ಮುಳ್ಳೂರು, ಫೆ. ೧: ಸಮೀಪದ ಹಂಡ್ಲಿ ಗ್ರಾ.ಪಂ.ಗೆ ಸೇರಿದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆಯು ಜ. ೨೪ ರಿಂದ ಪ್ರಾರಂಭಗೊAಡಿದೆ. ಜಾತ್ರಾ ಸಮಿತಿಯಿಂದ ೮೦ನೇ ವರ್ಷದ ಜಾನುವಾರು ಜಾತ್ರೆ ನಡೆಯುತ್ತಿದೆ ಜಾತ್ರೆಯಲ್ಲಿ ಜಾನುವಾರುಗಳು ಸೇರದಿದ್ದರೂ ಜನರನ್ನು ಆಕರ್ಷಿಸುವ ಸಲುವಾಗಿ ಜಾತ್ರಾ ಸಮಿತಿಯವರು ಜಯದೇವ ಜಾತ್ರಾ ವೇದಿಕೆಯಲ್ಲಿ ಪ್ರತಿದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ.
ಈಗಾUಲೇ ೨ ದಿನದಿಂದ ರಾತ್ರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ. ಬುಧವಾರ ರಾತ್ರಿ ಜಯದೇವ ಜಾತ್ರಾ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶನಿವಾರಸಂತೆಯ ‘ಭರತ್ಯಂ ನಾಟ್ಯ ನಿಲಯಂ’ ನಾಟ್ಯ ತಂಡದ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಿದರು. ಶನಿವಾರಸಂತೆಯ ವಿವಿಧ ಶಾಲೆಯ ವಿದ್ಯಾರ್ಥಿಗಳು ಭರತ್ಯಂ ನಾಟ್ಯ ನಿಲಯಂ ತಂಡದಲ್ಲಿದ್ದು ಈ ಮೂಲಕ ಬುಧವಾರ ನಡೆದ ಭರತನಾಟ್ಯ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಮ್ಮ ಭರತನಾಟ್ಯ ನೃತ್ಯ ಪ್ರದರ್ಶನದಲ್ಲಿ ನೆರೆದಿದ್ದ ಪ್ರೇಕ್ಷಕರ ಕಣ್ಮನ ಸೆಳೆದರು. ತಂಡದ ನೃತ್ಯ ಶಿಕ್ಷಕಿ ಜಹಾನ್ವಿ ಆಚಾರ್ಯ ಮತ್ತು ಸಂಗೀತ ಶಿಕ್ಷಕಿ ಗಾನವಿ ಆಚಾರ್ಯ ಅವರುಗಳÀ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಎಚ್.ಎಂ.ವಿನಯ್, ಉಪಾಧ್ಯಕ್ಷ ವೀರೇಂದ್ರ, ಕಾರ್ಯದರ್ಶಿ ಬಸವರಾಜು, ಉಪ ಕಾರ್ಯದರ್ಶಿ ಚೈತ್ರ, ಹಂಡ್ಲಿ ಗ್ರಾ.ಪಂ.ಅಧ್ಯಕ್ಷೆ ಸುಧಾ ಈರೇಶ್, ಉಪಾಧ್ಯಕ್ಷ ಅಶೋಕ್, ಸದಸ್ಯರಾದ ಮಹಾದೇವಿ, ಸುವರ್ಣ, ರೂಪ, ಬಸವಯ್ಯ, ಉಷಾ ಮುಂತಾದವರಿದ್ದರು.