ಪೊನ್ನಂಪೇಟೆ, ಫೆ. ೮: ಪೊನ್ನಂಪೇಟೆ ಸಮೀಪದ ಜೋಡುಬೀಟಿ ನೆಹರು ಕಾಲೋನಿ ಡೈಮಂಡ್ ಸ್ಟಾರ್ಸ್ ತಂಡದ ವತಿಯಿಂದ ಮೂರ್ನಾಡುವಿನ ಬಾಚೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿರುವ ಕೆಂಬಟ್ಟಿ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಏಕಲವ್ಯ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕ್ರೀಡಾಪಟು ಚಾಮೀರ ಹರೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಾಜಿ ಅಚ್ಚುತ್ತನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶ್ರೀಜಾ ಶಾಜಿ, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಏಕಲವ್ಯ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕ್ರೀಡಾಪಟು ಚಾಮೀರ ಹರೀಶ್ ಮಾತನಾಡಿ ಯಾವುದೇ ಒಂದು ಜನಾಂಗವನ್ನು ಒಂದುಗೂಡಿಸಲು ಕ್ರೀಡೆಗಳು ಸಹಕಾರಿಯಾಗಿವೆ. ಕ್ರೀಡೆ ಎಂದ ಮೇಲೆ ಸೋಲು ಗೆಲುವು ಇದ್ದೇ ಇರುತ್ತದೆ. ಜನಾಂಗದ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಈ ಕ್ರಿಕೆಟ್ ಪಂದ್ಯಾವಳಿಯನ್ನು ಯಶಸ್ವಿ ಗೊಳಿಸುವಂತಾಗಬೇಕು ಎಂದರು. ಇದೇ ಸಂದರ್ಭ ಜನಾಂಗದ ವತಿಯಿಂದ
(ಮೊದಲ ಪುಟದಿಂದ) ಚಾಮೀರ ಹರೀಶ್ ಅವರನ್ನು ಸನ್ಮಾನಿಸಲಾಯಿತು. ನಂತರ ಅತಿಥಿಗಳು ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು.
ಚಟ್ಟಕುಟ್ಟಡ ಹ್ಯಾರಿ ಭೀಮಯ್ಯ, ಪೆಮ್ಮಡಿಕುಟ್ಟಡ ನಂದ, ಬಿಲ್ಲರಿಕುಟ್ಟಡ ಯತೀನ್, ತೂಚಕುಟ್ಟಡ ಸುನೀಲ್, ಬಿಲ್ಲರಿಕುಟ್ಟಡ ಅಜಿತ್ ಅವರುಗಳ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಕೆಂಬಟ್ಟಿ ಸಮಾಜದ ಕಾರ್ಯದರ್ಶಿ ಮೊಳ್ಳೆಕುಟ್ಟಡ ದಿನು ಬೋಜಪ್ಪ, ಚೋಕುಟ್ಟಂಡ ಉತ್ತಪ್ಪ, ಬಿಲ್ಲರಿಕುಟ್ಟಡ ಮಂಜೇಶ್, ಬಿಲ್ಲರಿಕುಟ್ಟಡ ಪ್ರಶಾಂತ್, ಬಿಲ್ಲರಿಕುಟ್ಟಡ ಡಿಕ್ಕಿ, ಬಿಲ್ಲರಿಕುಟ್ಟಡ ಧನು, ಚೋಕುಟ್ಟಂಡ ಚಿಮ್ಮ ಅಯ್ಯಪ್ಪ, ಮಾಕುಟ್ಟಡ ವೇಣುಗೋಪಾಲ್, ಬಿಲ್ಲರಿಕುಟ್ಟಡ ಶಾಂತಿ, ತೂಚಕುಟ್ಟಡ ಅರುಣ್, ಯಾರಕುಟ್ಟಡ ವಿನೋದ್, ಜೋಡುಬೀಟಿ ನೆಹರು ಕಾಲೋನಿಯ ಯುವಕರು, ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ತಾ.೧೦ ರಂದು ಕೆಂಬಟ್ಟಿ ಕಪ್ ಫೈನಲ್ ಪಂದ್ಯ ನಡೆಯಲಿದೆ. -ಚನ್ನನಾಯಕ