ಮಡಿಕೇರಿ, ಫೆ. ೮ : ನೈಸರ್ಗಿಕ ಸಂಪÀತ್ತು ಹಾಗೂ ವಿಭಿನ್ನ ಸಂಸ್ಕೃತಿಯಿAದಲೇ ವಿಶ್ವವ್ಯಾಪಿ ಖ್ಯಾತಿವೆತ್ತಿರುವ ಕೊಡಗು ಜಿಲ್ಲೆ ಪ್ರವಾಸಿ ಕೇಂದ್ರವಾಗಿಯೂ ಗಮನ ಸೆಳೆದಿದೆ. ಪುಟ್ಟ ಜಿಲ್ಲೆಯಾದರೂ ಇಲ್ಲಿನ ಜನ ಜೀವನ-ಸಭ್ಯತೆಯ ಪ್ರತೀಕದಂತಿರುವ ಜಿಲ್ಲೆಯ ಬಗ್ಗೆ ಎಲ್ಲರಿಗೂ ಹೆಮ್ಮೆಯಿದೆ. ಆದರೆ., ಇಲ್ಲಿನ ಆಡಳಿತ ವೈಖರಿಯಿಂದಾಗಿ ಕೆ¯ವೊಂದು ಮೂಲಭೂತ ಸೌಕರ್ಯಗಳೇ ಇಲ್ಲದೆ ಇರುವದು ಖ್ಯಾತಿಗೆ ಒಂದು ಕಪ್ಪು ಚುಕ್ಕೆಯಾಗುತ್ತಿದೆ ಎಂದರೆ ತಪ್ಪಾಗಲಾರದು. ಜಿಲ್ಲೆಯ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಕನಿಷ್ಟ ಒಂದು ಶೌಚಾಲಯ ಇಲ್ಲದಿರುವದು., ಇರುವ ಶೌಚಾಲಯಗಳು ಗಬ್ಬೆದ್ದು ನಾರುತ್ತಿರುವದು ನಗರಸಭೆ ಆಡಳಿತದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ..!
ಮಂಜಿನ ನಗರಿ ಎಂದೇ ಕರೆಯಲ್ಪಡುವ ಮಡಿಕೇರಿ ನಗರಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಈ ಪೈಕಿ ಸ್ಥಳೀಯರು ಅಲ್ಲದೆ, ಪ್ರವಾಸಿಗರೂ ಇರುತ್ತಾರೆ. ನಾಗರಿಕತೆ ಎಷ್ಟೇ ಬೆಳೆದಿದ್ದರೂ ಮನುಷ್ಯನ ದೇಹ ಬಾಧೆ ತೀರಿಸಿಕೊಳ್ಳಲು ಶೌಚಾಲಯಗಳ ಅವಶ್ಯಕತೆ ಇದ್ದೇ ಇರುತ್ತದೆ. ಆದರೆ ಮಡಿಕೇರಿಯಲ್ಲಿ ಮೂಲ ಕೊರತೆಯೇ ಶೌಚಾಲಯಗಳದ್ದು. ಕೇಂದ್ರ ಸ್ಥಾನದಲ್ಲಿರುವ ಶೌಚಾಲಯಗಳ ಪರಿಸ್ಥಿತಿಯನ್ನೊಮ್ಮೆ ನೋಡಿದರೆ ಯಾರೂ ಕೂಡ ಒಂದು ವಾರಗಳ ಕಾಲ ಊಟ ಮಾಡಲಾರರು..!
ದುಂದು ವೆಚ್ಚದ ಡ್ಯಾಂ ಟಾಯ್ಲೆಟ್..!
