ಕಣಿವೆ, ಫೆ. ೮: ಮಹಿಳೆಯೊಬ್ಬರು ಮನೆಯಿಂದ ಹೊಲಕ್ಕೆ ಬಹಿರ್ದೆಸೆಗೆ ತೆರಳಿದ್ದಾಗ ಕಾಡಾನೆಯೊಂದು ಧಾಳಿ ಮಾಡಿದ ಘಟನೆ ನಡೆದಿದ್ದು, ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನೇನಹಳ್ಳಿ ಗ್ರಾಮದ ದಿ. ಶ್ರೀನಿವಾಸ್ ಎಂಬವರ ಪತ್ನಿ ವೆಂಕಟಮ್ಮ (೬೫) ಎಂಬವರ ಬಲಬದಿಯ ಕಾಲಿಗೆ ಸಂಪೂರ್ಣ ಹಾನಿಯಾಗಿದೆ.

ಕಾಡಾನೆ ವೆಂಕಟಮ್ಮ ಅವರ ಕಾಲನ್ನು ತುಳಿದ ರಭಸಕ್ಕೆ ವೆಂಕಟಮ್ಮ ಅವರ ಬಲಬದಿಯ ಮಂಡಿಯಿAದ ಪಾದದವರೆಗೆ ಮಾಂಸ ಖಂಡಗಳು ಸಂಪೂರ್ಣ ಅಪ್ಪಚ್ಚಿಯಾಗಿದೆ. ಕಾಡಾನೆ ಧಾಳಿ ಮಾಡಿದ ವಿಷಯ ತಿಳಿಯುತ್ತಿದ್ದಂತೆಯೇ ವೆಂಕಟಮ್ಮ ಅವರ ಮಗ ವೆಂಕಟೇಶ ತನ್ನ ನೆರೆಹೊರೆಯವರೊಂದಿಗೆ ಹೊಲಕ್ಕೆ ತೆರಳಿ ನೋಡಿದಾಗ ವೆಂಕಟಮ್ಮ ತೀವ್ರ ರಕ್ತ ಸ್ರಾವದೊಂದಿಗೆ ಪ್ರಜ್ಞೆ ತಪ್ಪಿ ಬಿದ್ದಿದ್ದರು.