ಪೊನ್ನಂಪೇಟೆ, ಫೆ. ೨೦: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೊನ್ನಂಪೇಟೆ ವಲಯದ ಕಾಟ್ರಕೊಲ್ಲಿ ಕಾರ್ಯಕ್ಷೇತ್ರದ ಶ್ರೀ ಚಿಕ್ಕದೇವಮ್ಮ ಸಂಘದ ಸದಸ್ಯೆ ಲಕ್ಷಿö್ಮ ಅವರು ಅನಾರೋಗ್ಯದಿಂದ ಬಳಲುತ್ತಾ, ಹಲವು ವರ್ಷಗಳಿಂದ ಒಂಟಿ ಜೀವನ ನಡೆಸುತ್ತಿದ್ದರು. ಈ ವೃದ್ಧೆ ಮಹಿಳೆಯನ್ನು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಗುರುತಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ನಿರ್ಗತಿಕರ ಮಾಸಾಶನ ಮಂಜೂರು ಮಾಡಲು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ರೂ. ೭೫೦ ಮಸಾಶನ ಮಂಜೂರು ಮಾಡಿದ್ದರು. ಮಂಜೂರಾತಿ ಪತ್ರ ಹಾಗೂ ಗುರುತಿನ ಚೀಟಿಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಬೊಟ್ಟಂಗಡ ದಶಮಿ ದೇಚಮ್ಮ ಫಲಾನುಭವಿಗೆ ವಿತರಿಸಿದರು. ಈ ಸಂದರ್ಭ ಪೊನ್ನಂಪೇಟೆ ವಲಯ ಮೇಲ್ವಿಚಾರಕ ನರಸಿಂಹ ಮೂರ್ತಿ, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಶ್ರೇಯ, ಗ್ರಾಮಸ್ಥರಾದ ಸಂತೋಷ್ ಉಪಸ್ಥಿತರಿದ್ದರು.