ಮಡಿಕೇರಿಯ ಪ್ರಮುಖ ಕೇಂದ್ರವೆAದು ಹಿಂದಿನಿAದಲೂ ಗುರುತಿಸಿಕೊಂಡಿರುವದು ಹಳೆ ಖಾಸಗಿ ಬಸ್ ನಿಲ್ದಾಣ. ಈ ಹಿಂದೆ ಇಲ್ಲಿ ಪುರಸಭೆಯ ಬಸ್ ಪ್ರಯಾಣಿಕರ ತಂಗುದಾಣ ಇದ್ದ ಸಂದರ್ಭ ಶೌಚಾಲಯಗಳಿದ್ದುವಾದರೂ ವಾಸನಾಲಯಗಳಾಗಿದ್ದವು. ಭೂಕುಸಿತ ಸಂದರ್ಭ ಕಟ್ಟಡ ಕುಸಿದ ಬಳಿಕ ಅದೇ ಜಾಗದಲ್ಲಿ ಮಣ್ಣು ಕುಸಿಯದಂತೆ ಡ್ಯಾಂ ಮಾದರಿಯಲ್ಲಿ ಕಾಂಕ್ರಿಟ್ ಕಟ್ಟೆ ನಿರ್ಮಾಣ ಮಾಡಲಾಗಿದೆ. ಇತ್ತ ರೇಸ್ಕೋರ್ಸ್ ರಸ್ತೆ ಬಳಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗಿದೆಯಾದರೂ ಪ್ರಯಾಣಿಕರು ಹಳೆ ನಿಲ್ದಾಣದಲ್ಲಿಯೇ ಬಸ್ಗಾಗಿ ಕಾಯುತ್ತಿರುವದು ಕಂಡುಬAದ ಹಿನ್ನೆಲೆಯಲ್ಲಿ ಮುಳಿಯ ಸಂಸ್ಥೆಯವರು ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣವನ್ನು ನಿರ್ಮಿಸಿಕೊಟ್ಟಿದ್ದಾರೆ. ಅದನ್ನು ನಿರ್ವಹಣೆಗಾಗಿ ನಗರಸಭೆಗೆ ಹಸ್ತಾಂತರಿಸಿದ್ದಾರೆ. ಅಲ್ಲಿ ಒಂದು ಪುಟ್ಟ ಶೌಚಾಲಯವನ್ನೂ ನಿರ್ಮಿಸಲಾಗಿದೆ. ಆದರೆ, ಅದರ ಸ್ಥಿತಿ ದೇವರಿಗೇ ಪ್ರೀತಿ..!
(ಮೊದಲ ಪುಟದಿಂದ) ಸ್ವಚ್ಛತೆಯಿಲ್ಲದ್ದರಿಂದ ಅದರ ಬಾಗಿಲು ತೆರೆಯುವಂತಿಲ್ಲ. ಪಕ್ಕದಲ್ಲೇ ರೂ.೨೬ ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತಾದರೂ ಇನ್ನೂ ಕೂಡ ಕಾರ್ಯಗತ ಗೊಂಡಿಲ್ಲ. ಇದರಿಂದಾಗಿ ಪ್ರಯಾಣಿಕರು ಶೌಚಾಲಯಕ್ಕಾಗಿ ಪರದಾಡುವಂತಾಗಿದೆ. ಅದರಲ್ಲೂ ಮಹಿಳೆಯರು ಮಕ್ಕಳ ಸಂಕಷ್ಟ ಹೇಳತೀರದು. ಇತ್ತ ಪುರುಷರು ಹಾಗೋ ಹೀಗೋ ಯಾರಿಗೂ ಕಾಣದ ಹಾಗೆ ಎದುರುಗಡೆ ಇರುವ ಡ್ಯಾಂ ಬಳಿ ಬಂದು ಬಾಧೆ ತೀರಿಸಿಕೊಳ್ಳುತ್ತಿದ್ದಾರೆ. ಇನ್ನೂ ಪ್ರವಾಸಿ ವಾಹನಗಳು ಇಲ್ಲಿ ಹೆಚ್ಚಾಗಿ ನಿಲುಗಡೆಗೊಳ್ಳುತ್ತಿದ್ದು, ಇವರೆಲ್ಲರಿಗೂ ಇದೇ ಶೌಚಾಲಯವಾಗಿದೆ..!
ಕತ್ತಲೆಯಲ್ಲಿ ಗಲೀಜು..!
