ಪಾಲಿಬೆಟ್ಟ, ಫೆ. ೫: ವೀರಗಾಥ ೩.೦ ರಾಷ್ಟçಮಟ್ಟದ ಡ್ರಾಯಿಂಗ್ ಆನ್‌ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕದಿಂದ ೩ ವಿದ್ಯಾರ್ಥಿಗಳು ವಿಜೇತರಾಗಿದ್ದು, ಮೂವರಲ್ಲಿ ಕೊಡಗು ಜಿಲ್ಲೆಯ, ವೀರಾಜಪೇಟೆ ತಾಲೂಕು, ಪಾಲಿಬೆಟ್ಟ ಲೂರ್ಡ್ಸ್ ಹಿಲ್ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿ ರೋಶ್ನಿ ಅವರು ಒಬ್ಬರಾಗಿರುತ್ತಾಳೆ. ನವದೆಹಲಿ ಯಲ್ಲಿ ಜನವರಿ ೨೫ ರಂದು ನಡೆದ ವೀರಗಾಥ ಶೌರ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರೋಶ್ನಿಯವರಿಗೆ ವೀರಗಾಥ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದರು.