ಮುಳ್ಳೂರು, ಫೆ. ೫: ಸಮೀಪದ ಗುಡುಗಳಲೆ ಜಯದೇವ ಜಾನು ವಾರುಗಳ ಜಾತ್ರೆ ಪ್ರಯುಕ್ತ ಜಾತ್ರಾ ಸಮಿತಿ ವತಿಯಿಂದ ಜಾತ್ರಾ ಮೈದಾನದಲ್ಲಿ ಮಹಿಳೆಯರ ಮುಕ್ತ ಥ್ರೋಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಯಿತು.

ಪಂದ್ಯಾವಳಿಯನ್ನು ಉದ್ಘಾಟಿ ಸಿದ ಬಳಿಕ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ರಾದ ಶ್ರೀ ಸದಾಶಿವ ಸ್ವಾಮೀಜಿ ಜಾತ್ರೆಯ ಅಂಗವಾಗಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಕ್ರೀಡಾ ಚಟುವಟಿಕೆಯಿಂದ ಆರೋಗ್ಯ ವೃದ್ಧಿಸುವುದರ ಜೊತೆಗೆ ಮಾನಸಿಕ ನೆಮ್ಮದಿಗೆ ಸಹಕಾರಿಯಾಗುತ್ತದೆ ಎಂದರು.

ವೇದಿಕೆಯಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಎಚ್.ಎಂ.ವಿವೇಕ್, ಥ್ರೋಬಾಲ್ ಕ್ರೀಡಾ ಸಮಿತಿ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷೆ ಉಷಾ, ಕಾರ್ಯದರ್ಶಿ ರೂಪ, ಉಪ ಕಾರ್ಯದರ್ಶಿ ಸುವರ್ಣ, ಕ್ರೀಡಾ ಬಹುಮಾನಗಳ ದಾನಿಗಳಾದ ಮಂಜುನಾಥ್, ಪುನಿತ್ ತಾಳೂರು, ಮೂರ್ತಿ ಬೆಟ್ಟದಳ್ಳಿ ಹಂಡ್ಲಿ ಗ್ರಾ.ಪಂ. ಅಧ್ಯಕ್ಷೆ ಸುಧಾ ಈರೇಶ್, ಉಪಾಧ್ಯಕ್ಷ ಅಶೋಕ್ ಗ್ರಾ.ಪಂ. ಸದಸ್ಯರು, ಜಾತ್ರಾ ಸಮಿತಿ ಸದಸ್ಯರು ಹಾಜರಿದ್ದರು.