ಮಡಿಕೇರಿ, ಫೆ. ೫: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮಾ) ಕೊಡಗು ಸಂಘದ ವತಿಯಿಂದ ಆಯುರ್ವೇದ ವೈದ್ಯರಿಗೆ ನಿರಂತರ ಶಿಕ್ಷಣ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ಕುಮಾರ್ ಆಯುರ್ವೇದದಲ್ಲಿ ಮಧುಮೇಹದ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು.
ನೀಮಾ ಕೊಡಗು ಅಧ್ಯಕ್ಷ ಡಾ. ರಾಜಾರಾಮ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಕೊಡಗಿನ ೩೦ಕ್ಕೂ ಹೆಚ್ಚು ಆಯುಷ್ ವೈದ್ಯರು ಪಾಲ್ಗೊಂಡಿದ್ದರು. ನೀಮಾ ಕೊಡಗು ಮಹಿಳಾ ಘಟಕದ ಅಧ್ಯಕ್ಷೆ ಡಾ. ಶೈಲಜಾ ರಾಜೇಂದ್ರ, ಹಿರಿಯ ವೈದ್ಯರಾದ ಡಾ. ಉದಯಶಂಕರ್, ಡಾ. ಉದಯಕುಮಾರ್, ಡಾ. ಶೈಲಜಾ ಮುರಳೀಧರ, ಡಾ. ರಾಜೇಂದ್ರ, ಡಾ. ಷೆನೋಯ್, ಡಾ. ವಿವೇಕ್ ಮತ್ತು ಇತರರು ಉಪಸ್ಥಿತರಿದ್ದರು. ಡಾ. ಸೌಮ್ಯ ಸ್ವಾಗತಿಸಿದರು. ಡಾ. ಅನುಷಾ ವಂದಿಸಿದರು.