ಮಡಿಕೇರಿ, ಜ. ೩೧: ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗುವದರೊಂದಿಗೆ ಪ್ರತಿಷ್ಠಿತ ಆಸ್ಟೆçÃಲಿಯನ್ ಗ್ರಾö್ಯಂಡ್ ಸ್ಲಾಮ್ ಪ್ರಶಸ್ತಿ ಹಾಗೂ ವಿಶ್ವ ನಂ.೧ ಸ್ಥಾನ ಅಲಂಕರಿಸಿ ದೇಶಕ್ಕೆ ಕೀರ್ತಿ ತಂದಿರುವ ಕೊಡಗಿನವರಾದ ಟೆನ್ನಿಸ್ ತಾರೆ ಮಚ್ಚಂಡ ರೋಹನ್ ಬೋಪಣ್ಣ ಅವರಿಗೆ ಅಖಿಲ ಕೊಡವ ಸಮಾಜ ಗೌರವ ಸದಸ್ಯತ್ವ ನೀಡುವ ಮೂಲಕ ಅಭಿನಂದಿಸಿದೆ. ಇಂದು ಅ.ಕೊ.ಸ. ಅಧ್ಯಕ್ಷರಾದ ಪರದಂಡ ಸುಬ್ರಮಣಿ ಕಾವೇರಪ್ಪ, ಕಾರ್ಯದರ್ಶಿ ಕೀತಿಯಂಡ ವಿಜಯ ಕುಮಾರ್, ಜಂಟಿ ಕಾರ್ಯದರ್ಶಿ ಮೂವೆರ ರೇಖಾ ಪ್ರಕಾಶ್, ನಂದೇಟಿರ ರಾಜಾ ಮಾದಪ್ಪ ಅವರುಗಳು ಗರಗಂದೂರಿನಲ್ಲಿರುವ ರೋಹನ್ ಅವರ ನಿವಾಸಕ್ಕೆ ತೆರಳಿ ಅವರ ಪೋಷಕರಾದ ಬೋಪಣ್ಣ ಹಾಗೂ ಮಲ್ಲಿಕಾ ದಂಪತಿಯನ್ನು ಸನ್ಮಾನಿಸಿ ಪ್ರಶಂಸನಾ ಪತ್ರದೊಂದಿಗೆ ಗೌರವ ಸದಸ್ಯತ್ವದ ಮೂಲಕ ಗೌರವಾರ್ಪಣೆ ಸಲ್ಲಿಸಿದರು.

ಮಡಿಕೇರಿಯಲ್ಲಿ ರಸ್ತೆಗೆ ಹೆಸರಿಡಲು ಮನವಿ

ಪದ್ಮಶ್ರಿ ಪ್ರಶಸ್ತಿ ಹಾಗೂ ವಿಶ್ವ ನಂ.೧ ಸ್ಥಾನದೊಂದಿಗೆ ಆಸ್ಟೆçÃಲಿಯನ್ ಓಪನ್ ವಿಜೇತರಾಗಿ ದೇಶದ ಕೀರ್ತಿ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ರಸ್ತೆಯೊಂದಕ್ಕೆ ರೋಹನ್ ಅವರ ಹೆಸರನ್ನು ನಾಮಕರಣ ಮಾಡುವಂತೆಯೂ ಅ.ಕೊ.ಸ. ಪ್ರಮುಖರು ಮಡಿಕೇರಿ ನಗರಸಭೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರನ್ನು ಭೇಟಿಯಾಗಿ ಈ ಬಗ್ಗೆ ಪ್ರಮುಖರು ಮನವಿ ಸಲ್ಲಿಸಿದರು. ಈ ಸಂದರ್ಭ ನಗರಸಭಾ ಸದಸ್ಯರಾದ ಅರುಣ್ ಶೆಟ್ಟಿ ಹಾಗೂ ಬಾಳೆಯಡ ಸಬಿತ ಅವರುಗಳು ಹಾಜರಿದ್ದರು.