ಮಡಿಕೇರಿ, ಫೆ. ೨೧: ಹುದಿಕೇರಿ ಪ್ಯಾಕ್ಸ್ನಲ್ಲಿ ನಡೆಯುತ್ತಿರುವ ರಾಜಕೀಯ ಹಸ್ತಕ್ಷೇಪ ವಿರೋಧಿಸಿ ಶುಕ್ರವಾರ ಮಾಜಿ ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆಗೆ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ, ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಎನ್.ಎ. ರವಿಬಸಪ್ಪ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹುದಿಕೇರಿ ಪ್ಯಾಕ್ಸ್ ಕಳೆದೆರಡು ದಶಕಗಳಿಂದ ಸಾಲ ವಸೂಲಾತಿ ಮತ್ತು ಇತರ ಚಟುವಟಿಕೆಗಳಲ್ಲಿ ಉತ್ಕೃಷ್ಠ, ಅತ್ಯುತ್ತಮ ಸಂಘಗಳಲ್ಲೊAದೆನಿಸಿದ್ದು ಹಲವಾರು ಬಹುಮಾನ, ಪ್ರಶಸ್ತಿ ಪತ್ರ ಪಡೆದಿದೆ. ತನ್ನ ಸ್ವಂತ ಬಂಡವಾಳದಲ್ಲಿ ಸಾಕಷ್ಟು ವ್ಯವಹಾರ ಮಾಡುತ್ತ ಆ ಭಾಗದ ೨೭೦೦ ಸದಸ್ಯ ಬಲದೊಂದಿಗೆ ಸಹಕಾರಿಗಳ ವಿಶ್ವಾಸವನ್ನು ಗಳಿಸಿ ಕೋಟ್ಯಂತರ ಠೇವಣಿ ಹೊಂದಿದೆ.

ಸಹಕಾರ ಕ್ಷೇತ್ರಕ್ಕೆ ಅಪಚಾರವೆಸಗುವ ರೀತಿಯಲ್ಲಿ ನಿಕಟಪೂರ್ವ ಆಡಳಿತ ಮಂಡಳಿಯ ಮೇಲೆ ರಾಜಕೀಯ ಪ್ರೇರಿತ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಹೂಡಿಕೆದಾರರಿಗೆ ಅಪನಂಬಿಕೆ ಬರುವಂತೆ ವರ್ತಿಸಲಾಗುತ್ತಿದೆ. ಆಡಳಿತಾಧಿಕಾರಿ ನೇಮಕ ಮಾಡಿ ೩ ತಿಂಗಳೊಳಗೆ ಚುನಾವಣೆ ವ್ಯವಸ್ಥೆ ಮಾಡಬೇಕಿದ್ದರೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಚುನಾವಣೆಯಲ್ಲಿ ಭಾಗವಹಿಸಬಾರದು ಎನ್ನುವಂತಹ ದುರುದ್ದೇಶದಿಂದ ಆಡಳಿತಾಧಿಕಾರಿ ಅವಧಿ ವಿಸ್ತರಣೆ ಮಾಡಿ ಚುನಾವಣೆಯನ್ನು ಮುಂದೂಡಿದ್ದಾರೆ.

ದಕ್ಷ ಅಧಿಕಾರಿಯನ್ನು ಹುದಿಕೇರಿ ಪ್ಯಾಕ್ಸ್ನ ಚುನಾವಣೆಗೆ ಸಂಬAಧಿಸಿದAತೆ ತಾನು ಹೇಳಿದಂತೆ ವರ್ತಿಸಲಿಲ್ಲ ಎಂದು ಅವರನ್ನು ಜಿಲ್ಲೆಯಿಂದ ಸರ್ಕಾರವು ದಿಢೀರ್ ವರ್ಗಾವಣೆ ಮಾಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.