ಟಿ ಹೆಚ್.ಜೆ. ರಾಕೇಶ್
ಮಡಿಕೇರಿ, ಫೆ. ೨೦: ಜಿಲ್ಲೆಯಲ್ಲಿ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದ ಅರಣ್ಯ ವನ್ಯಜೀವಿ ಉತ್ಪನ್ನ ಹಿಂದಿರುಗಿಸುವ ರಾಜ್ಯ ಸರಕಾರದ ಆದೇಶಕ್ಕೆ ಇದೀಗ ಉಚ್ಚ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿರುವುದರಿಂದ ಜಿಲ್ಲೆಯ ಜನ ಕೊಂಚ ನಿರಾಳರಾಗಿದ್ದು, ಕಾನೂನು ಹೋರಾಟ ಮುಂದುವರೆಯಲಿದೆ.
ಪಾರಂಪರಿಕವಾಗಿ ಬಳುವಳಿಯಾಗಿ ಬಂದ ಅರಣ್ಯಜೀವಿ ಉತ್ಪನ್ನಗಳನ್ನು ಜಿಲ್ಲೆಯ ಹಲವಷ್ಟು ಕಡೆಗಳಲ್ಲಿ ಸಂರಕ್ಷಿಸುತ್ತ ಬರಲಾಗುತ್ತಿದೆ. ಇದೊಂದು ಭಾವನಾತ್ಮಕ ಸಂಬAಧವಾಗಿ ಜನರೊಂದಿಗಿದೆ. ಅಲ್ಲದೆ ತಲತಲಾಂತರಗಳಿAದ ಪೂಜನೀಯ ಸ್ಥಾನದಲ್ಲಿಡಲಾಗಿದೆ. ಪುರಾತನ ಕಾಲದಲ್ಲಿ ಸಂಗ್ರಹಿತವಾಗಿರುವ ಜಿಂಕೆ, ಕಡವೆ, ಕಾಡುಕುರಿ ಕೊಂಬುಗಳನ್ನು ಧಾರ್ಮಿಕ ಕಾರ್ಯಗಳಲ್ಲಿ ಸಹ ಬಳಸಲಾಗುತ್ತದೆ. ಇಂದಿಗೂ ಕೊಂಬಾಟ್ ಅಂತಹ ಆಚರಣೆ, ಸುಗ್ಗಿಹಬ್ಬಗಳಲ್ಲಿ ಇದರ ಸಹಿತವಾದ ಜನಪದ ನೃತ್ಯ ಪ್ರದರ್ಶನವನ್ನೂ ಗಮನಿಸಬಹುದಾಗಿದೆ.
ಆದರೆ, ಇತ್ತೀಚೆಗೆ ರಾಷ್ಟಿçÃಯ ಅರಣ್ಯ ವನ್ಯಜೀವಿ ಸಂರಕ್ಷಣೆ ಕಾಯ್ದೆ ೧೯೭೨ ಅನ್ನು ರಾಜ್ಯ ಸರಕಾರ ಬಲಪಡಿಸಿ ೨೦೨೪ರ ತಿದ್ದುಪಡಿಯನ್ನು ಜಾರಿಗೆ ತಂದು ವನ್ಯಜೀವಿ ಉತ್ಪನ್ನ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಪುನರುಚ್ಚಿಸಿದೆ. ೧೯೯೩ ಹಾಗೂ ೨೦೦೩ರಲ್ಲಿ ಉತ್ಪನ್ನಗಳಿದ್ದಲ್ಲಿ ಅದನ್ನು ಘೋಷಿಸಿಕೊಳ್ಳಲು ಅವಕಾಶವಿತ್ತು. ‘ರೈಟ್ ಆಫ್ ಸರ್ಟಿಫಿಕೇಟ್’ ಪಡೆದು ಇಟ್ಟುಕೊಳ್ಳಬಹುದಿತ್ತು. ಆದರೆ ಈಗಿನ ಹೊಸ ಕಾನೂನಿನಲ್ಲಿ ಘೋಷಿಸಿಕೊಳ್ಳಲು ಅವಕಾಶ ನೀಡದೆ ವಶಕ್ಕೆ ನೀಡುವ ಆದೇಶ ಮಾಡಲಾಗಿತ್ತು.
