ಮಡಿಕೇರಿ, ಫೆ. ೨೦: ಕೊಡವ ಕುಟುಂಬ ತಂಡಗಳ ನಡುವೆ ನಡೆಯಲಿರುವ ೨೪ನೇ ವರ್ಷದ ಹಾಕಿ ಪಂದ್ಯಾವಳಿ ‘ಕುಂಡ್ಯೋಳAಡ ಹಾಕಿ ನಮ್ಮೆ-೨೦೨೪’ಕ್ಕಾಗಿ ಪೂರ್ವಭಾವಿ ತಯಾರಿ ನಡೆಸಲು ಕೊಡವ ಹಾಕಿ ಅಕಾಡೆಮಿಯ ಪದಾಧಿಕಾರಿಗಳು ಹಾಗೂ ಕುಂಡ್ಯೋಳAಡ ಕುಟುಂಬದ ಪ್ರಮುಖರು ನಾಪೋಕ್ಲುವಿನ ಮೈದಾನವನ್ನು ಪರಿಶೀಲಿಸಿದರು.

ಈ ಸಂದರ್ಭ ಮಾತನಾಡಿದ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಅವರು, ಹಾಕಿ ನಮ್ಮೆಗೆ ಹಾಕಿ ಅಕಾಡೆಮಿ ಸಂಪೂರ್ಣ ಸಹಕಾರ ನೀಡಲಿದೆ ಎಂದರು. ಅಕಾಡೆಮಿ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಜಂಟಿ ಕಾರ್ಯದರ್ಶಿ ಚೆಯ್ಯಂಡ ಸತ್ಯ, ನಿರ್ದೇಶಕರುಗಳಾದ ಕುಲ್ಲೇಟಿರ ಬೇಬ, ಕಂಬೀರAಡ ರಾಖಿ ಪೂವಣ್ಣ, ಕುಂಡ್ಯೋಳAಡ ಕುಟುಂಬಸ್ಥರಾದ ಕಾಶಿ ತಮ್ಮಯ್ಯ, ಬಿಪಿನ್ ಬೆಳ್ಯಪ್ಪ ಮತ್ತಿತರ ಪ್ರಮುಖರು ಹಾಜರಿದ್ದರು.