ಹಳೆ ಖಾಸಗಿ ಬಸ್ ನಿಲ್ದಾಣ ದಲ್ಲಿರುವ ತಂಗುದಾಣಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಸಿಸಿ ಕ್ಯಾಮೆರಾ ಕೂಡ ಅಳವಡಿಸಲಾಗಿತ್ತು. ಆದರೆ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ವಿದ್ಯುತ್ ಕಡಿತಗೊಳಿಸಿ ಮೀಟರ್ ಅನ್ನು ಕೂಡ ಕಿತ್ತುಕೊಂಡು ಹೋಗಲಾಗಿದೆ. ಇತ್ತ ಸಿಸಿ ಕ್ಯಾಮೆರಾ ಕೂಡ ಕಾಣೆಯಾಗಿದೆ. ಹಾಗಾಗಿ ರಾತ್ರಿ ವೇಳೆಯಲ್ಲಿ ಈ ತಂಗುದಾಣದಲ್ಲಿ ಅಪರಿಚಿತರು ತಂಗುತ್ತಿದ್ದು, ಅಲ್ಲಿಯೇ ಮದ್ಯ ಸೇವನೆಯೊಂದಿಗೆ ಮಲ-ಮೂತ್ರ ಕೂಡ ವಿಸರ್ಜನೆ ಮಾಡಿ ಹೋಗುತ್ತಾರೆ. ಬೆಳಿಗ್ಗೆ ಕರ್ತವ್ಯಕ್ಕೆ ಬರುವ ಖಾಸಗಿ ಬಸ್ ಏಜೆಂಟರುಗಳು, ಸಿಬ್ಬಂದಿಗಳಿಗೆ ತಂಗುದಾಣ ಶುಚಿಗೊಳಿಸುವದೇ ವೃತ್ತ(ಚಿಕ್ಕಪೇಟೆ). ಇಲ್ಲಿ ಮೈಸೂರು, ಮೂರ್ನಾಡು, ಮಂಗಳೂರು ಕಡೆಯಿಂದ ಹಾಗೂ ಈ ಮೂರು ಕಡೆಗಳಿಗೆ ಮಡಿಕೇರಿಯಿಂದ ತೆರಳುವವರು ಬಸ್, ಇನ್ನಿತರ ವಾಹನಗಳಿಗಾಗಿ ಕಾಯುವ ಸ್ಥಳವಾಗಿದೆ. ಈ ಹಿಂದೆ ಮಂಗಳೂರು ರಸ್ತೆಯಲ್ಲಿ ಇದ್ದ ಶೌಚಾಲಯ ಗಬ್ಬೆದ್ದು ಹೋದ ಹಿನ್ನೆಲೆಯಲ್ಲಿ ಅದನ್ನು ಕೆಡವಿ ನಂತರದಲ್ಲಿ ಮೂರ್ನಾಡು ರಸ್ತೆಯಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಸನಿಹದಲ್ಲಿಯೇ ಪ್ರಯಾಣಿಕರ ವೃತ್ತ(ಚಿಕ್ಕಪೇಟೆ). ಇಲ್ಲಿ ಮೈಸೂರು, ಮೂರ್ನಾಡು, ಮಂಗಳೂರು ಕಡೆಯಿಂದ ಹಾಗೂ ಈ ಮೂರು ಕಡೆಗಳಿಗೆ ಮಡಿಕೇರಿಯಿಂದ ತೆರಳುವವರು ಬಸ್, ಇನ್ನಿತರ ವಾಹನಗಳಿಗಾಗಿ ಕಾಯುವ ಸ್ಥಳವಾಗಿದೆ. ಈ ಹಿಂದೆ ಮಂಗಳೂರು ರಸ್ತೆಯಲ್ಲಿ ಇದ್ದ ಶೌಚಾಲಯ ಗಬ್ಬೆದ್ದು ಹೋದ ಹಿನ್ನೆಲೆಯಲ್ಲಿ ಅದನ್ನು ಕೆಡವಿ ನಂತರದಲ್ಲಿ ಮೂರ್ನಾಡು ರಸ್ತೆಯಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಸನಿಹದಲ್ಲಿಯೇ ಪ್ರಯಾಣಿಕರ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ಹಾಗೂ ಒಂದು ಸ್ನಾನದ ಕೊಠಡಿ ಕೂಡ ಇದೆ. ಈ ಮೂರೂ ಕೋಣೆಗಳಿಗೂ ಬಾಗಿಲುಗಳೇ ಇಲ್ಲ. ಕಿಟಕಿಯ ಗಾಜುಗಳು ಪುಡಿಯಾಗಿವೆ. ಸುತ್ತಲಿನ ಪ್ರದೇಶ ಕಾಡು ಹಾಗೂ ಶೌಚದ ನೀರಿನಿಂದ ಗಬ್ಬೆದ್ದು ಹೋಗಿದೆ..!
ತುಂಬಿ ತುಳುಕುತ್ತಿದೆ..!
ಸಾಮಾನ್ಯವಾಗಿ ಬಾವಿಯಲ್ಲಿ., ಕೆರೆ-ಕಟ್ಟೆಗಳಲ್ಲಿ ಪರಿಶುದ್ಧವಾದ ನೀರು ತುಂಬಿ ತುಳುಕುತ್ತಿದೆ ಎಂಬ ಪದವನ್ನು ಸಂತೋಷದಿAದ ಬಳಸಲಾಗುತ್ತದೆ. ಆದರೆ ಇಲ್ಲಿ ವಾಕರಿಕೆ ಮಾಡಿಕೊಂಡು ಈ ಪದವನ್ನು ಬಳಸಬೇಕಾಗಿದೆ. ಶೌಚಾಲಯದ ಬೇಸಿನ್ಗಳು ಒಡೆದು ಹೋಗಿದ್ದು, ಕೆಳಗಡೆ ಮೂತ್ರ ತುಂಬಿ ಹೋಗಿದೆ. ಇತ್ತ ಶೌಚ ಕಮೋಡ್ಗಳಲ್ಲಿ ಮಲ ತುಂಬಿ ತೇಲುತ್ತಿದ್ದು, ಅಸಹ್ಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ನಾನದ ಕೊಠಡಿಯೊಳಗಡೆಯಂತೂ ಅದರ ಬಣ್ಣವೇ ಬದಲಾಗಿದೆ..!ಗುಂಡಿಯೇ ಇಲ್ಲ..!
