಹತ್ತಿರ ಸಾರ್ವಜನಿಕರು ಬಾಳೆಹಣ್ಣು ಮತ್ತು ಇತರೆ ಆಹಾರ ಪದಾರ್ಥಗಳನ್ನು ನೀಡಿದರೆ ತೆಗೆದುಕೊಂಡು ಹೋಗುತ್ತಿದ್ದವು.