ಮಡಿಕೇರಿ, ಫೆ. ೧: ಇತ್ತೀಚೆಗೆ ನಡೆದ ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ಪಂದ್ಯಾಟದಲ್ಲಿ ಶಾಸಕ ಡಾ. ಮಂಥರ್ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಸ್ಥಾಪಕ ದರ್ಶನ್ ಸುಕುಮಾರ್, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಸಜೀಶ್ ಚೆನ್ನಯ್ಯನಕೋಟೆ, ರತೀಶ್ ಚೆನ್ನಯ್ಯನಕೋಟೆ, ಬಾಲಕೃಷ್ಣ ಕೆಪಿ, ವಿವೇಕಾನಂದ ಮರಗೋಡು ಇದ್ದರು.