ಮಡಿಕೇರಿ, ಜ. ೩೧: ಮೈಸೂರಿನ ಬೋಗಾದಿ ರಸ್ತೆಯಲ್ಲಿ ಶನಿವಾರ ರಾತ್ರಿ ಜನತೆಗೆ ಯಾವುದೇ ಮಾಹಿತಿ ಇಲ್ಲದಂತೆ ಅವೈಜ್ಞಾನಿಕವಾಗಿ ರಾತೋರಾತ್ರಿ ನಿರ್ಮಿಸಿದ್ದ ರೋಡ್ ಹಂಪ್ನಿAದಾಗಿ ಬೈಕ್ ಅವಘಡಗೊಂಡು ಗಾಯಗೊಂಡಿದ್ದ ಕೊಡಗಿನ ಯುವಕ ಬಲ್ಲಡಿಚಂಡ ಶಿವನ್ (೨೩) ಕಳೆದ ರಾತ್ರಿ ಮೃತಪಟ್ಟಿದ್ದಾರೆ. ರೋಡ್ಹಂಪ್ನ ಅರಿವಿಲ್ಲದೆ ಬೈಕ್ ಚಾಲಿಸುತ್ತಿದ್ದ ಸಂದರ್ಭ ಶಿವನ್ ರಸ್ತೆಗೆ ಬಿದ್ದು ಗಂಭೀರ ಸ್ಥಿತಿಯಲ್ಲಿ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ ಇವರು ಮೃತಪಟ್ಟಿದ್ದಾರೆ.
ಮೈಸೂರು ನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತಗೊಂಡಿದೆ. ಶನಿವಾರ ರಾತ್ರಿ ಏಕಾಏಕಿ ಯಾವುದೇ ಮಾಹಿತಿ ಇಲ್ಲದೆ ಈ ಹಂಪ್ ನಿರ್ಮಿಸಿದ ಪರಿಣಾಮ ಈ ಸ್ಥಳದಲ್ಲಿ ಕೇವಲ ೧೨ ಗಂಟೆಗಳ ಅವಧಿಯಲ್ಲಿ ೨೦ಕ್ಕೂ ಅಧಿಕ ಅವಘಡಗಳು ನಡೆದುಹೋಗಿತ್ತು. ಈ ಘಟನೆಗಳಲ್ಲಿ ನಿನ್ನೆ ಇಬ್ಬರು ಮೃತಪಟ್ಟಿದ್ದರೆ, ಗಾಯಗೊಂಡಿದ್ದ ಮತ್ತೋರ್ವ ಯುವಕ ಕೊಡಗಿನವರಾದ ಕಂಡAಗಾಲದ ಶಿವನ್ ಕಳೆದ ರಾತ್ರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಖಾಸಗಿ ಕಂಪೆನಿಯೊAದರಲ್ಲಿ ಉದ್ಯೋಗಿಯಾಗಿದ್ದ ಕಂಡAಗಾಲದ ನಿವಾಸಿ ದಿವಂಗತ ಬಿದ್ದಪ್ಪ ಹಾಗೂ ಗೀತಾ ದಂಪತಿಯ ಪುತ್ರ ಶಿವನ್ ಸರಸ್ವತಿಪುರಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಭಾನುವಾರ ಬೆಳಿಗ್ಗೆ ೬.೩೦ರ ಸುಮಾರಿಗೆ ಬೈಕ್ನಲ್ಲಿ ಬೋಗಾದಿ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭ ರಾತೋರಾತ್ರಿ ನಿರ್ಮಿಸಲಾಗಿದ್ದ ರೋಡ್ ಹಂಪ್ನ ಅರಿವಿಲ್ಲದೆ ಬೈಕ್ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಅಪ್ಪಳಿಸಿ ಇವರು ಗಾಯಗೊಂಡಿದ್ದರು. ನಗರಪಾಲಿಕೆಯ ನಿರ್ಲಕ್ಷö್ಯದ ನೀತಿ ಹಾಗೂ ಅವೈಜ್ಞಾನಿಕವಾದ ರೋಡ್ ಹಂಪ್ನಿAದಾಗಿಯೇ ಈ ದುರ್ಘಟನೆ ನಡೆದಿರುವ ಬಗ್ಗೆ ಇದೀಗ ತೀವ್ರ ಆಕ್ಷೇಪ ವ್ಯಕ್ತಗೊಳ್ಳುತ್ತಿದೆ. ಶಿವನ್ ಸೇರಿದಂತೆ ಒಟ್ಟು ಮೂವರು ಯುವಕರು ರಸ್ತೆ ಹಂಪ್ನ ಕಾರಣದಿಂದಾಗಿ ಮೃತಪಟ್ಟಿದ್ದು, ಈ ಸಾವಿಗೆ ಯಾರು ಹೊಣೆ ಎಂಬ ಆಕ್ರೋಶ ಕೇಳಿಬಂದಿದೆ. ಶಿವನ್ ಮೃತದೇಹವನ್ನು ಬುಧವಾರ ಕಂಡAಗಾಲಕ್ಕೆ ತರಲಾಗಿದ್ದು, ಅಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ದುರಂತದ ಬಗ್ಗೆ ಜಿಲ್ಲೆಯ ಜನರೂ ಕಂಬನಿ ಮಿಡಿದಿದ್ದಾರೆ.