ಇಲ್ಲಿ ಶೌಚಾಲಯ ಮಾತ್ರ ನಿರ್ಮಾಣ ಮಾಡಲಾಗಿದೆ. ಆದರೆ, ಶೌಚ ಗುಂಡಿಯೇ ಇಲ್ಲ. ಇದುವರೆಗೆ ಪೈಪ್ ಮೂಲಕ ಸನಿಹದ ಚರಂಡಿಗೆ ಹರಿದದು ಹೋಗುತ್ತಿತ್ತು. ಇದೀಗ ಒಳಗಡೆ ತುಂಬಿ ಹೋಗಿ ರಸ್ತೆಗೆ ಹರಿಯುತ್ತಿದೆ. ಸನಿಹದಲ್ಲೇ ಬಸ್ಗಾಗಿ ಕಾಯುವ ಪ್ರಯಾಣಿಕರ ಗೋಳು ಹೇಳತೀರದ್ದಾಗಿದೆ..!
ಇಲ್ಲಿಯೂ ಗಲೀಜು..!
ಇನ್ನುಳಿದಂತೆ ಮಡಿಕೇರಿ ಯಲ್ಲಿರುವದು ಎರಡು ಶೌಚಾಲಯ ಗಳು. ಮಾರುಕಟ್ಟೆ ಬಳಿ ಇರುವ ಶೌಚಾಲಯದೊಳ ಹೊಕ್ಕರೆ ಹಳೆಯ ಭೂತ ಬಂಗಲೆಯೊಳಗೆ ಹೊಕ್ಕ ಅನುಭವವಾಗುತ್ತದೆ. ಕೊಳಕನ್ನು ಮರೆಮಾಚಲು ಒಂದಿಷ್ಟು ಬ್ಲೀಚಿಂಗ್ ಪುಡಿ ಸುರಿದು ಬಿಡುತ್ತಾರೆ. ಅದರ ಘಾಟಿಗೆ ಒಂದು ನಿಮಿಷ ಕೂಡ ನಿಲ್ಲಲಾಗುವದಿಲ್ಲ, ಹಾಗಾಗಿ ಒಳ ಹೋಗುವವರು ನೀರು ಕೂಡ ಹಾಕದೆ ಹಾಗೇ ಓಡಿ ಬರುವದು ಸಾಮಾನ್ಯವಾಗಿದೆ. ಇನ್ನು ಕೊಹಿನೂರು ರಸ್ತೆಯ (ಲಾರಿ ನಿಲ್ದಾಣದ ಬಳಿ) ಸುಲಭ ಶೌಚಾಲಯವಿದ್ದು, ಅದು ಒಂದಷ್ಟು ಪರವಾಗಿಲ್ಲ ಎಂದು ಹೇಳಬಹು ದಾದರೂ ಅಷ್ಟೇನು ಸ್ವಚ್ಛವಾಗಿ ಯಂತೂ ಇಲ್ಲ..!
ಅಭಿವೃದ್ಧಿ ಕೆಲಸಗಳಂತೂ ಆಗುತ್ತಿಲ್ಲ., ಎಲ್ಲೆಂದರಲ್ಲಿ ತಾತ್ಕಾಲಿಕ ಅಂಗಡಿ ಮಳಿಗೆಗಳ ನಿರ್ಮಾಣ, ಏನಾದರೊಂದು ವಿವಾದಗಳಲ್ಲೇ ಮುಳುಗಿರುವ ಆಡಳಿತ ವ್ಯವಸ್ಥೆ ಬಗ್ಗೆ ಜನತೆ ಅಸಮಾಧಾನ ಗೊಂಡಿರುವ ದಂತೂ ಸತ್ಯ. ಇತ್ತ ಆಡಳಿತವನ್ನು ಎಚ್ಚರಿಸಬೇಕಾದ ವಿಪಕ್ಷದವರು ಕೂಡ ಯಾವದೋ ವಿಚಾರಕ್ಕೆ ಪ್ರತಿರೋಧ, ಪ್ರತಿಭಟನೆ ಮಾಡುತ್ತಲೇ ಕಾಲ ಕಳೆಯುತ್ತಿರುವದಂತೂ ವಿಪರ್ಯಾಸವೇ ಸರಿ..!
-ಕುಡೆಕಲ್ ಸಂತೋಷ್