ಮುಳ್ಳೂರು, ಫೆ. ೨೦: ಸಮೀಪದ ಆಲೂರು-ಸಿದ್ದಾಪುರ ರೋಟರಿ ಮಲ್ಲೇಶ್ವರ ಸಂಸ್ಥೆ ವತಿಯಿಂದ ಗೋಣಿಮರೂರು ಮತ್ತು ಅಂಕನಹಳ್ಳಿಯ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಉಪಯುಕ್ತ ಪರಿಕರಗಳನ್ನು ವಿತರಿಸಲಾಯಿತು.

ಪುಟಾಣಿ ಮಕ್ಕಳಿಗೆ ಚೇರ್, ಚಾಪೆ ಸೇರಿದಂತೆ ವಿವಿಧ ಉಪಯುಕ್ತವಾದ ಪರಿಕರಗಳನ್ನು ವಿತರಣೆ ಮಾಡಲಾಯಿತು. ಬಡ ಮಹಿಳೆಯೊಬ್ಬರಿಗೆ ಹೊಲಿಗೆ ಯಂತ್ರವನ್ನು ನೀಡಲಾಯಿತು. ಈ ವೇಳೆ ಮಾತನಾಡಿದ ರೋಟರಿ ಮಲ್ಲೇಶ್ವರ ಸಂಸ್ಥೆ ಅಧ್ಯಕ್ಷ ಹೆಚ್.ಆರ್. ಉದಯ್‌ಕುಮಾರ್ ರೋಟರಿ ಸಂಸ್ಥೆ ಸಾಮಾಜಿಕ ಕಳಕಳಿ ಹೊಂದಿರುವ ಮತ್ತು ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುವ ವಿಶ್ವ ಮಟ್ಟದ ಸಮಾಜ ಸೇವಾ ಸಂಸ್ಥೆಯಾಗಿದೆ ಎಂದರು.

ರೋಟರಿ ಸಂಸ್ಥೆ ಕಾರ್ಯದರ್ಶಿ ಟಿ.ಪಿ. ಸಂಪತ್, ಸದಸ್ಯರುಗಳಾದ ಎ.ಎಸ್. ರಾಮಣ್ಣ, ನಾರಾಯಣಸ್ವಾಮಿ, ವಿಜಯ್, ಜಿ.ಎಂ. ಹೇಮಂತ್, ತ್ಯಾಗರಾಜ್ ಹಾಜರಿದ್ದರು.