ಕಾನೂನು ಪರಿಣಾಮಕಾರಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಘೋಷಣೆಯಾಗದ ಅರಣ್ಯ ವನ್ಯಜೀವಿ ಉತ್ಪನ್ನಗಳಿದ್ದಲ್ಲಿ ಏ. ೯ ರೊಳಗೆ ಹಿಂದಿರುಗಿಸಲು ಕಾಲಾವಕಾಶ ನೀಡಲಾಗಿತ್ತು. ಇದರಿಂದ ಜಿಲ್ಲೆಯಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಹಲವು ಸಂಘಟನೆಗಳು, ಸಮುದಾಯಗಳು, ದೇವಾಲಯ ಸಮಿತಿಗಳು ವಿರೋಧ ವ್ಯಕ್ತಪಡಿಸಿದ್ದವು. ಪಾರಂಪರಿಕವಾಗಿ ಬಂದ ವಸ್ತುಗಳನ್ನಿಟ್ಟುಕೊಳ್ಳಲು ಅವಕಾಶ ನೀಡುವಂತೆ ಒತ್ತಾಯಿಸಿದ್ದವು. ಆದರೆ, ಸರಕಾರ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದ ಹಿನ್ನೆಲೆ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ‘ನ್ಯಾಯಾಂಗದ ಮೂಲಕ ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತೇನೆ. ಯಾರೂ ಆತಂಕಪಡಬೇಕಿಲ್ಲ’ ಎಂಬ ವಾಗ್ದಾನ ನೀಡಿದ್ದರು.
(ಮೊದಲ ಪುಟದಿಂದ) ಇದೀಗ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಹಾಗೂ ಕಕ್ಕಬ್ಬೆಯ ನಾಲಡಿ ನಿವಾಸಿ, ವಕೀಲರೂ ಆಗಿರುವ ಕೋಡಿಮಣಿಯಂಡ ಕುಟ್ಟಪ್ಪ ಅವರುಗಳು ವಕೀಲ ಕೊಟ್ಟಂಗಡ ಸೋಮಣ್ಣ ಅವರ ಮೂಲಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತಡೆಯಾಜ್ಞೆಗೆ ಮನವಿ ಮಾಡಿದ್ದರು.
ವಿಚಾರಣೆ ನಡೆಸಿದ ಕೋರ್ಟ್ ಸದ್ಯಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿರುವುದರಿಂದ ಕರ್ನಾಟಕಕ್ಕೆ ಈ ಆದೇಶ ಅನ್ವಯವಾಗಲಿದೆ. ಅದಲ್ಲದೆ ಕರ್ನಾಟಕ ಸರಕಾರ, ಅರಣ್ಯ ಇಲಾಖೆ, ವಿವಿಧ ಹಂತದ ಅಧಿಕಾರಿಗಳು ಸೇರಿದಂತೆ ೮ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ ಉತ್ತರಿಸುವಂತೆ ಕೋರ್ಟ್ ಸೂಚಿಸಿದೆ.
ವಕೀಲ ಕೊಟ್ಟಂಗಡ ಸೋಮಣ್ಣ ಅವರು, ಕರ್ನಾಟಕ ಸರಕಾರ ಜಾರಿಗೊಳಿಸಿರುವ ಕ್ರಮ ಸರಿ ಇಲ್ಲ. ಕೇಂದ್ರ ಸರಕಾರದ ನಿಯಮಕ್ಕೆ ಮತ್ತೊಂದು ನಿಯಮ ತಂದು ಗೊಂದಲ ಸೃಷ್ಟಿ ಮಾಡಲಾಗುತ್ತಿದೆ. ತಲತಲಾಂತರಗಳಿAದ ಬಂದ ಉತ್ಪನ್ನಗಳನ್ನು ಇಟ್ಟುಕೊಳ್ಳಬಹುದು. ಅದನ್ನು ವಶಕ್ಕೆ ನೀಡುವಂತೆ ಸೂಚಿಸಿರುವುದು ಸಮರ್ಪಕವಾದ ನಡೆಯಲ್ಲ. ಕಾಯ್ದೆಯ ಮೂಲದಲ್ಲಿ ಪಾರಂಪರಿಕವಾಗಿ ಬಂದ ವಸ್ತು ಇಟ್ಟುಕೊಳ್ಳಬಹುದಾಗಿದೆ ಎಂದು ಸ್ಪಷ್ಟವಾಗಿದೆ ಎಂದು ವಾದಿಸಿದ್ದಾರೆ. ಮುಂದೆ ವಿಚಾರಣೆಗಳು ನಡೆಯಲಿದ್ದು, ಕಾಯ್ದೆಯ ಅಧ್ಯಯನದ ಮೂಲಕ ಸ್ಪಂದನ ಸಿಗುವ ಭರವಸೆಯನ್ನು ಸೋಮಣ್ಣ ನೀಡಿದ್ದಾರೆ.