ಗೋಣಿಕೊಪ್ಪಲು, ಫೆ. ೫: ಗೋಣಿಕೊಪ್ಪಲುವಿನ ಕಾಫ್ಸ್ ವಿದ್ಯಾ ಸಂಸ್ಥೆಯಲ್ಲಿ ತರಬೇತಿ ಹೊಂದಿದ ೧೫೦ಕ್ಕೂ ಅಧಿಕ ಕರಾಟೆ ಪಟುಗಳಿಗೆ ಕಲರ್ ಬೆಲ್ಟ್ ಹಾಗೂ ಸರ್ಟಿಫಿಕೇಟ್ ನೀಡಲಾಯಿತು. ಕರಾಟೆ ತರಬೇತು ದಾರರಾದ ಗೋಣಿಕೊಪ್ಪಲುವಿನ ಜಮ್ಮಡ ಜಯ ಜೋಯಪ್ಪ, ಅಧ್ಯಕ್ಷತೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ೪ ವರ್ಷದಿಂದ ೫೦ವರ್ಷದವರೆಗಿನ ವಯೋಮಾನದ ಯುವಕ ಯುವತಿಯರು ಸೇರಿದಂತೆ ಹಿರಿಯರು ತರಬೇತಿಯಲ್ಲಿ ಭಾಗವ ಹಿಸಿ ಕರಾಟೆ ಪ್ರದರ್ಶನ ಮಾಡಿದರು.

ಗೋಣಿಕೊಪ್ಪಲುವಿನ ಲಯನ್ಸ್ ವಿದ್ಯಾಸಂಸ್ಥೆ, ಕಾಪ್ಸ್ ವಿದ್ಯಾಸಂಸ್ಥೆ ಹಾಗೂ ಮಹಿಳಾ ಸಮಾಜ ಗೋಣಿ ಕೊಪ್ಪ ಈ ಕೇಂದ್ರಗಳಲ್ಲಿ ವಿದ್ಯಾರ್ಥಿ ಗಳು ಕರಾಟೆ ಅಭ್ಯಾಸದಲ್ಲಿ ತೊಡಗಿಸಿ ಕೊಂಡಿದ್ದರು. ಇವರುಗಳಿಗೆ ಗ್ರೇಡಿಂಗ್ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ೧೦ ವಿದ್ಯಾರ್ಥಿಗಳು ಕಪ್ಪು ಬೆಲ್ಟ್ಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಕರಾಟೆ ಅಭ್ಯಾಸ ಮಾಡುವುದರಿಂದ ಆತ್ಮಸ್ಥೆöÊರ್ಯದೊಂದಿಗೆ ಧೈರ್ಯವು ಹೆಚ್ಚಾಗುತ್ತದೆ ಎಂದು ಕಾರ್ಯಕ್ರಮದ ಆಯೋಜಕರು ಕರಾಟೆ ತರಬೇತು ದಾರರಾದ ಜಮ್ಮಡ ಜಯ ಜೋಯಪ್ಪ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಹಾಗೂ ಬೆಲ್ಟ್ಗಳನ್ನು ವಿತರಿಸಿದ ಅಂತರರಾಷ್ಟಿçÃಯ ಕರಾಟೆ ಪಟು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ಕರಾಟೆ ಅದ್ಭುತ ಕಲೆಯಾಗಿದ್ದು, ತಮ್ಮ ಪ್ರಾಣ ರಕ್ಷಣೆಗಾಗಿ ಯಾವುದೇ ಆಯುಧಗಳಿಲ್ಲದೆ ಬಳಸಬಹುದಾದ ಬಹುದೊಡ್ಡ ವಿದ್ಯೆಯಾಗಿದೆ ಎಂದರು.

ಈ ಸಂದರ್ಭ ಬ್ಲಾö್ಯಕ್ ಬೆಲ್ಟ್ ಪಡೆದ ಎಂ.ಆರ್. ಸುಮನ್, ಐ.ಎಂ.ಮನ್ವಿತ, ಎಂ.ಎA. ತಂಗಮ್ಮ, ಬಿ.ಡಿ. ನಿಶ್ಚಲ್ ಹಾಗೂ ಬಿ.ಡಿ. ನಿಹಾಲ್‌ರವರಿಗೆ ಸರ್ಟಿಫಿಕೇಟ್ ಗಳನ್ನು ವಿತರಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಕಾಪ್ಸ್ ವಿದ್ಯಾಸಂಸ್ಥೆಯ ಮುಖ್ಯಸ್ಥರು ಸೇರಿದಂತೆ ಇನ್ನಿತರರು, ಪ್ರಮುಖರು ಹಾಜರಿದ್ದರು. ಹಿರಿಯ ತರಬೇತು ದಾರರಾದ ಜಮ್ಮಡ ಜಯ ಜೋಯಪ್ಪ ಸ್ವಾಗತಿಸಿ, ವಂದಿಸಿದರು.

-ಹೆಚ್.ಕೆ.ಜಗದೀಶ್