ಗೋಣಿಕೊಪ್ಪ ವರದಿ, ಜ. ೩೧: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ರಾಜ್ಯ ಪ್ರಶಸ್ತಿಗೆ ಜಿಲ್ಲೆಯ ನಾಲ್ವರು ಪತ್ರಕರ್ತರು ಭಾಜನರಾಗಿದ್ದಾರೆ.

ದಾವಣಗೆರೆಯಲ್ಲಿ ಫೆ. ೩ ಮತ್ತು ೪ ರಂದು ನಡೆಯಲಿರುವ ೩೮ ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ಪ್ರತಿನಿಧಿ ಪತ್ರಿಕೆ ಜಿಲ್ಲಾ ವರದಿ ಗಾರ ಸಣ್ಣುವಂಡ ಕಿಶೋರ್ ನಾಚಪ್ಪ ಅವರಿಗೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ‘ಕಳತ್ಮಾಡಿನಲ್ಲಿ ಮದ್ಯ ಮಾರಾಟವಿಲ್ಲ’ ಎಂಬ ವರದಿಗೆ ಜಿ. ನಾರಾಯಣ ಸ್ವಾಮಿ ಅವರ ಅತ್ಯುತ್ತಮ ಗ್ರಾಮಾಂತರ ವರದಿಗೆ ಪ್ರಶಸ್ತಿ ಲಭಿಸಿದೆ.

ತಲೆಗೆ ಗುಂಡು ಬಿದ್ದರೂ ಬದುಕಿ ಬಂದ ಶೌರ್ಯ ಚಕ್ರ ವಿಜೇತ ಮಹೇಶ್ ಎಂಬ ವರದಿಗೆ ರಿಪಬ್ಲಿಕ್ ಕನ್ನಡ ಟಿವಿ ಕೊಡಗು ವರದಿಗಾರ ಬಾಚರಣಿಯಂಡ ಅನು ಕಾರ್ಯಪ್ಪ ಗಾರ ಸಣ್ಣುವಂಡ ಕಿಶೋರ್ ನಾಚಪ್ಪ ಅವರಿಗೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ‘ಕಳತ್ಮಾಡಿನಲ್ಲಿ ಮದ್ಯ ಮಾರಾಟವಿಲ್ಲ’ ಎಂಬ ವರದಿಗೆ ಜಿ. ನಾರಾಯಣ ಸ್ವಾಮಿ ಅವರ ಅತ್ಯುತ್ತಮ ಗ್ರಾಮಾಂತರ ವರದಿಗೆ ಪ್ರಶಸ್ತಿ ಲಭಿಸಿದೆ.

ತಲೆಗೆ ಗುಂಡು ಬಿದ್ದರೂ ಬದುಕಿ ಬಂದ ಶೌರ್ಯ ಚಕ್ರ ವಿಜೇತ ಮಹೇಶ್ ಎಂಬ ವರದಿಗೆ ರಿಪಬ್ಲಿಕ್ ಕನ್ನಡ ಟಿವಿ ಕೊಡಗು ವರದಿಗಾರ ಬಾಚರಣಿಯಂಡ ಅನು ಕಾರ್ಯಪ್ಪ ಅವರಿಗೆÀ ಸಣ್ಣುವಂಡ ಶ್ರೀನಿವಾಸ್ ಚೆಂಗಪ್ಪ ಜ್ಞಾಪಕಾರ್ಥ ಅತ್ಯುತ್ತಮ ಸೇನಾ ವರದಿ ಪ್ರಶಸ್ತಿ ಲಭಿಸಿದೆ. ಟಿವಿ ಮಾಧ್ಯಮ ನಿರ್ವಹಣೆಗೆ ನೀಡುವ ರವಿ ಬೆಳಗೆರೆ ಪ್ರಶಸ್ತಿಗೆ ಟಿವಿ೯ನ ಪಂಜೇರೀರ ಜಗದೀಶ್ ಬೆಳ್ಯಪ್ಪ, ಕೆ.ಎನ್. ಸುಬ್ರಮಣ್ಯ ಪ್ರಶಸ್ತಿಗೆ ಪ್ರಾಜೆಕ್ಟ್ ಚೀತಾಕೋರ್ ತಂಡದಲ್ಲಿ ಕೊಡಗಿನ ವನ್ಯಜೀವಿ ಶಾಸ್ತçಜ್ಞ ಎಂಬ ವರದಿಗೆ ಸ್ಟಾರ್ ಆಫ್ ಮೈಸೂರು ವರದಿಗಾರ ಪಿ. ವಿ. ಅಕ್ಷಯ್ ಭಾಜನರಾಗಿದ್ದಾರೆ.