ಮಡಿಕೇರಿ, ಫೆ. ೧: ಅಲ್ಲಿ ವೇದಿಕೆ ಇರಲಿಲ್ಲ.. ಗಂಟೆಗಟ್ಟಲೆ ಭಾಷಣ ಇರಲಿಲ್ಲ..ಹಾರತುರಾಯಿಗಳಿರಲಿಲ್ಲ.. ಎಲ್ಲರೂ ನೆಲಹಾಸಿನಲ್ಲಿ ಕುಳಿತು ಎರಡೂವರೆ ಗಂಟೆ ಕಾಲ ಗಾನಸುಧೆಯನ್ನು ಸವಿದ ಕಾರ್ಯಕ್ರಮ ಅದಾಗಿತ್ತು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್, ಕೊಡಗು ಜಾನಪದ ಪರಿಷತ್ ಮತ್ತು ಕೊಡಗು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಆಯೋಜಿತ ಮಹಾತ್ಮ ಗಾಂಧೀಜಿಗೆ ಗಾನನಮನ ಕಾರ್ಯಕ್ರಮ ನಗರದ ಗಾಂಧಿ ಭವನದಲ್ಲಿ ಅರ್ಥಪೂರ್ಣವಾಗಿ ಜರುಗಿತು.
ಮಡಿಕೇರಿಯ ೨೨ ಗಾಯಕ, ಗಾಯಕಿಯರು ಗಾನ ನಮನದಲ್ಲಿ ಪಾಲ್ಗೊಂಡು ದೇಶಭಕ್ತಿಗೀತೆ, ಕೀರ್ತನೆ, ಭಜನೆ, ತತ್ಪಪದಗಳನ್ನು ಹಾಡಿದ್ದು ವಿಶೇಷವಾಗಿತ್ತು
ಮಡಿಕೇರಿಯ ಶೃತಿ ಲಯ ತಂಡದ ವೀಣಾ ಹೊಳ್ಳ, ಲಕ್ಷಿö್ಮ ಈಶ್ವರ ಭಟ್, ಮಮತಾಶಾಸ್ತಿç, ತನುಶ್ರೀ, ಸ್ವಾತಿ ಅರುಣ್, ಸವಿತಾ ಗುರುಪ್ರಸಾದ್, ಆರತಿ, ಸುಧಾ ಎಸ್. ಪ್ರಸಾದ್, ವಿಜಯ ವಿನಾಯಕ ಭಜನಾ ಮಂಡಳಿಯ ಗಾಯಕಿಯರಾದ ಅರವಿಂದ್ ಅಣ್ಣಪ್ಪ, ಮೀರಾ, ಶಾಂತಿ ಅಚ್ಚಯ್ಯ, ಪ್ರೇಮ ರಾಘವಯ್ಯ, ವಿಜಯ ಗೋಪಾಲಕೃಷ್ಣ ಭಟ್, ವೇದಾಶೆಟ್ಟಿ, ಭಕ್ತಿಗೀತೆಗಳು, ಕೀರ್ತನೆಗಳನ್ನು ಹಾಡಿದರೆ, ಜಿ. ಚಿದ್ವಿಲಾಸ್, ಸಂಧ್ಯಾ ಚಿದ್ವಿಲಾಸ್, ವಂದನಾ ಪೊನ್ನಪ್ಪ, ಚಿತ್ರಾ ನಂಜಪ್ಪ, ಎ. ಹೇಮಾನಿ, ಮಂಜುಳ ರಾಮಕೃಷ್ಣ ಭಟ್, ದೇಶಭಕ್ತಿ ಗೀತೆಗಳನ್ನು ಹಾಡಿದರು. ಬಿ.ಜಿ. ಅನಂತಶಯನ, ಗೀತಾ ಸಂಪತ್ ಕುಮಾರ್, ಶಾಂತಿ ಅಚ್ಚಯ್ಯ, ಜಯಲಕ್ಷಿö್ಮ ಕೆ, ಚಿತ್ರಾ ಆರ್ಯನ್, ನಾಡು, ನುಡಿ ಸಂಸ್ಕೃತಿ ಬಿಂಬಿಸುವ ಹಾಡು ಹೇಳಿದರು. ಕಗ್ಗದ ಸಾಲಿನ ಮೂಲಕ ಎಸ್.ಐ. ಮುನೀರ್ ಅಹಮ್ಮದ್ ಗಮನಸೆಳೆದರೆ, ಯುವಗಾಯಕ, ಗಾಯಕಿಯರಾದ ಅಮೃತ್ ರಾಜ್, ಅನಿತ್ ರಾಜ್, ಗಾಯತ್ರಿ ಚೆರಿಯಮನೆ, ಸುಮನಾ ಶ್ರೀಹರಿ, ಭಾವಗೀತೆ ಹಾಡಿದರು. ಪುಟಾಣಿಗಳಾದ ಸುಮೇಧಾ ರಾವ್, ಮಿನುಗು ಎಸ್. ಭಜನೆಯ ಮೂಲಕ ಗಮನ ಸೆಳೆದರು.
ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ, ನಗರದ ಗಾಯಕ, ಗಾಯಕಿಯರನ್ನು ಒಟ್ಟುಗೂಡಿಸಿ ವಿಭಿನ್ನ ರೀತಿಯ ಗಾಯನ ಕಾರ್ಯಕ್ರಮ ಆಯೋಜಿಸುವ ಮೂಲಕ ಹೊಸದೊಂದು ಕಾರ್ಯಕ್ರಮಕ್ಕೆ ತಾಲೂಕು ಜಾನಪದ ಪರಿಷತ್ ನಾಂದಿ ಹಾಡಿದೆ. ಇಂಥ ಪ್ರಯತ್ನಗಳು ಭವಿಷ್ಯದಲ್ಲಿಯೂ ವಿವಿಧ ಸಂಘ ಸಂಸ್ಥೆಗಳಿAದ ಮುಂದುವರೆಯAತಾಗಬೇಕು ಎಂದು ಆಶಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ನಗರಸಭಾಧ್ಯಕ್ಷೆ ಅನಿತಾಪೂವಯ್ಯ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ, ಸಹಾಯಕ ಗವರ್ನರ್ ದೇವಣಿರ ತಿಲಕ್, ನಿರ್ದೇಶಕ ಜಿ. ಆರ್.ರವಿಶಂಕರ್, ರೋಟರಿ ವುಡ್ಸ್ನ ವಲಯ ಸೇನಾನಿ ಸಂಪತ್ ಕುಮಾರ್, ನಿರ್ದೇಶಕಿ ಪದ್ಮಗಿರಿ, ಕೊಡಗು ವಿದ್ಯಾಲಯದ ವ್ಯವಸ್ಥಾಪಕ ರವಿ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಪ್ರಮುಖರಾದ ಟಿ.ಪಿ. ರಮೇಶ್, ನವೀನ್ ಅಂಬೆಕಲ್, ಸ್ಕೌಟ್ ಮತ್ತು ಗೈಡ್ಸ್ನ ಜಿಲ್ಲಾ ಆಯುಕ್ತ ಕೆ.ಟಿ. ಬೇಬಿ ಮ್ಯಾಥ್ಯು, ಇನ್ನರ್ ವೀಲ್ ಸದಸ್ಯೆಯರಾದ ಗೌರಿ ಶಿವಪ್ರಸಾದ್, ಮಲ್ಲಿಗೆ ಪೈ, ಸವಿತಾಭಟ್, ದಸರಾ ಸಾಂಸ್ಕೃತಿಕ ಸಮಿತಿ ಸದಸ್ಯ ಕುಡೆಕಲ್ ಸಂತೋಷ್, ಮಡಿಕೇರಿ ತಾಲೂಕು ಯುವ ಜಾನಪದ ಬಳಗದ ನಿರ್ದೇಶಕ ಕೌಸರ್, ಕೊಡಗು ಜಾನಪದ ಪರಿಷತ್ ಸದಸ್ಯರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಜಾನಪದ ಪರಿಷತ್ ನಿರ್ದೇಶಕಿ ಕೆ.ಜಯಲಕ್ಷಿö್ಮ ನಿರೂಪಿಸಿ, ನಿರ್ದೇಶಕಿ ವೀಣಾಕ್ಷಿ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ವಿ.ಟಿ. ಶ್ರೀನಿವಾಸ್ ನಿಧನಕ್ಕೆ ಮೌನಾಚರಣೆ ಮೂಲಕ ಕಲಾಪ್ರೇಮಿಗಳು ಸಂತಾಪ ಸೂಚಿಸಿದರು.